ಗದಗ-ಯಳವಗಿ ರೈಲ್ವೆ ಯೋಜನೆಗೆ 600 ಕೋಟಿ ಬಿಡುಗಡೆ : ಸಿಎಂ ಬೊಮ್ಮಾಯಿ

Gadag : ಗದಗ-ಯಳವಗಿ ರೈಲ್ವೆ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಬಿಜೆಪಿ ಸರ್ಕಾರ(CM To Gadag Railway) ನಿರ್ಧರಿಸಿದ್ದು, ಇದಕ್ಕಾಗಿ ರಾಜ್ಯ ಆಡಳಿತವು ತನ್ನ ಪಾಲಿನ 600 ಕೋಟಿ ರೂಪಾಯಿಗಳನ್ನು ನೀಡಲಿದ್ದು, ಈ ರೈಲು ಶಿರಟ್ಟಿ ಮೂಲಕ ಹಾದು ಹೋಗಲು ಪ್ರಯತ್ನಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.

ಗದಗ(CM To Gadag Railway) ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಬೊಮ್ಮಾಯಿ ಅವರು, ತಮಗೊಂಡ ಯೋಜನೆಗೆ ಶೀಘ್ರ ಮಂಜೂರಾತಿ ನೀಡಿ,

https://youtu.be/49tPYYDsOhY

ಜಾಲವಾಡಗಿ ನೀರಾವರಿ ಯೋಜನೆಗೆ ಶೀಘ್ರ ಚಾಲನೆ ನೀಡಲಾಗುವುದು. ಶಿರಹಟ್ಟಿ ಹಾಗೂ ಮುಂಡರಗಿಯನ್ನು ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಲಾಗುವುದು.

ಇದನ್ನೂ ಓದಿ : https://vijayatimes.com/daughter-killed-by-father/

ಒಂದು ತಿಂಗಳೊಳಗೆ ಎಲ್ಲ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಒಂದು ತಿಂಗಳಲ್ಲಿ ತಾಂಡಾದ ಪ್ರತಿ ಮನೆಗೆ ಹಕ್ಕುಪತ್ರ ವಿತರಿಸಿ, ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಮಳೆಯಿಂದ ಬೆಳೆ ನಷ್ಟವಾಗಿರುವುದಕ್ಕೆ ಗದಗ ಜಿಲ್ಲೆಯ 1.2 ಲಕ್ಷ ರೈತರಿಗೆ ರಾಜ್ಯ ಸರ್ಕಾರ ಈಗಾಗಲೇ 209 ಕೋಟಿ ಇನ್ಪುಟ್ ಸಬ್ಸಿಡಿ(Input Subsidy) ವಿತರಿಸಿದೆ.

ಇನ್ನು ಶಿರಹಟ್ಟಿಯ ಕನಕದಾಸರ ಸಭಾಂಗಣಕ್ಕೆ 1 ಕೋಟಿ ರೂಪಾಯಿಗಳ ಬೇಡಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yedurappa), ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಬಿ.ಸಿ.ಪಾಟೀಲ್, ಬಿ.ಶ್ರೀರಾಮುಲು, ಸಂಸದ ಶಿವಕುಮಾರ್ ಉದಾಸಿ ಉಪಸ್ಥಿತರಿದ್ದರು.

ಇದನ್ನೂ ಓದಿ : https://vijayatimes.com/rashmika-against-trollers/

ಇನ್ನು ಗದಗ-ಯಳವಗಿ ರೈಲ್ವೆ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ(Central Government) ಮತ್ತು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಅನುದಾನ ಒದಗಿಸಲಿವೆ.

ಆದರೆ ರಾಜ್ಯ ಸರ್ಕಾರ ಸಂಪೂರ್ಣ ಭೂಮಿಯನ್ನು ಒದಗಿಸಬೇಕಿದ್ದು, ಈ ಕಾರಣದಿಂದ ಗದಗ-ಯಳವಗಿ ರೈಲ್ವೆ ಯೋಜನೆಯನ್ನು ಜಾರಿಗೆ ತರಲು ವಿಳಂಬವಾಗುತ್ತಿದೆ.

Exit mobile version