ಡಾ. ಕೆ ಸುಧಾಕರ್ಗೆ ಖಡಕ್ ವಾರ್ನಿಂಗ್ ನೀಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು, ಮೇ. 03: ಕಳೆದ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಅದರ ಬೆನ್ನಲ್ಲೇ 24 ರೋಗಿಗಳು ಸಾವನ್ನಪ್ಪಿದ್ದಾರೆ. ಈ ಹಿನ್ನಲೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಚಾಮರಾಜನಗರ ಜಿಲ್ಲಾಧಿಕಾರಿ ಮಾತನನಾಡಿ ಜಿಲ್ಲೆಯಲ್ಲಿ ನಡೆದ ದುರ್ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಳಿಕ ತಮ್ಮ ನಿವಾಸಕ್ಕೆ ಬರುವಂತೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ಗೆ ಸಿಎಂ ಬುಲಾವ್ ನೀಡಿದರು ತಮ್ಮ ನಿವಾಸದಲ್ಲಿ ಸುಧಾಕರ್ ಹಾಗೂ ಡಿಸಿಎಂ ಲಕ್ಷ್ಮಣ್ ಜೊತೆಗೆ ಯಡಿಯೂರಪ್ಪ ಸಭೆ ನಡೆಸಿದ್ದು, ಈ ವೇಳೆ ಅವರು, ಆಕ್ಸಿಜನ್ ಕೊರತೆ ಏನು ಮಾಡುತ್ತಿದ್ದೀರಿ ನೀವು’ ಎಂದು ಸುಧಾಕರ್‌ಗೆ ಪ್ರಶ್ನಿಸಿದ್ದು, ಇನ್ನು ಆಕ್ಸಿಜನ್ ಸಿಲಿಂಡರ್‌ ಬಗ್ಗೆ, ಅಂಕಿ ಅಂಶ ಕೊಡಿ ಎಂದಾಗ ಸುಧಾಕರ್ ತಬ್ಬಿಬ್ಬಾದರು ಎನ್ನಲಾಗಿದೆ.

ತಕ್ಷಣವೇ ಚಾಮರಾಜನಗರ ಸೇರಿದಂತೆ ರಾಜದ ಎಲ್ಲಾ ಸಮಸ್ಯೆಗಳು ಸಂಜೆಯೊಳಗೆ ಬಗೆಹರಿಯಬೇಕು. ಇಲ್ಲವಾದರೆ ನಡೆಯುವುದೇ ಬೇರೆ ಎಂದು ಸುಧಾಕರ್‌ಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

ಇನ್ನು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಜಿಲ್ಲೆಯತ್ತ ಹೊರಟಿದ್ದಾರೆ. ಮಧ್ಯಾಹ್ನದ ವೇಳೆಗೆ ಚಾಮರಾಜನಗರಕ್ಕೆ ತಲುಪಿ, ಅಲ್ಲಿನ ಸ್ಥಿತಿಗತಿಗಳನ್ನು ಅವಲೋಕಿಸಲು ಮುಂದಾಗಿದ್ದಾರೆ.

Exit mobile version