Bengaluru: ಕರ್ನಾಟಕದಲ್ಲಿ (Complaint against Siddaramaiah Govt) ಕೋಮುವಾದ ನಿಗ್ರಹಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಸಿಎಂ ಸಿದ್ದರಾಮಯ್ಯ
(Siddaramaiah) ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ, ಇಸ್ರೇಲ್ಹಾಗೂ ಪ್ಯಾಲೆಸ್ಟೀನ್ ವಿಚಾರವಾಗಿ ಪ್ರತಿಭಟನೆ, ಹೋರಾಟ ಹಾಗೂ ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಲು ಅವಕಾಶ
ನೀಡುತ್ತಿಲ್ಲ ಎಂದು ಆರೋಪಿಸಿ ಪ್ರಗತಿಪರ ಬರಹಗಾರರು, ಸಾಹಿತಿಗಳು, ಹೋರಾಟಗಾರರು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ (Sonia Gandhi) ಪತ್ರವನ್ನು ಬರೆದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರದ ಅವಧಿಯಲ್ಲಿ ಪರಿಸ್ಥಿತಿ ಹೇಗಿದೆ? ಹಾಗೂ ಪಕ್ಷದ ನಿಲುವು ಸರ್ಕಾರದ ನಿಲುವಿನಲ್ಲಿ ಹೇಗೆ ಭಿನ್ನತೆ ಇದೆ ಎಂಬುವುದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು,
ಆನ್‌ಲೈನ್ ಪಿಟಿಷನ್ (Online Petition) ಮೂಲಕ ಸುದೀರ್ಘ ಪತ್ರವನ್ನು ಬರೆದಿರುವುದಲ್ಲದೆ ಈವರೆಗೆ ಸುಮಾರು 400 ಸಾಹಿತಿ, ಬರಹಗಾರರು ಹಾಗೂ ಹೋರಾಟಗಾರರು ಅದಕ್ಕೆ ಸಹಿ ಹಾಕಿದ್ದಾರೆ.
ಪತ್ರದಲ್ಲಿ ಏನಿದೆ?
ಬೆಂಗಳೂರು (Bengaluru), ರಾಜ್ಯ ರಾಜ್ಯದಲ್ಲಿ ಪ್ರತಿಭಟನೆ ಇಸ್ರೇಲ್- ಪ್ಯಾಲೆಸ್ಟೀನ್ (Palestine) ಯುದ್ಧದಲ್ಲಿ ಅಮಾಯಕ ನಾಗರೀಕರ ಸಾವು ಪ್ರತಿಭಟಿಸಿ ನಡೆಸುವುದನ್ನು ರಾಜ್ಯ ಸರ್ಕಾರ ಹತ್ತಿಕ್ಕುತ್ತಿದ್ದು,
ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ (FIR) ದಾಖಲು ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡಿದವರ ವಿರುದ್ಧ ಕ್ರಮ ಬಂಧನ ಆಗುತ್ತಿದೆ ವಿಚಾರ ಸಂಕಿರಣಗಳಿಗೆ ಸರ್ಕಾರ
ಅನುಮತಿ ನೀಡುತ್ತಿಲ್ಲ ಎಂದು (Complaint against Siddaramaiah Govt) ಆರೋಪಿಸಲಾಗಿದೆ.
ಕಾಂಗ್ರೆಸ್ ಪ್ಯಾಲೆಸ್ಟೀನ್ ಪರವಾಗಿ ಒಂದು ಕಡೆಯಲ್ಲಿ ನಿಲುವು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಅದಿನಾಯಕಿಯಾದ ಸೋನಿಯಾ ಗಾಂಧಿ ಇಂಗ್ಲಿಷ್ ದೈನಿಕದಲ್ಲಿ ‘ಮಾನವೀಯತೆ ಕಟಕಟೆಯಲ್ಲಿದೆ’ ಎಂಬ ತಲೆ
ಬರಹದಲ್ಲಿ ಸುದೀರ್ಘ ಲೇಖನ ಬರೆದಿದ್ದಾರೆ. ಇದರಲ್ಲಿ ಪ್ಯಾಲೆಸ್ಟೀನ್- ಇಸ್ರೇಲ್ (Israel) ಸಮಸ್ಯೆಯ ಪರಿಣಾಮ ಏನು? ಎಂದು ವಿವರಿಸಿದ್ದು, ಲೇಖನದಲ್ಲಿ ಪಾಲೆಸ್ತೀನ್ ಪರವಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪ್ಯಾಲೆಸ್ಟೀನ್ ಪರವಾಗಿ ಪ್ರತಿಭಟನಾಕಾರರು ವಿರುದ್ಧ ಪ್ರಕರಣ ಏಕೆ ದಾಖಲು ಮಾಡುತ್ತಿದೆ ಎಂದು ಪ್ರಶ್ನಿಸಲಾಗಿದ್ದು, ಇದರ ಜತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೋಮು
ಘಟನೆಗಳನ್ನು ನಿಗ್ರಹಿಸುವಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಅಲ್ಪಸಂಖ್ಯಾತರು ಮತ್ತು ದಲಿತರು ಅಸುರಕ್ಷತಾ ಭಾವದಿಂದ ಬದುಕುತ್ತಿದ್ದಾರೆ.
ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಿಲ್ಲ. ಇವೆಲ್ಲವೂ ಹಿಂದಿನ ಬಿಜೆಪಿ (BJP) ಸರ್ಕಾರ ರೀತಿಯಲ್ಲಿ ಮುಂದುವರಿದಿದೆ ಎಂದು ಹೇಳಿದ್ದು, ಸರ್ಕಾರ ಬದಲಾವಣೆ ಆಗಿದೆ ಹೊರತು ನಿಲುವುಗಳಲ್ಲಿ ಯಾವುದೇ
ಬದಲಾವಣೆ ಆಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರ ಕೋಮುವಾದವನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಿಲ್ಲ ಹಾಗೂ ಬಿಜೆಪಿಯ ಕೆಲವು ನಾಯಕರ ಜೊತೆಗೆ ಸಖ್ಯ ಇರುವುದರಿಂದ ಅವರ
ಆರ್ಥಿಕ ಹಾಗೂ ಧಾರ್ಮಿಕ ಭ್ರಷ್ಟಾಚಾರಗಳು ತನಿಖೆಗೆ ಒಳಪಡುತ್ತಿಲ್ಲ ಎಂದೂ ಆರೋಪಿಸಲಾಗಿದೆ.
ಸೋನಿಯಾ ಗಾಂಧಿಗೆ ಪತ್ರ ಬರೆದಿರುವ ವಿಚಾರವಾಗಿ ಮಾತನಾಡಿರುವ ಡಿವೈಎಫ್‌ಐ (DYFI) ಸಂಘಟನೆಯ ರಾಜ್ಯಾಧ್ಯಕ್ಷ ಮುನೀರ್ ಕಾಟಪಳ್ಳ (Muneer Katapalla) ‘ ಸಿದ್ದರಾಮಯ್ಯ ನೇತೃತ್ವದ
ಕಾಂಗ್ರೆಸ್ ಸರ್ಕಾರದ ಕುರಿತಾಗಿ ಸಾಹಿತಿಗಳು, ಬರಹಗಾರರು ಹಾಗೂ ಹೋರಾಟಗಾರರಿಗೆ ಅಪಾರ ನಿರೀಕ್ಷೆ ಇತ್ತು. ರಾಜ್ಯದಲ್ಲಿ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಸಿರುಟ್ಟಿಸುವ
ವಾತಾವರಣವಿತ್ತು. ಅದರಿಂದ ಬಿಡುಗಡೆ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ಸೋಲಿಸಲು ಎಲ್ಲರೂ ಶ್ರಮ ಹಾಕಿದ್ದಾರೆ. ಆದರೆ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಅವರೆಲ್ಲರ ನಿರೀಕ್ಷೆ ಕನಿಷ್ಠ ಮಟ್ಟದಲ್ಲೂ
ಈಡೇರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇಸ್ರೇಲ್- ಪ್ಯಾಲೆಸ್ಟೀನ್ ವಿಚಾರದಲ್ಲಿ ಸರ್ಕಾರದ ನಿಲುವು ಇಸ್ರೇಲ್ ಪರವಾಗಿದೆ ಎಂಬಂತೆ ಬಿಂಬಿತವಾಗುತ್ತಿದೆ. ಪ್ರತಿಭಟನೆ ಹೋರಾಟ ಬಿಡಿ, ಪ್ಯಾಲೆಸ್ಟೀನ್ ವಿಚಾರದಲ್ಲಿ ಸಾಮಾನ್ಯ ಚರ್ಚೆಯನ್ನು
ಆಯೋಜಿಸಲು ಅವಕಾಶ ಸಿಗುತ್ತಿಲ್ಲ. ಬಿಜೆಪಿ ಅವಧಿಯಲ್ಲಿ ಸಾಮಾನ್ಯ ಪ್ರತಿಭಟನೆಗಳಿಗೆ ಇದ್ದ ನಿರ್ಬಂಧ ಹಾಗೆಯೇ ಮುಂದುವರಿದಿದೆ ಎಂದು ಮುನೀರ್ ತಿಳಿಸಿದ್ದಾರೆ.
ಕೋಮುವಾದ ನಿಗ್ರಹಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಕರಾವಳಿಯಲ್ಲಿ ಅಸ್ತಿತ್ವದಲ್ಲಿದೆ ಎಂದು ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಇದೆಲ್ಲವನ್ನು ಎಐಸಿಸಿ
(AICC) ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಗಮನಕ್ಕೆ ತರಲು ಪತ್ರಬರೆದಿರುವ ನಡೆ ಸ್ವಾಗತಾರ್ಹ ಎಂದಿದ್ದಾರೆ.
ಇದನ್ನು ಓದಿ: ಹೈಕಮಾಂಡ್ ಸೂಚಿಸಿದರೆ ನಾನು ಸಿಎಂ ಆಗುತ್ತೇನೆ: ಪ್ರಿಯಾಂಕ್ ಖರ್ಗೆ
- ಭವ್ಯಶ್ರೀ ಆರ್.ಜೆ