ಕಾಂಗ್ರೆಸ್ ಪಟ್ಟಿ ಅಂತಿಮ ; ಈ ಬಾರಿ ಮುಸ್ಲಿಮರಿಗೆ ಕಡಿಮೆ ಟಿಕೆಟ್ ಸಾಧ್ಯತೆ..!

New Delhi : ಕಾಂಗ್ರೆಸ್ (Congress) ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಂತಿಮ ಸಭೆ ಸೇರಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಫೈನಲ್ ಮಾಡಿದೆ. ಮೂಲಗಳ ಪ್ರಕಾರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Assembly election) ಮುಸ್ಲಿ ಸಮುದಾಯಕ್ಕೆ ಕಡಿಮೆ (Congress Assembly election list) ಟಿಕೆಟ್ ನೀಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ನವದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವರು ಭಾಗಿಯಾಗಿದ್ದು,

ಈ ವೇಳೆ ರಾಜ್ಯ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಕಳಿಸಿದ ಹೆಸರುಗಳನ್ನು ಪರಿಶೀಲನೆ ನಡೆಸಿ, ಸರ್ವೇ ಆಧಾರದ ಮೇಲೆ ಟಿಕೆಟ್ ಫೈನಲ್ ಮಾಡಿದ್ದಾರೆ.

ಗೆಲ್ಲುವ ಅಭ್ಯರ್ಥಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದ್ದು, ಹೀಗಾಗಿಯೇ ಅನೇಕ ಕ್ಷೇತ್ರಗಳಲ್ಲಿ ಮುಸ್ಲಿ ಮುಖಂಡರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ. ಕಳೆದ ಬಾರಿ 17 ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಾಗಿತ್ತು.

ಆದರೆ ಈ ಬಾರಿ 12 ಕ್ಷೇತ್ರಗಳಲ್ಲಿ ಮಾತ್ರ ಮುಸ್ಲಿಮರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ : https://vijayatimes.com/ms-dhoni-new-look/

ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Sivakumar) ತಮ್ಮ ಬೆಂಬಲಿಗರ ಪರವಾಗಿ ಲಾಬಿ ಮಾಡಿದ್ದು, ಅಂತಿಮವಾಗಿ 130 ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ದವಾಗಿದ್ದು,

ನಾಲ್ವರು ಹಾಲಿ ಶಾಸಕರಾದ ಲಿಂಗಸೂರಿನ ಶಾಸಕ ಡಿಎಸ್ ಹುಲಗೇರಿ, ಕುಂದಗೋಳ ಶಾಸಕಿ ಕುಸುಮ ಶಿವಳ್ಳಿ,

ಪಾವಗಡ ಶಾಸಕ ವೆಂಕಟರಮಣಪ್ಪ (ವಯಸ್ಸಿನ ಕಾರಣಕ್ಕೆ) ಅಫ್ಜಲಪುರ – ಶಾಸಕ ಎಂ.ವೈ ಪಾಟೀಲ್ (ವಯಸ್ಸಿನ ಕಾರಣಕ್ಕೆ) ಟಿಕೆಟ್ ಕೈ ತಪ್ಪುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ವಿರುದ್ದ ಕೊಲೆ ಅರೋಪ ಹೊತ್ತು,

ಇದನ್ನೂ ಓದಿ : https://vijayatimes.com/ct-ravi-slams-congress/

ಸದ್ಯ ಬೇಲ್ ಮೇಲೆ ಹೊರಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು (Vinaya Kulkarni) ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಬೇರೆ ಪಕ್ಷಗಳಂದ ಬಂದಿರುವ

ಅರಸೀಕೆರೆ ಶಾಸಕ ಶಿವಲಿಂಗೇಗೌಡ (Shivalingegowda), ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಗುಬ್ಬಿವಾಸುಗೆ ಟಿಕೆಟ್(Congress Assembly election list) ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.

ಆದರೆ ಶಿವಲಿಂಗೇಗೌಡರನ್ನು ಹೊರತುಪಡಿಸಿ, ಉಳಿದವರಿಗೆ ಟಿಕೆಟ್ ನೀಡುವ ಪ್ರಸ್ತಾಪಕ್ಕೆ ಕೆಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ಧಾರೆ ಎನ್ನಲಾಗಿದೆ.

ಇನ್ನು ಪುಲಕೇಶಿನಗರದ ಟಿಕೆಟ್ಗಾಗಿ ಅಖಂಡ ಶ್ರೀನಿವಾಸಮೂರ್ತಿ ಪ್ರಸನ್ನಕುಮಾರ್ ನಡುವೆ, ರಾಜಾಜಿನಗರದ ಟಿಕೆಟ್ಗಾಗಿ ಪುಟ್ಟಣ್ಣ ಪುಟ್ಟರಾಜು ಪದ್ಮಾವತಿ ಮಧ್ಯೆ,

ತೀರ್ಥಹಳ್ಳಿ ಕಿಮ್ಮನೆ ರತ್ನಾಕರ್ ಮಂಜುನಾಥ್ಗೌ ನಡುವೆ, ಚಿತ್ರದುರ್ಗ ಟಿಕೆಟ್ಗಾಗಿ ರಘು ಆಚಾರ್ ವೀರೇಂದ್ರ ಪಪ್ಪಿ ಮಧ್ಯೆ ಮತ್ತು ಮುಳಬಾಗಿಲು ಟಿಕೆಟ್ಗಾಗಿ ನಾರಾಯಣಸ್ವಾಮಿ ಕೊತ್ತನೂರು ಮಂಜು ನಡುವೆ ಫೈಟ್ ಏರ್ಪಟ್ಟಿದೆ.

Exit mobile version