ಸಚಿವರ ಸಂಪುಟ ಕುತೂಹಲ : ಇಲ್ಲಿದೆ ನೋಡಿ ರಾಜ್ಯದ 24 ಸಂಭಾವ್ಯ ಸಚಿವರ ಪಟ್ಟಿ

Bengaluru : ಸುದಿರ್ಘ ಚರ್ಚೆಯ ನಂತರ ಕಾಂಗ್ರೆಸ್‌ ಹೈಕಮಾಂಡ್‌ (Congress High Command) ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡಲು ನಿರ್ಧರಿಸಿದ್ದು, ಶನಿವಾರ ರಾಜಭವನದ (Congress Cabinet 2023) ಗಾಜಿನ ಮನೆಯಲ್ಲಿ 24 ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ರಾಜ್ಯಪಾಲರ ಅಧಿಕೃತ ಕಚೇರಿಯಿಂದ ಮುಖ್ಯಮಂತ್ರಿಗಳ ಕಚೇರಿ ಶನಿವಾರ ಬೆಳಿಗ್ಗೆ 11.15ಕ್ಕೆ ನೂತನ ಸಚಿವರ ಪ್ರಮಾಣ ವಚನ (Oath of Minister)

ಸ್ವೀಕಾರ ಸಮಾರಂಭಕ್ಕೆ ಸಮಯ ನಿಗದಿಪಡಿಸಿದ್ದು, ಮುಂದಿನ ಎರಡು ವರ್ಷ ಯಾವುದೇ ಸಮಸ್ಯೆಗಳಿಲ್ಲದೇ, ಸರ್ಕಾರ ನಡೆಸಲು ಕಾಂಗ್ರೆಸ್‌ ಹೈಕಮಾಂಡ್‌ ತಂತ್ರ ರೂಪಿಸಿಕೊಂಡಿದೆ.

ಈಗಾಗಲೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್‌ (DK Sivakumar) ಮತ್ತು ಅವರೊಂದಿಗೆ ಎಂಟು ಮಂದಿಗೆ ಸಚಿವ ಸ್ಥಾನ ನೀಡಲಾಗಿದ್ದು,

ಆದರೆ ಖಾತೆ ಹಂಚಿಕೆ ಮಾಡಿಲ್ಲ. ಇದೀಗ ಶನಿವಾರ 24 ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಒಟ್ಟು 34 ಸಚಿವ ಸ್ಥಾನಗಳನ್ನು ಭರ್ತಿ (Congress Cabinet 2023) ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದೆ.

ಇದನ್ನೂ ಓದಿ : https://vijayatimes.com/dangerous-blood-cancer/

ಇನ್ನು ವೇಣುಗೋಪಾಲ್ ನೇತೃತ್ವದಲ್ಲಿ ಸಭೆ ನಡೆಸಿ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjuna Kharge),

ಸೋನಿಯಾಗಾಂಧಿ (Sonia Gandhi) ಅವರನ್ನು ಭೇಟಿಯಾದ ಬಳಿಕ ಸಚಿವಕಾಂಕ್ಷಿಗಳಿಗೆ ಕರೆ ಹೋಗಲಿದೆ. ತದನಂತರವೇ ಅಂತಿಮ ಪಟ್ಟಿಗೆ ಅಧಿಕೃತ ಮುದ್ರೆ ಬೀಳಲಿದೆ.

ಸಂಭವನೀಯ ಸಚಿವರ ಪಟ್ಟಿ


ಮಾಂಕಾಳ ವೈದ್ಯ, ಮಧುಗಿರಿ ರಾಜಣ್ಣ, ನಾಗೇಂದ್ರ. ಈಶ್ವರ ಖಂಡ್ರೆ, ಹಿರಿಯೂರು ಸುಧಾಕರ್, ಎಚ್.ಕೆ. ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್‌, ಶಿವಾನಂದ ಪಾಟೀಲ್, ದರ್ಶನಾಪುರ, ಎಸ್.ಎಸ್. ಮಲ್ಲಿಕಾರ್ಜುನ, ಬೈರತಿ ಸುರೇಶ್,

ಕೃಷ್ಣ ಬೈರೇಗೌಡ, ಬಸವರಾಜ್ ರಾಯರೆಡ್ಡಿ, ಡಾ. ಮಹಾದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್, ರಹೀಂ ಖಾನ್, ಅಜಯ್ ಸಿಂಗ್, ಶಿವರಾಜ್ ತಂಗಡಗಿ, ಚೆಲುವರಾಯಸ್ವಾಮಿ, ಸಂತೋಷ ಲಾಡ್, ಎಂ ಕೃಷ್ಣಪ್ಪ, ಮಧು ಬಂಗಾರಪ್ಪ, ಪುಟ್ಟರಂಗ ಶೆಟ್ಟಿ, ನರೇಂದ್ರ ಸ್ವಾಮಿ.

ಇದನ್ನೂ ಓದಿ : https://vijayatimes.com/calcium-carbide-in-mangoes/

ಲಿಂಗಾಯತ ಸಮುದಾಯದ ಕಡೆಗಣನೆ ಆರೋಪ : ಸಚಿವ ಸಂಪುಟ ರಚನೆಯಲ್ಲಿ ಲಿಂಗಾಯತ ಸಮುದಾಯವನ್ನು (Lingayat community) ಕಡೆಗಣನೆ ಮಾಡಲಾಗುತ್ತಿದೆ ಎಂದು ಕೆಲ ಲಿಂಗಾಯತ ಕಾಂಗ್ರೆಸ್‌ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ.

ವಿನಯ್‌ಕುಲಕರ್ಣಿ, ವಿಜಯಾನಂದ ಕಾಶಪ್ಪನವರ ಸೇರಿದಂತೆ ಕೆಲ ಶಾಸಕರು ಬಿಜೆಪಿಯಂತೆ ಕಾಂಗ್ರೆಸ್‌ನಲ್ಲೂ ಲಿಂಗಾಯತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದ್ದಾರೆ.

Exit mobile version