ಬೊಮ್ಮಾಯಿ ಅವರಿಗೆ ರಾಜ್ಯಕ್ಕಿಂತ ದೇಹಲಿಯಲ್ಲೇ ಹೆಚ್ಚು ಕೆಲಸವಿರುವಂತಿದೆ : ಕಾಂಗ್ರೆಸ್‌

Basavaraj Bommai

ರಾಜ್ಯದ ಸಿಎಂ(CM) ಒಬ್ಬರು ಒಂದೇ ವರ್ಷದ ಅವಧಿಯಲ್ಲಿ 12 ಬಾರಿ ದೆಹಲಿ ‘ದಂಡ’ಯಾತ್ರೆ ಮಾಡಿದ್ದು, ಇತಿಹಾಸದಲ್ಲೇ ಮೊದಲು. ಈ ಅಮೋಘ ದಾಖಲೆ ಬಸವರಾಜ ಬೊಮ್ಮಾಯಿ(Basavaraj Bommai) ಅವರು ನಿರ್ಮಿಸಿದ್ದಾರೆ. ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯದ ಜನರ ಅಭಿಪ್ರಾಯಕ್ಕಿಂತ ದೆಹಲಿ(Delhi) ಹೈಕಮಾಂಡ್ ಅದೇಶವೇ ಮುಖ್ಯ. ಖುರ್ಚಿ ಭದ್ರತೆಗಾಗಿ ಈ ಪರಿ ಹೈಕಮಾಂಡ್ ದಾಸ್ಯಕ್ಕೆ ಒಳಗಾಗಿದ್ದು ದುರಂತ. ಸಿಎಂ ಬಸವರಾಜ ಬೊಮ್ಮಾಯಿ ಅವರು ದೇಹಲಿಯಲ್ಲೇ ಒಂದು ಕಚೇರಿ ತೆರೆದು ಕೂರುವುದೊಳಿತು, ಅವರಿಗೆ ರಾಜ್ಯಕ್ಕಿಂತ ದೇಹಲಿಯಲ್ಲೇ ಹೆಚ್ಚು ಕೆಲಸವಿರುವಂತಿದೆ ಎಂದು ಕಾಂಗ್ರೆಸ್‌(Congress) ಟೀಕಿಸಿದೆ.


ಈ ಕುರಿತು ಟ್ವೀಟ್‌(Tweet) ಮಾಡಿರುವ ಕಾಂಗ್ರೆಸ್‌, ಬಸವರಾಜ ಬೊಮ್ಮಾಯಿ ಅವರೇ, ಈ ಬಾರಿಯಾದರೂ ನೆರೆ ಪರಿಹಾರ, GST ಬಾಕಿ, ವಸತಿ, ನೀರಾವರಿ ಯೋಜನೆಗಳಿಗೆ ಅನುಮೋದನೆ ತರುವಿರಾ ಅಥವಾ ಕಿತ್ತಾಟ ಬಗೆಹರಿಸುವುದರಲ್ಲೇ ಪ್ರವಾಸ ಮುಗಿಸುವಿರಾ? ನಿಮ್ಮ 12ನೇ ದೆಹಲಿ ‘ದಂಡ’ಯಾತ್ರೆಯ ಉದ್ದೇಶವೇನು? 40% ಕಮಿಷನ್ ಕಿರುಕುಳದಿಂದ ಜೀವ ತೆಗೆದ ಈಶ್ವರಪ್ಪನವರಿಗೆ ‘ಬಿ ರಿಪೋರ್ಟ್’ ಕೊಡುಗೆ ಸಾಧನೆ ವಿವರಿಸುವಿರಾ? ಅವರ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳವ ಲಾಬಿ ನಡೆಸಲು ಹೋಗಿದ್ದೀರಾ? ಅಥವಾ ಯತ್ನಾಳ್ ಹೇಳಿದಂತೆ ಸಿಎಂ ಹುದ್ದೆಯ ₹ 2500 ಕೋಟಿಯ ಕಂತು ತೀರಿಸಲು ಹೋಗಿದ್ದೀರಾ? ಎಂದು ಪ್ರಶ್ನಿಸಿದೆ.


ಮನುಷ್ಯರ ಧರ್ಮ ಕೊಲೆಯ ಆಧಾರದಲ್ಲಿ ನಿರ್ದಾರ ಮಾಡುತ್ತದೆ ಬಿಜೆಪಿ(BJP), ಹರ್ಷ ಹಂತಕರಿಗೆ ಜೈಲಿನಲ್ಲಿ ಆತಿಥ್ಯ ಕೊಟ್ಟವರಲ್ಲವೇ ತಾವು. ಇನ್ನು ದೇಶದ “ಕಳ್ಳ ನಾಯಕಿ”ಯಾರೆಂದು ಗೋವಾದ ಬಿಜೆಪಿ ಸರ್ಕಾರವೇ ಬಯಲು ಮಾಡಿದೆ. ಶೂಟರ್ ವರ್ತಿಕಾ ಸಿಂಗ್ ಬಳಿ 25 ಲಕ್ಷ ಲಂಚಕ್ಕೆ ಕಿರುಕುಳ ನೀಡಿದ್ದನ್ನು ಹಾಗೂ ವಿದ್ಯಾಭ್ಯಾಸದ ನಕಲಿ ಸರ್ಟಿಫಿಕೇಟ್ ನೀಡಿದ್ದನ್ನು. ಮುಚ್ಚಿಹಾಕಲಾಗಿತ್ತು. ಈಗ ಕಳ್ಳ ನಾಯಕಿಯ ಮತ್ತೊಂದು ಬಾರ್ ಹಗರಣ ಬಯಲಾಗಿದೆ ಎಂದಿದೆ.
ಇನ್ನು ಕರ್ನಾಟಕದಲ್ಲಿ ಎಂದಿಗಿಂತಲೂ ಅಪರಾಧ ಹಾಗೂ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗಿದೆ.

ಚಿಕ್ಕಮಗಳೂರಿನಲ್ಲಿ(Chikkamagaluru) ದಲಿತ ಯುವಕನಿಗೆ ಮೂತ್ರ ಕುಡಿಸಿದ ಅಮಾನವೀಯ ಘಟನೆಗೆ ಯಾವೊಬ್ಬ ಬಿಜೆಪಿ ನಾಯಕನೂ ತುಟಿ ಬಿಚ್ಚಲಿಲ್ಲ. ಕೋಮು ಕಲಹ ಹಚ್ಚುವುದರಲ್ಲಿ ಇರುವ ಆಸಕ್ತಿ ಜನರ ಸಮಸ್ಯೆಗಳ ಬಗ್ಗೆ ಇಲ್ಲ. ಬಿಜೆಪಿಯ ಮಾತಿನಂತೆ ಅವರ ಮೌನವೂ ಅಪಾಯಕಾರಿ ಎಂದು ಟೀಕಿಸಿದೆ.

Exit mobile version