ಪ್ರಧಾನಿ ಹತ್ಯೆಗೆ ಪ್ರಚೋದನಾತ್ಮಕ ಹೇಳಿಕೆ ; ಕಾಂಗ್ರೆಸ್‌ ನಾಯಕ ಪಟೇರಿಯಾ ಬಂಧನ

Madhya Pradesh : ಪ್ರಜಾಪ್ರಭುತ್ವ ಉಳಿಯಬೇಕಾದ್ರೆ ಮೋದಿಯ (Congress leader Pateria arrested) ಹತ್ಯೆ ಮಾಡಬೇಕು ಎಂದು ಹೇಳಿಕೆ ನೀಡಿ ಭಾರೀ ವಿವಾದ ಸೃಷ್ಟಿಸಿರುವ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವರೂ ಆಗಿರುವ ರಾಜ ಪಟೇರಿಯಾ ಅವರನ್ನು ಮಧ್ಯಪ್ರದೇಶದ ಪೊಲೀಸರು ಇಂದು ಬಂಧಿಸಿದ್ದಾರೆ.

ಪಟೇರಿಯಾ ವಿರುದ್ಧ ಪನ್ನ ಜಿಲ್ಲೆಯ ಪವಾಯಿ ಪೊಲೀಸರು ಭಾರತೀಯ ದಂಡ ಸಂಹಿತೆಯ (Congress leader Pateria arrested) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಪಟೇರಿಯಾ ಅವರು ಮೋದಿ ಚುನಾವಣೆಗೆ ಅಂತ್ಯ ಹಾಡಬೇಕು ಹಾಗೆಯೇ ಮೋದಿಯ ಹತ್ಯೆ ಆಗಬೇಕು.

ಇಲ್ಲದಿದ್ದರೆ ಜಾತಿ,ಧರ್ಮ,ಭಾಷೆಯ ಆಧಾರದ ಮೇಲೆ ದೇಶ ವಿಭಜನೆ ಖಂಡಿತ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗಾಗಲೇ ಮೋದಿ ಆಡಳಿತದಿಂದ ದಲಿತರು,ಅಲ್ಪಸಂಖ್ಯಾತರು ಮತ್ತು ಬುಡಕಟ್ಟು ಜನರ ಸ್ಥಿತಿ ಶೋಚನೀಯವಾಗಿದೆ ಎಂದು ಜನರಿಗೆ ಮೋದಿಯ ಕೊಲೆಯ ಬಗ್ಗೆ ಪ್ರೇರೇಪಣೆ ನೀಡುವಂಥಾ ಹೇಳಿಕೆ ನೀಡಿ ಈಗ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ .

ಇದನ್ನೂ ಓದಿ : https://vijayatimes.com/radio-class-for-primary-students/

ಪಟೇರಿಯಾ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್‌(Congress) ನಾಯಕರೊಬ್ಬರು ಕೊಲೆ ಎಂದರೆ ಬಿಜೆಪಿಯ (bjp) ಸೋಲು ಎಂದರ್ಥ ಎಂದು ವ್ಯಾಖ್ಯಾನಿಸಿದ್ದಾರೆ. ಆದ್ರೆ ಕೈ ನಾಯಕ ಪಟೇರಿಯಾ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ವಿರೋಧಸಿ, ಕೈ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಪೊಲೀಸರು ಪಟೇರಿಯಾ ವಿರುದ್ಧ ತನಿಖೆಗೆ ಆದೇಶಿಸಿತ್ತು. ಪಟೇರಿಯಾ ಹೇಳಿಕೆ ಪ್ರಚೋದಾತ್ಮಕವಾಗಿತ್ತು ಅಂತ ಮನಗಂಡು ಇಂದು ಪನ್ನ ಜಿಲ್ಲೆಯ(Panna District) ಪವಾಯಿ ಪೊಲೀಸರು ಪಟೇರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ದೂರು ದಾಖಲಿಸಿ ಬಂಧಿಸಿದರು.
Exit mobile version