‘ಅನ್ನ’ಭಾಗ್ಯ ಹೆಸರಲ್ಲಿ ‘ಕನ್ನ’ಭಾಗ್ಯ ಮಾಡಿದ್ರು, ದೀನ ದಲಿತರಿಗೆ ಮೋಸ ಮಾಡಿ ಮತ ಪಡೀತಿದ್ರು : ಸಿಎಂ ಬೊಮ್ಮಾಯಿ

CM

Bengaluru : ಕರ್ನಾಟಕ (Karnataka) ರಾಜ್ಯ ರಾಜಕೀಯದಲ್ಲಿ ಬಿಜೆಪಿ-ಕಾಂಗ್ರೆಸ್ (BJP-Congress) ನಡುವೆ ಬಿರುಸಿನ ಮಾತಿನ ಚಕಮಕಿ ನಡೆದಿದ್ದು, ರಾಜ್ಯ ಬಿಜೆಪಿ (State BJP) ಸರ್ಕಾರ ಕಾಂಗ್ರೆಸ್ ಪಕ್ಷವನ್ನು (Congress Party) ತರಾಟೆಗೆ ತೆಗೆದುಕೊಂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡುವಾಗ, ಕಾಂಗ್ರೆಸ್ ಪಕ್ಷ ಏನು ಮಾಡಿದೆ?

ಅಂದಿನ ಸಿದ್ದರಾಮಯ್ಯನವರ(Siddaramaiah) ಸರ್ಕಾರ ಮಾಡಿದ್ದೇನು? ಪ್ರತಿಬಾರಿ ನನ್ನ ಸರ್ಕಾರ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಕೊಟ್ಟಿದ್ದೇನೆ ಎಂದು ಹೇಳುವ ಸಿದ್ದರಾಮಯ್ಯ ಮಾಡಿದ್ದು ಭ್ರಷ್ಟ!

https://youtu.be/1aAU7zX-4Q8 ಹೆಸರಿಗೆ ಮಾತ್ರ ಆಸ್ಪತ್ರೆ | ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಘಟನೆ

ಅನ್ನಭಾಗ್ಯ ಯೋಜನೆ ಹೆಸರು ಹೇಳುವ ಅವರು, ಅನ್ನಭಾಗ್ಯ ಹೆಸರಲ್ಲಿ ಕನ್ನಭಾಗ್ಯ(Congress Looted the State) ಮಾಡಿದ್ರು! ಎಲ್ಲಾ ಯೋಜನೆಯಲ್ಲೂ ಕಾಂಗ್ರೆಸ್ ಪಾಲೂ ಕೇಳಿದೆ, ಲೂಟಿ ಹೊಡೆದಿದೆ.

ಸಿದ್ದರಾಮಯ್ಯ ಅವಧಿಯ 5 ವರ್ಷ ಕೂಡ ಕರ್ನಾಟಕ ಕಪ್ಪ ಕೊಡುವ ರಾಜ್ಯವಾಗಿತ್ತು. ಕಾಂಗ್ರೆಸ್(Congress Looted the State)ಭ್ರಷ್ಟಚಾರದಿಂದಲೇ ರಾಜ್ಯ ಕಿಂಚಿತ್ತು ಅಭಿವೃದ್ದಿಯಾಗಲಿಲ್ಲ, ಅಭಿವೃದ್ಧಿಯನ್ನು ನೋಡಲಿಲ್ಲ.

ಇದೇ ಕಾರಣಗಳಿಗೆ 2018 ರಲ್ಲಿ ರಾಜ್ಯದ ಜನ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಓಡಿಸಿದ್ದು. ಕಾಂಗ್ರೆಸ್ಸಿನವರು ತಮ್ಮ ಅಡ್ರೆಸ್ ಹುಡುಕಲು ಕರ್ನಾಟಕ ರಾಜ್ಯಕ್ಕೆ ಯಾತ್ರೆ ಮೂಲಕ ಬಂದಿದ್ದಾರೆ.

ಇಷ್ಟೆಲ್ಲಾ ಮಾತನಾಡುವ ಕಾಂಗ್ರೆಸ್, ಅಂದು ಬಳ್ಳಾರಿ ಬಿಟ್ಟು ಓಡಿದ್ದು ಯಾಕೆ? ಮೂರು ಸಾವಿರ ಕೋಟಿ ಪ್ಯಾಕೇಜ್ ಕೊಡ್ತೀನಿ ಎಂದು ಹೇಳಿ `ಕೈ’ ಕೊಟ್ಟಿದ್ದು ಯಾಕೆ? ಎಂದು ಪ್ರಶ್ನಿಸುವ ಮುಖೇನ ಕಾಂಗ್ರೆಸ್ ಪಕ್ಷದ ನಾಯಕರಿಗೆ ಮಾತಿನ ಚಾವಟಿ ಬೀಸಿದರು.

ಇದನ್ನೂ ಓದಿ : https://vijayatimes.com/rahul-gandhi-is-inspiring-says-congress/

ಕಾಂಗ್ರೆಸ್ ಪಕ್ಷದವರು ದಲಿತ ಸಮುದಾಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ದೀನ ದಲಿತರಿಗೆ ಮೋಸ ಮಾಡಿ ಮತ ಪಡೀತಿದ್ರು. ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಮೋಸ ಮಾಡಿದ್ದಾರೆ.

ದಲಿತ ಸಮುದಾಯಕ್ಕೆ ಕಾಂಗ್ರೆಸ್ಸಿನವರು ಮೋಸ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ಆರೋಪವನ್ನು ಸಿಎಂ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದರು.

Exit mobile version