ಕಾಂಗ್ರೆಸ್‌ ಪಟ್ಟಿ ರಿಲೀಸ್‌: ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌ ನೀಡಿದೆ ಗೊತ್ತಾ..?

Bengaluru : ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್‌ (Congress released candidates list) 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ವಿಪಕ್ಷ ನಾಯಕ

ಸಿದ್ದರಾಮಯ್ಯ (Siddaramaiah) ಯಾವ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎಂಬ ಗೊಂದಲಕ್ಕೂ ಅಂತಿಮ ತೆರೆಬಿದ್ದಿದ್ದು, ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಈ ನಡುವೆ 124 ಕ್ಷೇತ್ರಗಳ ಪಟ್ಟಿಯಲ್ಲಿ ಕಾಂಗ್ರೆಸ್‌ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌ನೀಡಿದೆ ಎಂಬುದನ್ನು ನೋಡುವುದಾದರೆ, ಲಿಂಗಾಯತ – 30 ಒಕ್ಕಲಿಗ – 19 ಎಸ್‍ಸಿ – 22 ಎಸ್‍ಟಿ – 10 ಮುಸ್ಲಿಂ – 8 ಈಡಿಗ – 6

ಕುರುಬ – 6 ರೆಡ್ಡಿ – 5 ಬ್ರಾಹ್ಮಣ – 5 ಬಂಟ್ಸ್ – 3 ಮರಾಠ – 2 ಕ್ರಿಶ್ಚಿಯನ್ – 1 ಮೊಗವೀರ – 1 ಉಪ್ಪಾರ – 1 ರಜಪೂತ್ – 1 ಇತರೆ – 1 ಜೈನ್ – 1 ಕೊಡವ – 1 ವೈಶ್ಯ – 1 ಟಿಕೆಟ್‌ ನೀಡಿದ್ದು, ಲಿಂಗಾಯತ ಸಮುದಾಯಕ್ಕೆ ಈ ಬಾರಿ ಕಾಂಗ್ರೆಸ್‌ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಇನ್ನೊಂದೆಡೆ ವಿಜಯನಗರ, ಸೊರಬ, ಸಾಗರ, ಬೈಂದೂರ್, ಕಾಪು, ಬೆಳ್ತಂಗಡಿಯಲ್ಲಿ ಈಡಿಗ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದರೆ, ಕೊಪ್ಪಳ(Koppala), ಬ್ಯಾಡಗಿ, ಹೊಸದುರ್ಗ, ವರುಣಾ, ಹೆಬ್ಬಾಳ, ಕೆ ಆರ್

ನಗರದಲ್ಲಿ ಕುರುಬ ಸಮುದಾಯದ ಅಭ್ಯರ್ಥಿ ಟಿಕೆಟ್‌ ನೀಡಲಾಗಿದೆ. ಕುರುಬ ಸಮುದಾಯಕ್ಕೆ ಮೊದಲ ಹಂತದಲ್ಲಿ ಕೇವಲ (Congress released candidates list) 6 ಕ್ಷೇತ್ರಗಳಲ್ಲಿ ಅವಕಾಶ ನೀಡಲಾಗಿದೆ.

ನರಸೀಪುರದಲ್ಲಿ ಹೆಚ್.ಸಿ.ಮಹದೇವಪ್ಪ, ಕನಕಪುರದಿಂದ ಡಿ.ಕೆ. ಶಿವಕುಮಾರ್‌(D.K.Shivakumar) , ದೇವನಹಳ್ಳಿಯಿಂದ ಮುನಿಯಪ್ಪ, ಬೆಂಗಳೂರು ರಾಜಾಜಿನಗರದಲ್ಲಿ ಪುಟ್ಟಣ್ಣ, ಆರ್ ಆರ್ ನಗರ ಕುಸುಮಾ ಹೆಚ್,

ಇದನ್ನು ಓದಿ : ಕರ್ನಾಟಕದಲ್ಲಿ ಮುಸ್ಲಿಮರಿಗೆ 4% ಕೋಟಾವನ್ನು ರದ್ದುಗೊಳಿಸಿದ್ದು ಎಷ್ಟು ಸರಿ? : ಅಸಾದುದ್ದೀನ್ ಓವೈಸಿ

ನರಸಿಂಹರಾಜ ತನ್ವಿರ್ ಸೇಠ್‌(Narasimharaja Tanvir Seth), ಬಬಲೇಶ್ವರ್‌ದಿಂದ ಎಂ.ಬಿ.ಪಾಟೀಲ್‌, ಇಂಡಿಯಿಂದ ಯಶವಂತರಾಯಗೌಡ ಪಾಟೀಲ್‌, ಚಿತ್ತಾಪುರದಿಂದ ಪ್ರಿಯಾಂಕ್‌ಖರ್ಗೆ, ಸೊರಬದಿಂದ ಮಧು

ಬಂಗಾರಪ್ಪ, ಸಾಗರದಿಂದ ಗೋಪಾಲಕೃಷ್ಣ ಬೇಳೂರು, ಚಿಕ್ಕೋಡಿಯಿಂದ ಸದಲಗಾ ಗಣೇಶ ಹುಕ್ಕೇರಿಗೆ, ಕಾಗವಾಡ ಭರಮಗೌಡ ಆಲಗೌಡ ಕಾಗೆ, ಹುಕ್ಕೇರಿಯಿಂದ ಎ.ಬಿ ಪಾಟೀಲ್, ಯಮಕನಮರಡಿಯಿಂದ ಸತೀಶ್

ಜಾರಕಿಹೊಳಿ, ಬೆಳಗಾವಿ ಗ್ರಾಮೀಣದಿಂದ ಲಕ್ಷ್ಮಿ ಹೆಬ್ಬಾಳ್ಕರ್, ಖಾನಾಪುರದಿಂದ ಡಾ. ಅಂಜಲಿ ನಿಂಬಾಳ್ಕರ್, ಕಾರವಾರದಿಂದ ಸತೀಶ್‌ಸೈಲ್‌, ಬೈಲಹೊಂಗಲದಿಂದ ಮಹಾಂತೇಶ ಶಿವಾನಂದ ಕೌಜಲಗಿ, ಶಿರಾದಿಂದ ಟಿ.ಬಿ.

ಜಯಚಂದ್ರ, ಬಿ.ಟಿ.ಎಂ.ಲೇಔಟ್‌ದಿಂದ ರಾಮಲಿಂಗಾರೆಡ್ಡಿ, ಜಯನಗರದಿಂದ ಸೌಮ್ಯಾ ರೆಡ್ಡಿ, ರಾಮದುರ್ಗದಿಂದ ಅಶೋಕ್ ಎಂ.ಪಟ್ಟಣ, ಜಮಖಂಡಿಯಿಂದ ಆನಂದ ಸಿದ್ದು ನ್ಯಾಮಗೌಡಗೆ ಟಿಕೆಟ್‌ ಘೋಷಣೆಯಾಗಿದೆ.

Exit mobile version