ಎಲ್ಲಾ ಸಂಸ್ಥೆಗಳೂ ಇಂದು ಬಿಜೆಪಿ-ಆರ್‍ಎಸ್‍ಎಸ್’ನ ಹಿಡಿತದಲ್ಲಿವೆ : ರಾಹುಲ್ ಗಾಂಧಿ

Congress

ನವದೆಹಲಿ : ನಾನು ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬೆಲೆ ಏರಿಕೆ ವಿರುದ್ಧ ಹೋರಾಡುತ್ತೇನೆ. ನನ್ನ ಹೋರಾಟವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸತ್ಯ ಹೇಳಿದಷ್ಟು ನನ್ನ ಮೇಲೆ ಆಕ್ರಮಣ ಹೆಚ್ಚಾಗಲಿದೆ. ಆದರೆ ಇದಕ್ಕೆಲ್ಲಾ ನಾನು ಹೆದರುವುದಿಲ್ಲ, ನಾನು ನನ್ನ ಕೆಲಸ ಮಾಡುತ್ತೇನೆ. ಯಾರು ಹೆದರಿಸುತ್ತಾರೆ, ಅವರು ಹೆದರುತ್ತಾರೆ ಇದು ಸತ್ಯ ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಕೇಂದ್ರ ಸರ್ಕಾರದ(Central Government) ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಕಪ್ಪು ಪಟ್ಟಿ ಧರಿಸಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ(Congress Party) ಕಳೆದ ೭೦ ವರ್ಷಗಳಿಂದ ಕಟ್ಟಿದ್ದ ಪ್ರಜಾಪ್ರಭುತ್ವ(Democracy) ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ(BJP Government) ಕೇವಲ 8 ವರ್ಷಗಳಲ್ಲಿ ನಾಶ ಮಾಡಿದೆ. ಸಂವಿಧಾನಬದ್ದ ಸಂಸ್ಥೆಗಳನ್ನು ಬಿಜೆಪಿ ಸರ್ಕಾರ ಸದ್ದಿಲ್ಲದೇ ನಾಶ ಮಾಡುತ್ತಿದೆ. ಪ್ರಜಾಪ್ರಭುತ್ವದ ಹತ್ಯೆ ನಡೆಯುತ್ತಿದೆ. ಉದ್ಯಮಿಗಳಿಗಾಗಿ ಇಬ್ಬರು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ಗೃಹ ಸಚಿವ ಅಮಿತ್ ಶಾ(Amit Shah) ವಿರುದ್ಧ ವಾಗ್ದಾಳಿ ನಡೆಸಿದರು.

ನಾವು ಬೆಲೆ ಏರಿಕೆ(Price Hike) ಮತ್ತು ನಿರುದ್ಯೋಗದ ಕುರಿತು ಚರ್ಚೆ ನಡೆಸಲು ಬಯಸಿದ್ದೇವೆ. ಚರ್ಚೆ ನಡೆಸುವುದು ನಮ್ಮ ಪ್ರಜಾತಾಂತ್ರಿಕ ಹಕ್ಕು. ಆದರೆ ಕೇಂದ್ರ ಸರ್ಕಾರ ಚರ್ಚೆಗೂ ಸಹ ಅವಕಾಶ ನೀಡುತ್ತಿಲ್ಲ.  ದೇಶದ ಇಡೀ ಆಡಳಿತ ವ್ಯವಸ್ಥೆಯಲ್ಲಿ ಆರ್‍ಎಸ್‍ಎಸ್ ವ್ಯಕ್ತಿಗಳು ಸೇರಿಕೊಂಡಿದ್ದಾರೆ. ಹೀಗಾಗಿ ಆಡಳಿತ ವ್ಯವಸ್ಥೆ ಆರ್‍ಎಸ್‍ಎಸ್ ಸೂಚನೆಯಂತೆ ನಡೆಯುತ್ತಿದೆ. ಹೀಗಾಗಿ ಈಗ ನಾವು ಇಡೀ ವ್ಯವಸ್ಥೆಯ ವಿರುದ್ದ ಹೋರಾಟ ನಡೆಸಬೇಕಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆಡಳಿತ  ವ್ಯವಸ್ಥೆ ಸ್ವತಂತ್ರವಾಗಿತ್ತು. ಸಂವಿಧಾನ(Constitution) ಬದ್ದ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಸ್ವತಂತ್ರವಾಗಿದ್ದವು ಎಂದು ಹೇಳಿದರು.

ಇನ್ನು ನವದೆಹಲಿಯಲ್ಲಿ ನಿರುದ್ಯೋಗ ಮತ್ತು ಬೆಲೆ ಏರಿಕೆ ಖಂಡಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ  ಪ್ರತಿಭಟನೆ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದಾರೆ.

Exit mobile version