‘ಬಿಜೆಪಿಗೆ ಮತ ಹಾಕಿದ್ರೆ ಗ್ಯಾಸ್ ಸಿಲಿಂಡರ್ ಬೆಲೆ 2000ಕ್ಕೆ ; ಕಾಂಗ್ರೆಸ್‌ಗೆ ಮತ ಹಾಕಿದ್ರೆ ಸಿಗುತ್ತೆ ಗೃಹಲಕ್ಷಿ ಯೋಜನೆಯಲ್ಲಿ 2000ರೂ’

Bengaluru : ರಾಜ್ಯದಲ್ಲಿ ಚುನಾವಣಾ ಕದನ ದಿನದಿಂದ ದಿನಕ್ಕೆ ಕಾವೇರುತ್ತಿದ್ದಂತೆ, ಪ್ರತಿಪಕ್ಷಗಳಾದ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಆರೋಪ-ಪ್ರತ್ಯಾರೋಪಗಳ ಜಿದ್ದಾಜಿದ್ದಿಯನ್ನು ಬೆಳಸುವಲ್ಲಿ ನಿರತರಾಗಿದೆ. ಉಭಯ ಪಕ್ಷಗಳು ಮತದಾರರನ್ನು ಓಲೈಸಲು ಬೇರೆ ಬೇರೆ ತಂತ್ರಗಳನ್ನು (congress vs bjp) ಬಳಸುತ್ತಿವೆ. ಅದನ್ನು ವಿಫಲಗೊಳಿಸಲು ಉಭಯ ಪಕ್ಷದ ನಾಯಕರು ಪತಿತಂತ್ರ ಹೂಡುತ್ತಿದ್ದಾರೆ.


ರಾಜ್ಯ ಬಿಜೆಪಿ ಪಕ್ಷ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P.Nadda) ಅವರ ವಿರುದ್ಧ ಸರಣಿ ಆರೋಪಗಳನ್ನು ಎಸಗಿರುವ ರಾಜ್ಯ ಕಾಂಗ್ರೆಸ್,

ಮತ ಹಾಕದಿದ್ದರೆ ಮೋದಿಯ ಆಶೀರ್ವಾದ ತಪ್ಪಿಸಿಕೊಳ್ಳುವಿರಿ ಎಂದು ಬೆದರಿಕೆ ಹಾಕಿದ ಜೆ.ಪಿ ನಡ್ಡಾ ಅವರೇ, ಆಶೀರ್ವದಿಸಲು ಮೋದಿ ಏನು ದೇವರಾ, ಮಠಾಧೀಶರಾ ಅಥವಾ ಛೂಮಂತರ್ ಬಾಬಾನಾ?


ಕನ್ನಡಿಗರ ತೆರಿಗೆ ಭಿಕ್ಷೆಯಲ್ಲಿ ಗತ್ತು, ಗಮ್ಮತ್ತು, ಶೋಕಿ ಮಾಡುತ್ತಿರುವ ಮೋದಿಯೇ (Modi) ಕನ್ನಡಿಗರಿಗೆ ಋಣಿಯಾಗಿರಬೇಕು ಅಲ್ಲವೇ ರಾಜ್ಯ ಬಿಜೆಪಿ?

ಕರ್ನಾಟಕ ನೆರೆಯಲ್ಲಿ ಮುಳುಗಿದ್ದಾಗ ಇತ್ತ ತಿರುಗಿಯೂ ನೋಡಲಿಲ್ಲ, ಪರಿಹಾರವನ್ನೂ ನೀಡಲಿಲ್ಲ ಮೋದಿ.


ನೆರೆ ಪರಿಹಾರಕ್ಕೆ ಬೇಡಿಕೆ ಸಲ್ಲಿಸಲು ಬಿ.ಎಸ್ ಯಡಿಯೂರಪ್ಪ (B.S.Yeddiyurappa) ಅವರು ಹಲವು ಬಾರಿ ದೆಹಲಿಯ ಪ್ರಧಾನಿ ಕಚೇರಿಯ ಬಾಗಿಲು ಕಾದರೂ ಕನಿಷ್ಠ ಸೌಜನ್ಯಕ್ಕೆ ಭೇಟಿಯೂ ಮಾಡಲಿಲ್ಲ.

ಆಗ ಮೋದಿ ಆಶೀರ್ವಾದ ಎಲ್ಲಿ ಹೋಗಿತ್ತು ಜೆ.ಪಿ ನಡ್ಡಾ ಅವರೇ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸಿ, ಕನ್ನಡಿಗರನ್ನು ಅವಮಾನಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ (J.P.Nadda) ಕನ್ನಡಿಗರಲ್ಲಿ ಕ್ಷಮೆ ಕೇಳಬೇಕು.


ಮತ ಹಾಕದಿದ್ದರೆ ಮೋದಿಯ ಆಶೀರ್ವಾದವಿಲ್ಲ ಎಂದು ಒಕ್ಕೂಟ ವ್ಯವಸ್ಥೆಯ ಗೌರವವನ್ನು ಗಾಳಿಗೆ ತೂರಿ,

ಕನ್ನಡಿಗರನ್ನು ಗುಲಾಮರಂತೆ ಕಾಣುವ ಬಿಜೆಪಿಯನ್ನು ರಾಜ್ಯದಿಂದ ಒದ್ದೋಡಿಸಬೇಕು. ಕಾಂಗ್ರೆಸ್ (Congress) ಜನರಲ್ಲಿ ಆಶೀರ್ವಾದವನ್ನು ಕೇಳುತ್ತದೆ. ಬಿಜೆಪಿ ಜನತೆಗೆ ಮೋದಿ ಆಶೀರ್ವಾದದ ಬೆದರಿಕೆ ಹಾಕುತ್ತದೆ.


ಇದು ಪ್ರಜೆಗಳೇ ಪ್ರಭುಗಳು ಎಂದು ನಂಬಿರುವ ಕಾಂಗ್ರೆಸ್ಸಿಗೂ ಪ್ರಜೆಗಳನ್ನು ಗುಲಾಮರು ಎಂದು ತಿಳಿದ ಬಿಜೆಪಿಗೂ ಇರುವ ವ್ಯತ್ಯಾಸ. ಬಿಜೆಪಿಯವರೇ ಹೇಳಿದಂತೆ ಬಿಜೆಪಿ ಬ್ಲಾಕ್ಮೇಲ್ ಜನತಾ ಪಾರ್ಟಿ (Blackmail Janatha Party) ಆಗಿದೆ.

ಏರ್ಪೋರ್ಟ್ (Airport) ಅವರದ್ದು, ಪೋರ್ಟ್ ಅವರದ್ದು ವಿದ್ಯುತ್ ಅವರದ್ದು, ಕಲ್ಲಿದ್ದಲೂ ಅವರದ್ದು, ರಸ್ತೆ ಅವರದ್ದು, ಗಣಿಯೂ ಅವರದ್ದು ಭೂಮಿಯು ಅವರದ್ದು, ಆಕಾಶವೂ ಅವರದ್ದು,

‘ಅವರು’ ಯಾರು? ಅವರು ‘ಸಾಹೇಬರ’ ಆಪ್ತರು! ಕನ್ನಡ, ಕನ್ನಡಿಗ, ಕರ್ನಾಟಕ. ಈ ಮೂರು ಬಿಜೆಪಿಯಿಂದ ನಿರಂತರ (congress vs bjp) ಅವಮಾನ, ದಾಳಿಯಿಂದ ನಲುಗಿವೆ.

ಕನ್ನಡಿಗರ ಆಶೀರ್ವಾದ ಕೇಳಬೇಕಾದಲ್ಲಿ ಮೋದಿಯ ಆಶೀರ್ವಾದ ತಪ್ಪಲಿದೆ ಎಂದು ಬೆದರಿಕೆ ಹಾಕಿದ್ದು ಸಮಸ್ತ ಕನ್ನಡಿಗರಿಗೆ ಮಾಡಿದ ಅವಮಾನ! ಮಾಡಿದ ಅವಮಾನಕ್ಕೆ ಕ್ಷಮೆ ಕೇಳಿಲ್ಲ ಎಂದರೆ ಇವರ ಸರ್ವಾಧಿಕಾರ,

ದುರಹಂಕಾರ ಎಷ್ಟಿರಬಹುದು? ಕರ್ನಾಟಕದ ಜನತೆ ಮತ ಕೇಳಲು ಬರುವ ಬಿಜೆಪಿಗರ ಎದುರು ತಮ್ಮ ಗ್ಯಾಸ್ ಸಿಲಿಂಡರ್ ತಂದಿಡಲು ತೀರ್ಮಾನಿಸಿದ್ದಾರೆ!

ಬಿಜೆಪಿಗೆ ಮತ ಹಾಕಿದರೆ ಮನೆ ಬಳಕೆಯ ಗ್ಯಾಸ್ ಸಿಲಿಂಡರ್ (Cylinder) ಬೆಲೆ 2000 ರೂ.ಗೆ ಏರಿಕೆಯಾಗಲು ಪ್ರೋತ್ಸಾಹಿಸಿದಂತೆ.

ಅದೇ ಕಾಂಗ್ರೆಸ್‌ಗೆ ಮತ ಹಾಕಿದರೆ ಗೃಹಲಕ್ಷಿ ಯೋಜನೆಯಲ್ಲಿ 2000 ರೂ. ಪಡೆದಂತೆ. ಇದು ಕನ್ನಡಿಗರಿಗೆ ತಿಳಿದಿದೆ. ಕರ್ನಾಟಕದ ಕೋಟ್ಯಂತರ ರೈತರ, ಭೂರಹಿತರ ಬದುಕಿನ ಆಸರೆಯಾಗಿರುವುದು ಹೈನುಗಾರಿಕೆ.

ಅವರ ಹೈನುಗಾರಿಕೆಗೆ ಬೆಂಬಲವಾಗಿರುವುದು “ನಂದಿನಿ” (Nandini) ಅಂತಹ ನಂದಿನಿಯ ಕತ್ತು ಕುಯ್ಯಲು ಹೊರಟಿರುವ ಗುಜರಾತಿ ಗುಲಾಮಗಿರಿಯಲ್ಲಿ ತೃಪ್ತಿ ಕಾಣುವ ಬಿಜೆಪಿಗೆ ಮತ ಹಾಕುವುದೆಂದರೆ

ನಮ್ಮ ರೈತರ ಬೆನ್ನಿಗೆ ಚೂರಿ ಹಾಕಿದಂತೆ ಎಂದು ಕನ್ನಡಿಗರು ಅರ್ಥ ಮಾಡಿಕೊಂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಬಿಜೆಪಿ ವಿರುದ್ಧ ಸರಣಿ ಆರೋಪಗಳನ್ನು ಎಸಗಿದೆ.

Exit mobile version