ಕಲುಷಿತ ನೀರು ಸೇವನೆ ಮಾಡಿ ೬ ಮಂದಿ ಸಾವು, ೫೦ಕ್ಕೂ ಹೆಚ್ಚು ಜನ ಆಸ್ಪತ್ರೆ ದಾಖಲು

ಗುಜರಾತ್, ಜೂ. 03: ಕಲುಷಿತ ನೀರು ಸೇವನೆ ಮಾಡಿ 6 ಮಂದಿ ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿದ ಘಟನೆ ಗುಜರಾತ್​ನ ಸೂರತ್​​ನಲ್ಲಿರುವ ಕಾಠೋರ್​ ಗ್ರಾಮದಲ್ಲಿ ನಡೆದಿದೆ.

ಕುಡಿಯುವ ನೀರಿನ ಪೈಪ್​ ಒಡೆದು ಹೋಗಿ, ಅದು ಒಳಚರಂಡಿ ನೀರಿನೊಂದಿಗೆ ಬೆರೆತು ಹೋಗಿದ್ದು, ಸ್ಥಳ ಪರೀಕ್ಷೆ ಸಮಯದಲ್ಲಿ ಗೊತ್ತಾಗಿದೆ. ಇದೇ ನೀರು ಕುಡಿದ ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇನ್ನು ಸೂರತ್​ ಮೇಯರ್​ ಹೇಮಾಲಿ ವೋಘವಾಲಾ ಘಟನೆಯ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದು, ಮೃತರ ಕುಟುಂಬಗಳಿಗೆ 1 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಗ್ರಾಮದ ನೀರಿನ ವ್ಯವಸ್ಥೆ ಸರಿಯಾಗುವವರೆಗೂ ಟ್ಯಾಂಕರ್ ಮೂಲಕ ಶುದ್ಧ ನೀರು ಪೂರೈಕೆ ಮಾಡಲಾಗುವುದು. ಹಾಗೇ, ಹಳ್ಳಿಗಳಲ್ಲಿ ನೀರಿನ ಪರೀಕ್ಷೆ ಮಾಡಿಸಲು ವಾಹನವನ್ನು ಕಳಿಸಲಾಗುವುದು ಎಂದೂ ಹೇಳಿದ್ದಾರೆ.

Exit mobile version