ಗಾಂಧಿ ಕುಟುಂಬದ ಯಾರೊಬ್ಬರೂ ನೆಹರೂ ಉಪನಾಮವನ್ನು ಏಕೆ ಬಳಸುವುದಿಲ್ಲ? ; ಪ್ರಧಾನಿ ಮೋದಿ ಹೇಳಿಕೆಗೆ ಕಾಂಗ್ರೆಸ್‌ ಕೆಂಡ

New Delhi : ಗಾಂಧಿ ಕುಟುಂಬದ ಯಾರೊಬ್ಬರೂ ನೆಹರೂ(Jawarlal Nehru) ಉಪನಾಮವನ್ನು ಏಕೆ ಬಳಸುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ರಾಜ್ಯಸಭೆಯಲ್ಲಿ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್‌ ತೀವ್ರವಾಗಿ (controversy about Nehru surname) ಖಂಡಿಸಿದ್ದು ರಾಜ್ಯಸಭೆಯಲ್ಲಿ ಭಾರೀ ಗದ್ದಲವನ್ನೇ ಸೃಷ್ಟಿಸಿದೆ.

ಪ್ರಧಾನಿ ಮೋದಿ ಅವರ ಈ ಹೇಳಿಕೆ ಸಾಮಾಜಿಕ ಮಾದ್ಯಮಗಳಲ್ಲಿ(Social Media) ಭಾರೀ ಚರ್ಚೆ ಹುಟ್ಟು ಹಾಕಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ(Priyamnka Gandhi) ಅವರ ಮಗನನ್ನು ಉಲ್ಲೇಖಿಸಿ ಬಿಜೆಪಿಯ ಅಮಿತ್ ಮಾಳವಿಯಾ ಅವರು ಟ್ವೀಟ್‌ ಮಾಡಿದ್ದು,

“ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಗ ರೆಹಾನ್ ತಮ್ಮ ಹೆಸರನ್ನು ರೆಹಾನ್ ರಾಜೀವ್ ಗಾಂಧಿ(Rehan Rajiv Gandhi) ಎಂದು ಬರೆಯುತ್ತಾರೆ.

ಪ್ರಿಯಾಂಕಾ ವಾದ್ರಾ ಅವರ ಮಗ ರೆಹಾನ್ ತನ್ನ ಹೆಸರನ್ನು ರೆಹಾನ್ ರಾಜೀವ್ ಗಾಂಧಿ ಎಂದು ಬರೆಯಬಹುದಾದರೆ,

ಅವರ ಕುಟುಂಬದಲ್ಲಿ ಯಾರೂ ನೆಹರೂ ಉಪನಾಮವನ್ನು ಏಕೆ ಬಳಸುವುದಿಲ್ಲ? ನೆಹರು ಉಪನಾಮವನ್ನು ಬಳಸಲು ನಾಚಿಕೆ ಪಡುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಚಿತ್ರರಂಗದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಹಾಲಿವುಡ್‌ ನಿರ್ದೇಶಕ ಜೇಮ್ಸ್‌ ಕ್ಯಾಮರೂನ್‌

ಇನ್ನು ಆಂಧ್ರಪ್ರದೇಶದ(Andhra Pradesh) ಬಿಜೆಪಿ ನಾಯಕ ವಿಷ್ಣುವರ್ಧನ್ ರೆಡ್ಡಿ ಈ ಕುರಿತು ಟ್ವೀಟ್(Tweet) ಮಾಡಿದ್ದು,

 “ಕಾಂಗ್ರೆಸ್ಸಿಗರು ಗಾಂಧಿ ಕುಟುಂಬವು ತಮ್ಮ ತಂದೆಯ ಉಪನಾಮವನ್ನು ಬಳಸುತ್ತಿದ್ದಾರೆ ಎಂದು ಕೂಗುತ್ತಿದ್ದಾರೆ.

https://youtu.be/XctuE8Anu9c

ಆದರೆ ನಾವು ಇತಿಹಾಸವನ್ನು ಪರಿಶೀಲಿಸಿದರೆ ಅದು ಗಾಂಧಿಯೇ ಹೊರತು ಗಾಂಧಿ ಅಲ್ಲ.

ಹಾಗೆಯೇ  ಪ್ರಿಯಾಂಕಗಾಂಧಿ ಅವರ ಮಗ ರೆಹಾನ್ ರಾಜೀವ್ ಗಾಂಧಿ ಹೇಗಾದ? ತನ್ನ ತಾಯಿಯ ಅಜ್ಜನ ಹೆಸರನ್ನು ಆತ ಏಕೆ ಬಳಸುತ್ತಿದ್ದಾನೆ?” ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದೆಡೆ  ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ.ರವಿ(CT Ravi) ಈ ಕುರಿತು ಟ್ವೀಟ್‌ ಮಾಡಿದ್ದು, 

“ನೆಹರೂ ಮಗಳು ಇಂದಿರಾ ಪ್ರೀಯದರ್ಶಿನಿ(Indira Priyadarshini)  ಆಗಿದ್ದವಳು, ಇಂಧಿರಾ ಗಾಂಧಿ  ಎಂದು ಹೆಸರು ಬದಲಾವಣೆ ಮಾಡಿಕೊಂಡಿರುವುದೇ, ಸ್ವತಂತ್ರ ಭಾರತದ ಅತಿದೊಡ್ಡ ಹಗರಣ” ಎಂದಿದ್ಧಾರೆ.

ಪ್ರಧಾನಿ ಮೋದಿಯವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್‌, “ಇಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತವರಿಗೆ ಭಾರತದ ಸಂಸ್ಕೃತಿ ಗೊತ್ತಿಲ್ಲ ಅಥವಾ ಅರ್ಥವಾಗುವುದಿಲ್ಲ.

ಹೀಗಾಗಿಯೇ ಈ ರೀತಿಯಾಗಿ ಮಾತನಾಡುತ್ತಾರೆ. ಯಾರು ಯಾರು ತಾಯಿಯ ಅಜ್ಜನ ಉಪನಾಮವನ್ನು ಬಳಸುತ್ತಿದ್ದೀರಾ? ಎಂದು ನೀವು ದೇಶದ ಯಾವುದೇ ವ್ಯಕ್ತಿಯನ್ನು ಕೇಳಬಹುದೇ? ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

Exit mobile version