ಕೊರೊನಾ ಎಫೆಕ್ಟ್: ಶಾಶ್ವತವಾಗಿ ಪರದೆ ಮುಚ್ಚಿದ ಮೈಸೂರಿನ “ಲಕ್ಷ್ಮೀ” ಟಾಕೀಸ್

ಮೈಸೂರು, ಜೂ. 13: ಮಹಾಮಾರಿ ಕೊರೊನಾ ಹೊಡೆತಕ್ಕೆ ಈಗಾಗಲೇ ಹಲವು ಚಿತ್ರಮಂದಿರಗಳು ಸಂಪೂರ್ಣವಾಗಿ ಪರದೆ ಮುಚ್ಚಿದ್ದು, ಈ ಸಾಲಿಗೆ ಇದೀಗ ಮೈಸೂರಿಗರ ಮನೆಮಾತಾಗಿದ್ದ ಮತ್ತೊಂದು ಚಿತ್ರಮಂದಿರ ಸೇರ್ಪಡೆಗೊಂಡಿದೆ.

ಹೌದು,ಚ

ಈ ಸಾಲಿಗೆ ಮೈಸೂರಿಗರಿಗೆ ಚಿರಪರಿಚಿತವಾಗಿದ್ದ “ಲಕ್ಷ್ಮಿ” ಟಾಕೀಸ್ ಸೇರಿದ್ದು, ಕೊರೊನಾ ಸಂಕಷ್ಟದಿಂದ ಬಾಗಿಲು ಮುಚ್ಚಿರುವ ಲಕ್ಷ್ಮಿ ಚಿತ್ರಮಂದಿರ ಇದೀಗ ಇತಿಹಾಸದ ಪುಟ ಸೇರಿದೆ. ಇದರೊಂದಿಗೆ 71 ವರ್ಷಗಳ ಇತಿಹಾಸಯುಳ್ಳ ಮೈಸೂರಿನ ಲಕ್ಷ್ಮಿ ಟಾಕೀಸ್ ತನ್ನ ಆಟ ನಿಲ್ಲಿಸಿದೆ.

ಏಳು ದಶಕಗಳ ಕಾಲ ಸಿನಿ ಪ್ರಿಯರನ್ನು ರಂಜಿಸಿದ್ದ ಲಕ್ಷ್ಮೀ ಚಿತ್ರಮಂದಿರ ಕೊರೊನಾ ಹೊಡೆತಕ್ಕೆ ಸಿಲುಕಿ ತತ್ತರಿಸಿತ್ತು. ಇದರಿಂದ ಎದುರಾದ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಚಿತ್ರಮಂದಿರು ಮಾಲೀಕರು ಮುಚ್ಚಲು ನಿರ್ಧರಿಸಿದ್ದಾರೆ.

ಉದ್ಯಮ ನಷ್ಟದಿಂದ ಲಕ್ಷ್ಮೀ ಚಿತ್ರಮಂದಿರ ಮುಚ್ವುವ ನಿರ್ಧಾರ ಕೈಗೊಳ್ಳಲಾಗಿದೆ. 1949 ರಿಂದ ಇಲ್ಲಿಯವರಿಗೆ ಸಿನಿ ಪ್ರಿಯರ ರಂಜಿಸುತ್ತಿದ್ದ ಚಿತ್ರಮಂದಿರ. ಇನ್ನು ಮುಂದೆ ನೆನಪಿನಲ್ಲಿ ಮಾತ್ರ ಉಳಿಯಲಿದೆ. ಮೈಸೂರಿಗರಿಗೆ ಹಲವು ನೆನಪುಗಳನ್ನು ನೀಡಿರುವ ಲಕ್ಷ್ಮೀ ಟಾಕೀಸ್ ನಲ್ಲಿ ಕನ್ನಡ ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಕಂಡಿದೆ.

Exit mobile version