ಕೋವಿಡ್‌ಗೆ ಹೆದರಿ ಮೂರು ವರ್ಷ ಈ ಮಹಿಳೆ ಮಾಡಿದ್ದೇನು ಗೊತ್ತಾ? ; ಕಾರಣ ತಿಳಿದ್ರೆ ಒಮ್ಮೆ ಶಾಕ್‌ ಆಗ್ತೀರಿ!

Gurugram : ಗುರುಗ್ರಾಮ್ನಲ್ಲಿ ಮಹಿಳೆಯೊಬ್ಬರು ಕೋವಿಡ್ -19(Covid-19) ಸೋಂಕಿಗೆ ಒಳಗಾಗುತ್ತೇನೆ ಎಂಬ ಭಯದ ಭೀತಿಯಿಂದ ಮೂರು ವರ್ಷಗಳ ಕಾಲ ತನ್ನ 7 ವರ್ಷದ ಮಗನೊಂದಿಗೆ ಮನೆಯೊಳಗೆ ಅವಿತು (corona fear for lady) ಕುಳಿತು ಜೀವನ ಮಾಡಿದ್ದಾರೆ!

Corona virus

ಹೌದು, 35 ವರ್ಷ ವಯಸ್ಸಿನ ಮಹಿಳೆಯೊಬ್ಬರು 2020 ರಲ್ಲಿ ಶುರುವಾದ ಮೊದಲ ಕೋವಿಡ್ ಅಲೆಯಲ್ಲಿ ಕೋವಿಡ್(Covid) ಸೋಂಕಿಗೆ

ಒಳಗಾಗುವ ಭಯದಿಂದ ಮೂರು ವರ್ಷಗಳ ಕಾಲ ತನ್ನ 7 ವರ್ಷದ ಮಗನೊಂದಿಗೆ ಗುರುಗ್ರಾಮ್ನಲ್ಲಿರುವ(Gurugram) ತಮ್ಮ ನಿವಾಸದೊಳಗೆ ಅಡಗಿ ಜೀವನ ಸಾಗಿಸಿರುವ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಈ ಹಿಂದೆ ಆ ಮನೆಗೆ ಮುಂಬಾಗಿಲಿನಲ್ಲಿ ಬೀಗ ಹಾಕಲಾಗಿತ್ತು. ಇದನ್ನು ಕಂಡ ನೆರೆಹೊರೆಯವರು ಹಲವು ಬಾರಿ ಅನುಮಾನ ವ್ಯಕ್ತಪಡಿಸಿದ್ದರು!

ಆದ್ರೆ, ಈ ಬಗ್ಗೆ ಪೊಲೀಸರು ಆಕೆಯ ಪತಿಯಿಂದ ಹೆಚ್ಚು ಮಾಹಿತಿ ಕಲೆಹಾಕಿ, ಮಕ್ಕಳ ಕಲ್ಯಾಣ ತಂಡದ ನೆರವಿನಿಂದ ಮಂಗಳವಾರ ಮಹಿಳೆ ಮತ್ತು ಆಕೆಯ ಮಗನನ್ನು ಮನೆಯಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.


ಕಳೆದ ಮೂರು ವರ್ಷದಿಂದ ಮಹಿಳೆ ತನ್ನ ಮಗನ ಜೊತೆಗೆ ಬಾಗಿಲು, ಕಿಟಕಿ ತೆರೆಯದೆ ಸೂರ್ಯನ ಬೆಳಕು ಅಥವಾ ಹೊರಗಿನ ಸಂಪರ್ಕವಿಲ್ಲದೆ,

ಬರೋಬ್ಬರಿ ಮೂರು ವರ್ಷಗಳ ಕಾಲ ಒಳಗೆ ಹೇಗೆ ಬದುಕಿದರು? ಎಂಬ ಸಂಗತಿ ಪೊಲೀಸರಿಗೆ ಅಶ್ಚರ್ಯವನ್ನುಂಟು ಮಾಡಿದೆ! ಗುರುಗ್ರಾಮ್‌ನ ಮಾರುತಿ ವಿಹಾರ್ (Maruti vihar)ಕಾಲೋನಿಯ ನಿವಾಸಿ 35 ವರ್ಷದ ಮಹಿಳೆ,

ಕೋವಿಡ್‌ಗೆ ತುತ್ತಾಗಬಹುದೆಂಬ ಭಯದಿಂದ ತನ್ನ ಮಗನೊಂದಿಗೆ ಮನೆಯೊಳಗೆ ಬೀಗ ಹಾಕಿಕೊಂಡಿದ್ದಾಳೆ.

ಮಹಿಳೆ 2020 ರಿಂದ ಮನೆಯೊಳಗೆ ಜೀವಿಸಿದ್ದಳು! ತನ್ನ ಪತಿ ಹೊರೆಗೆ ಕೆಲಸ ಮಾಡುತ್ತಿದ್ದ ಕಾರಣ ಆತನನ್ನು ಮನೆಗೆ ಪ್ರವೇಶಿಸಲು ಸಹ ಅನುಮತಿಸದೇ ಹೊರಗೆ ನೂಕಿ,

ಬಾಗಿಲಿಗೆ ಬೀಗ ಹಾಕಿದ್ದಾಳೆ! ಪತಿ ತನ್ನ ಸ್ನೇಹಿತನ ಮನೆಯಲ್ಲಿ ಹಲವಾರು ತಿಂಗಳುಗಳ ಕಾಲ ಇದ್ದು, ತದನಂತರ ಹತ್ತಿರದ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸಲು ಪ್ರಾರಂಭಿಸಿದ್ದನು ಎನ್ನಲಾಗಿದೆ.

ವಿಡಿಯೋ ಕಾಲ್ ಮೂಲಕ ಪತ್ನಿ ಮತ್ತು ಮಗನ ಜತೆ ಆಗಾಗ ಸಂಪರ್ಕದಲ್ಲಿದ್ದ. ಇದಲ್ಲದೆ, ಪ್ರತಿ ತಿಂಗಳು ತನ್ನ ಪತ್ನಿಯ ಖಾತೆಗೆ ಹಣವನ್ನು ವರ್ಗಾಯಿಸಿದ್ದಾನೆ.

ಮಹಿಳೆ ತರಕಾರಿಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿಕೊಳ್ಳುತ್ತಿದ್ದಳು!


ಡೆಲಿವರಿ ಬಾಯ್ ಪಾರ್ಸೆಲ್ ಅನ್ನು ಬಾಗಿಲಲ್ಲೇ ಇಟ್ಟು ಹೋಗುತ್ತಿದ್ದ. ಹಲವು ಬಾರಿ ಪತಿಯೇ ಮನೆಯ (corona fear for lady) ಸಾಮಾನುಗಳನ್ನು ತಂದು ಬಾಗಿಲಲ್ಲಿ ಇಟ್ಟು ಹೋಗುತ್ತಿದ್ದ.

ಆ ವಸ್ತುವನ್ನು ತೆಗೆದುಕೊಳ್ಳಲು ಮುಖಕ್ಕೆ ಮಾಸ್ಕ್‌ ಧರಿಸಿ, ಆಕೆ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಸ್ಯಾನಿಟೈಸ್ ಮಾಡುತ್ತಿದ್ದಳು.

ಆಕೆ ಒಮ್ಮೆಯೂ ಕಸ ಎಸೆಯಲು ಹೊರಗೆ ಹೋಗಿಲ್ಲ ಮತ್ತು ಪೊಲೀಸರು ಆಕೆಯ ಮನೆಗೆ ಪ್ರವೇಶಿಸಿದಾಗ ಮನೆಯ ತುಂಬ ಕಸದ ರಾಶಿಯೇ ಸಿಕ್ಕಿದೆ!!

ಎಲ್‌ಪಿಜಿ ಸಿಲಿಂಡರ್‌ಗಳ ಬದಲಿಗೆ ಇಂಡಕ್ಷನ್ ಸ್ಟೌವ್ ಬಳಸಲಾಗಿದೆ : ಮಹಿಳೆ ಕೋವಿಡ್‌ ಬರುವ ಮುನ್ನ ಮನೆಗೆ ಹಾಕಿಸಿಕೊಂಡಿದ್ದ ಎಲ್‌ಪಿಜಿ ಗ್ಯಾಸ್‌ ಉಪಯೋಗಿಸಲಾಗುತ್ತಿತ್ತು,

ಆದ್ರೆ, ಮಹಿಳೆ ಈ ರೀತಿಯ ಕಟುವಾದ ನಿರ್ಧಾರ ಕೈಗೊಂಡ ಬಳಿಕ ಗ್ಯಾಸ್‌ ಮುಗಿದ ನಂತರ ಇಂಡಕ್ಷನ್ ಸ್ಟೌವ್ನಲ್ಲಿ ಅಡುಗೆ ಮಾಡಲು ಪ್ರಾರಂಭಿಸಿದ್ದಾಳೆ.

ಸಿಲಿಂಡರ್‌ ಆರ್ಡರ್‌ ಮಾಡಿದ್ರೆ, ಅದನ್ನು ವಿತರಿಸಲು ಬರುವ ಜನರಿಂದ ತನಗೆ ಕೋವಿಡ್ -19 ಬರುತ್ತದೆ ಎಂದು ಮಹಿಳೆ ನಂಬಿದ್ದರಿಂದ ಗ್ಯಾಸ್ ಸಿಲಿಂಡರ್‌ಗಳನ್ನು ಆರ್ಡರ್ ಮಾಡುವುದನ್ನು ನಿಲ್ಲಿಸಿದ್ದಳು. ಕಳೆದ ಮೂರು ವರ್ಷಗಳಿಂದ ಇಂಡಕ್ಷನ್ ಸ್ಟೌ ಅನ್ನು ಬಳಸಿ ಆಹಾರ ತಯಾರಿಸಿಕೊಂಡಿದ್ದಾಳೆ ಎನ್ನಲಾಗಿದೆ

Exit mobile version