ಕೊರೋನಾ: ಮಾಧ್ಯಮ ಸಿಬ್ಬಂದಿ ಮೃತಪಟ್ಟರೆ, ಉ.ಪ್ರ ದಲ್ಲಿ ೧೦ಲಕ್ಷ, ಛತ್ತೀಸ್ ಗಢದಲ್ಲಿ ೫ಲಕ್ಷ ರೂ ಪರಿಹಾರ ಧನ

ಲಖನೌ, ಮೇ. 31: ಕೊರೊನಾ ಸಮಯದಲ್ಲೂ ಸದಾ ದುಡಿಯುತ್ತಾ, ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಪತ್ರಕರ್ತರನ್ನು ಗೌರವಿಸುವ, ಪ್ರೋತ್ಸಾಹಿಸುವ ದೃಷ್ಟಿಯಿಂದ, ಕೋವಿಡ್ ನಿಂದ ಮೃತಪಟ್ಟ ಪತ್ರಕರ್ತರ ಕುಟುಂಬ ಸದಸ್ಯರಿಗೆ ₹10 ಲಕ್ಷ ಪರಿಹಾರ ಹಣ ನೀಡುವುದಾಗಿ ಮುಖ್ಯಮಂತ್ರಿಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

‘ಹಿಂದಿ ಪತ್ರಿಕೋದ್ಯಮ ದಿನಾಚರಣೆಯ’ ಸಂದರ್ಭದಲ್ಲಿ ಈ ವಿಷಯ ತಿಳಿಸಿದ ಅವರು, ‘ಸ್ವಾತಂತ್ರ್ಯ ಚಳವಳಿಯಿಂದ ಇಂದಿನವರೆಗೆ ಹಿಂದಿ ಪತ್ರಿಕೋದ್ಯಮವು ಸಾಮಾಜಿಕ ಜಾಗೃತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡಿದರು. ಪತ್ರಕರ್ತರಿಗೆ ಎಲ್ಲ ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ ಮತ್ತು ಅವರನ್ನು ಪ್ರೋತ್ಸಾಹಿಸುವುದನ್ನು ಮುಂದುವರಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಇದೇ ರೀತಿ ಛತ್ತೀಸ್ ಗಢ ಸರ್ಕಾರವು ಸಹ, ಕರ್ತವ್ಯ ನಿರತ ಮಾಧ್ಯಮ ಬಂಧುಗಳು ಕೋವಿಡ್ ನಿಂದ ಮೃತಪಟ್ಟರೆ, ೫ಲಕ್ಷ ರೂ ಪರಿಹಾರ ಧನವನ್ನು ಘೋಷಿಸಿದೆ. ಜೊತೆಗೆ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಧ್ಯಮ ಸಿಬ್ಬಂದಿಗಳ ಚಿಕಿತ್ಸಾ ವೆಚ್ಚವನ್ನು ಕೂಡ ಸರ್ಕಾರ ಭರಿಸಲಿದೆ. ಅಲ್ಲದೆ, ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿರುವವರಿಗೆ ಆಸ್ಪತ್ರೆ ವೆಚ್ಚವನ್ನು ಮರುಪಾವತಿಸಲಿದೆ.

Exit mobile version