ಕೊರೊನಾ ಲಸಿಕೆ: ಭಾರತದ ಸರದಿ ಯಾವಾಗ? ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ

ದೆಹಲಿ, ಡಿ. 23: ಈಗಾಗಲೇ ವಿಶ್ವದ 23 ಲಕ್ಷ ಮಂದಿಗೆ ಕೊರೊನಾ ಲಸಿಕೆ ತಲುಪಿದೆ. ಭಾರತದ ಸರದಿ ಯಾವಾಗ ಬರುತ್ತದೆ? ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಚೀನಾವು ಕೊರೊನಾ ಲಸಿಕೆ ಹಾಕುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿವೆ. ನಂತರದ ಸ್ಥಾನಗಳಲ್ಲಿ ಅಮೇರಿಕಾ, ಬ್ರಿಟನ್‌‌‌, ರಷ್ಯಾ ಇದೆ ಎಂದು ತಿಳಿಸಿದ್ದಾರೆ. ಈಗಾಗಲೇ ವಿಶ್ವದ 23 ಲಕ್ಷ ಮಂದಿಗೆ ಕೊರೊನಾ ಲಸಿಕೆ ತಲುಪಿದೆ. ಚೀನಾ, ಅಮೇರಿಕಾ, ಯುಕೆ, ರಷ್ಯಾದಲ್ಲಿ ಕೊರೊನಾ ಲಸಿಕೆ ಹಾಕುವ ಪ್ರಕ್ರಿಯೆ ಪ್ರಾರಂಭವಾಗುತ್ತಿದೆ. ಭಾರತದ ಸರದಿ ಯಾವಾಗ ಎಂದು ಪ್ರಶ್ನಿಸಿದ್ದಾರೆ.

Exit mobile version