ಕೊರೊನಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು ಡಿ 3 : ಕರ್ನಾಟಕದಲ್ಲಿ ಒಮಿಕ್ರಾನ್‌ ಕಾಣಿಸಿಕೊಂಡ ಹಿನ್ನಲೆಯಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.  ಇಂದು ಸಿಎಂ ಬೊಮ್ಮಾಯಿ ಅವರು ಹಲವು ಸಚಿವ ಮತ್ತು ತಜ್ಞರೊಂದಿಗೆ ಮಾತನಾಡಿ ಕೆಲ ಕಠಿಣ ಕ್ರಮ ಜಾರಿಗೊಳಿಸಲು ತೀರ್ಮಾನಿಸಿದ್ದಾರೆ.

ಈ ಕುರಿತು ಸಭೆಯ ಬಳಿಕ ಮಾತಾನಾಡಿದ ಸಚಿವ ಆರ್ ಅಶೋಕ್, ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ವರದಿಯ ಪ್ರಕಾರ ಒಮಿಕ್ರಾನ್ ಹೆಚ್ಚಿನ ತೀವ್ರತೆ ಹೊಂದಿಲ್ಲ. ಇದರಿಂದ ಯಾವುದೇ ಸಾವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದರು.

ಕೊರೊನಾದ ಹೊಸ  ಮಾರ್ಗಸೂಚಿಗಳು

ಕಂಟ್ರೋಲ್ ರೂಂ ಮತ್ತೆ ಆರಂಭ ಮಾಡಲಾಗುವುದು. ಪ್ರತಿ ದಿನ ಒಂದು ಲಕ್ಷ ಟೆಸ್ಟ್ ಮಾಡಲು ತೀರ್ಮಾನ ಮಾಡಲಾಗಿದೆ. ಕೋವಿಡ್ 2 ಅಲೆಯ ಸಂದರ್ಭದಲ್ಲಿ ಮಾಡಿರುವ ಆಕ್ಸಿಜನ್ ಹಾಗೂ ಐಸಿಯು ಬೆಡ್ ಸಿದ್ಧಗೊಳಿಸಲು ಸೂಚನೆ ನೀಡಲಾಗಿದೆ. ಕಳೆದ ಬಾರಿ ಉಂಟಾದ ಔಷಧಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗವುದು ಎಂದು ಆರ್.ಅಶೋಕ್ ಹೇಳಿದರು.

Exit mobile version