ಆಂಧ್ರ ವಿಶ್ವವಿದ್ಯಾನಿಲಯದ ೧೦೨ ವಿಧ್ಯಾರ್ಥಿಗಳಿಗೆ ತಗುಲಿದೆ ಕೊರೋನಾ

ಹೈದರಾಬಾದ್, ಮಾ. 29: ವಿಶಾಖಪಟ್ಟಣಂನಲ್ಲಿರುವ ಆಂಧ್ರ ವಿಶ್ವವಿದ್ಯಾಲಯ (AU)ದ ಎಂಜಿನಿಯರಿಂಗ್ ಕಾಲೇಜಿನ 102 ವಿದ್ಯಾರ್ಥಿಗಳಿಗೆ ಕೊವಿಡ್ ತಗುಲಿದ್ದು, ಕಾಲೇಜಿನ ಹಾಸ್ಟೆಲ್ ನ್ನು ಐಸೋಲೆಷನ್ ವಾರ್ಡ್ ಆಗಿ ಪರಿವರ್ತಿಸಲಾಗಿದೆ. ಶನಿವಾರ 50 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿತ್ತು. ಭಾನುವಾರ ಕೊವಿಡ್ ಪರೀಕ್ಷೆ ನಡೆಸಿದಾಗ 102 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತರಲ್ಲಿ 96 ವಿದ್ಯಾರ್ಥಿಗಳು, 5 ಮಂದಿ ಕಾಲೇಜು ಸಿಬ್ಬಂದಿ ಮತ್ತು ಓರ್ವ ವಿದ್ಯಾರ್ಥಿನಿ ಇದ್ದಾರೆ ಎಂದು ಕಾಲೇಜು ಅಧಿಕೃತರು ಹೇಳಿರುವುದಾಗಿ ಮಾಹಿತಿ ಇದೆ.

ವಿಶ್ವವಿದ್ಯಾಲಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿಗೆ ಭೇಟಿ ನೀಡಿದ ರಾಜ್ಯ ಪ್ರವಾಸೋದ್ಯಮ ಸಚಿವ ಎಂ.ಎಸ್ ಶ್ರೀನಿವಾಸ ರಾವ್ ಅವರು ವಿಶ್ವವಿದ್ಯಾಲಯದಲ್ಲಿ ಸೋಂಕು ಹರಡದಂತೆ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಸೋಂಕಿತ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದ ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಿ ಇನ್ನೊಂದು ಐಸೋಲೇಷನ್ ಬ್ಲಾಕ್ ನಲ್ಲಿ ಅವರನ್ನು ನಿಗಾದಲ್ಲಿರಸಲಾಗಿದೆ. ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ 550 ಹಾಸಿಗೆ, ವಿಶಾಖ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (VIMS)ನಲ್ಲಿ 650 ಹಾಸಿಗೆಗಳಿದ್ದು, ತುರ್ತು ಸಂದರ್ಭದಲ್ಲಿ ಇವುಗಳನ್ನು ಬಳಸಬಹುದು ಎಂದು ಸಚಿವರು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಆಂಧ್ರ ಪ್ರದೇಶದಲ್ಲಿ 1,005 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,95,920 ಆಗಿದೆ. ಅದರಲ್ಲಿ 8,83,321 ಮಂದಿ ಚೇತರಿಸಿಕೊಂಡಿದ್ದಾರೆ. 7,205ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 5,394 ರೋಗಿಗಳು ಚಿಕಿತ್ಸೆಯಲ್ಲಿದ್ದಾರೆ ಎಂಬ ಮಾಹಿತಿ ಇದೆ.

Exit mobile version