New Delhi: ಒಂದು ತಿಂಗಳ ಗಂಡು ಮಗುವನ್ನು ಅಪಹರಿಸಿದ ಆರೋಪದ ಮೇಲೆ ದಂಪತಿಯನ್ನು (Couple caught stealing baby) ಪೊಲೀಸರು ಬಂಧಿಸಿದ ಬಂಧಿಸಿದ ಘಟನೆ ನಡೆದಿದೆ.
ಟ್ಯಾಗೋರ್ ಗಾರ್ಡನ್ಸ್(Tagore Gardens) ರಘುಬೀರ್ನಗರ ನಿವಾಸಿಗಳಾದ ಸಂಜಯ್ ಗುಪ್ತಾ (41) (Sanjay Gupta) ಮತ್ತು ಅನಿತಾ ಗುಪ್ತಾ (36) (Anita Gupta)ಬಂಧಿತರು. ದಂಪತಿಯ
17 ವರ್ಷದ ಮಗ ಕಳೆದ ವರ್ಷ ಸಾವನ್ನಪ್ಪಿದ್ದ. ಮುಂಬರುವ ರಕ್ಷಾಬಂಧನ(Raksha Bandhana) ಹಬ್ಬಕ್ಕೆ ರಾಖಿ ಕಟ್ಟಲು ಮಗಳು ತನಗೆ ಸಹೋದರ ಬೇಕೆಂದು ಹಠ ಹಿಡಿದಿದ್ದಳು.
ಈ ಹಿನ್ನೆಲೆಯಲ್ಲಿ ಮಗಳ ಆಸೆ ಈಡೇರಿಸಲು ದಂಪತಿ ಕಳ್ಳತನ ಮಾಡಿ (Couple caught stealing baby) ಇದೀಗ ಸಿಕ್ಕಿಬಿದ್ದಿದ್ದಾರೆ.

ಗುರುವಾರ ಮುಂಜಾನೆ 4.34 ರ ಸುಮಾರಿಗೆ, ಅಂಗವಿಕಲ ಮಹಿಳೆಯ ಮಗುವನ್ನು ಅಪಹರಿಸಲಾಗಿದೆ ಎಂದು ವರದಿ ಮಾಡಲು ಪೊಲೀಸರನ್ನು ಕರೆಯಲಾಯಿತು. ಚಟ್ಟಾ ರೈಲ್ ಚೌಕ್ನ
(Chatta Rail Chowk) ಪಾದಚಾರಿ ಮಾರ್ಗದಲ್ಲಿ ವಾಸಿಸುತ್ತಿದ್ದ ದೂರುದಾರ ದಂಪತಿಗಳು ಬೆಳಗಿನ ಜಾವ 3 ಗಂಟೆಗೆ ಎಚ್ಚರಗೊಂಡು ತಮ್ಮ ಮಗು ಕಾಣೆಯಾಗಿರುವುದನ್ನು ಪತ್ತೆ ಮಾಡಿದರು.
ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ : ಅನಾರೋಗ್ಯ ಕಾರಣ ನೀಡಿ ಪತ್ನಿ ಹಾಗೂ ಮಕ್ಕಳಿಗೆ ಜೀವನಾಂಶ ನೀಡುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು : ಹೈಕೋರ್ಟ್ ಆದೇಶ
ಘಟನೆಗೆ ಸಂಬಂಧಿಸಿದಂತೆ, ಪೊಲೀಸರು(Police) ಸಮೀಪದ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು (CCTV Camera) ಪರಿಶೀಲಿಸಿದಾಗ, ಆ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ
ಅಲೆದಾಡುತ್ತಿರುವುದನ್ನು ಅವರು ಗಮನಿಸಿದರು. ಆ ಬೈಕ್ ಸಂಜಯ್ (Sanjay)ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಆರೋಪಿ ದಂಪತಿ ಮತ್ತು ಅಪಹರಣಕ್ಕೊಳಗಾದ
ಮಗುವನ್ನು ಟ್ಯಾಗೋರ್ ಗಾರ್ಡನ್ನ ರಘುಬೀರ್ ನಗರದಲ್ಲಿರುವ ಸಿ-ಬ್ಲಾಕ್ನಲ್ಲಿ (C Block) ಪೊಲೀಸರು ಪತ್ತೆ ಹಚ್ಚಿರುವುದಾಗಿ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ
(Ayukt sagar singh kalsi) ಹೇಳಿದ್ದಾರೆ.

ತಮ್ಮ ಹದಿಹರೆಯದ ಮಗ ಟೆರೇಸ್ನಿಂದ ಬಿದ್ದು ಕಳೆದ ವರ್ಷ ಆಗಸ್ಟ್ 17 ರಂದು ಸಾವನ್ನಪ್ಪಿದ್ದಾನೆ ಮತ್ತು ಮುಂಬರುವ ರಕ್ಷಾ ಬಂಧನದಂದು ರಾಖಿ ಕಟ್ಟಲು ಸಹೋದರನನ್ನು ಅವರ 15 ವರ್ಷದ
ಮಗಳು ಕೇಳುತ್ತಿದ್ದಳು ಎಂದು ಸಂಜಯ್ ಮತ್ತು ಅನಿತಾ ಬಹಿರಂಗಪಡಿಸಿದರು. ಆದ್ದರಿಂದ ಗಂಡುಮಗುವನ್ನು ಅವರು ಅಪಹರಿಸಲು ನಿರ್ಧರಿಸಿದರು. ತನ್ನ ತಾಯಿಯಿಂದ ಸ್ವಲ್ಪ ದೂರದಲ್ಲಿ ಛಟ್ಟಾ
ರೈಲ್ ಚೌಕ್ ಬಳಿ ಮಲಗಿದ್ದ ಈ ಶಿಶುವನ್ನು ದಂಪತಿ ಕಂಡುಕೊಂಡು ಅಪಹರಿಸಿದ್ದಾರೆ.
ಇದನ್ನೂ ಓದಿ : ಸಾಲ ಪಡೆದ ವ್ಯಕ್ತಿ ವಕೀಲನೇ ಆಗಿರಲಿ, ನ್ಯಾಯಾಧೀಶರಾಗಿರಲಿ ರಕ್ಷಣೆ ನೀಡಲಾಗದು: ಹೈಕೋರ್ಟ್ ಸ್ಪಷ್ಟನೆ
ಈ ಹಿಂದೆ ಮೂರು ಪ್ರಕರಣಗಳಲ್ಲಿ ಸಹ ವೃತ್ತಿಯಲ್ಲಿ ಟ್ಯಾಟೂ ಆರ್ಟಿಸ್ಟ್ (Tattoo Artist) ಆಗಿರುವ ಈ ಸಂಜಯ್ ಭಾಗಿಯಾಗಿದ್ದು, ಪತ್ನಿ ಅನಿತಾ ಮೆಹಂದಿ (Mehendi) ಕಲಾವಿದೆ ಎಂದು
ಪೊಲೀಸರು ತಿಳಿಸಿದ್ದಾರೆ. ಇತ್ತ ಎರಡೂ ಕೈ ಮತ್ತು ಕಾಲುಗಳಿಗೆ ಮಗುವಿನ ತಾಯಿ ಅಂಗವಿಕಲರಾಗಿದ್ದಾರೆ ಮತ್ತು ಅವರ ತಂದೆ ಚಿಂದಿ ಆಯುವವರಾಗಿದ್ದಾರೆ. ಅವರು ನಿರಾಶ್ರಿತರಾಗಿದ್ದು,
ಫುಟ್ಪಾತ್ನಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದರು.
ರಶ್ಮಿತಾ ಅನೀಶ್