Bengaluru: ಸಾಲ (Loan)ಪಡೆಯುವವರು ವಕೀಲರಾಗಲಿ(HighCourt about loan recover) ಅಥವಾ ಹಾಲಿ ನ್ಯಾಯಾಧೀಶರಾಗಲಿ(Judge), ಸಾಲಗಾರನು ಸಾಲಗಾರನಾಗಿದ್ದಾನೆ.
ಆದ್ದರಿಂದ, ಬ್ಯಾಂಕ್ ಸಾಲ ವಸೂಲಾತಿಗೆ ಮುಂದಾದಾಗ ಯಾವುದೇ ರಕ್ಷಣೆ ಇಲ್ಲ ಎಂದು ಹೈಕೋರ್ಟ್ (High Court)ಸ್ಪಷ್ಟಪಡಿಸಿದೆ. ಸಾಲ ವಸೂಲಿ ಮಾಡುವ ಬ್ಯಾಂಕ್ ಜಾರಿ ಕ್ರಮದಿಂದ
ರಕ್ಷಣೆ ಕೋರಿ ಹಿರಿಯ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಕೃಷ್ಣ ಎಸ್. ದೀಕ್ಷಿತ್‌ನಲ್ಲಿ(Krishna s Deekshith) ನ್ಯಾಯಾಧೀಶರು ಈ ಮಹತ್ವದ ತೀರ್ಪು ನೀಡಿದ್ದಾರೆ.

ತೀರ್ಪಿನಲ್ಲಿ, ಅರ್ಜಿದಾರರು ಸುಬ್ರಹ್ಮಣೇಶ್ವರ ಕೋ-ಆಪರೇಟಿವ್ ಬ್ಯಾಂಕ್ (Subrahmaneshwar co-operative bank) ನಿಂದ ಸಾಲ ಪಡೆದಿದ್ದಾರೆ ಮತ್ತು ಸಾಲವನ್ನು ಮರುಪಾವತಿಸಲು
ಗಂಭೀರವಾಗಿ ವಿಳಂಬ ಮಾಡಿದ್ದಾರೆ. ನಂತರ ಸಾಲ ವಸೂಲಿಗೆ ಬ್ಯಾಂಕ್ (Bank) ಮುಂದಾದ ನಂತರ ಅರ್ಜಿದಾರರು ಹೈಕೋರ್ಟ್ ರಕ್ಷಣೆ ಕೋರಿದ್ದು, ಹಲವು ಅವಕಾಶಗಳನ್ನು ಸಾಲ ಹಿಂದಿರುಗಿಸಲು
ನ್ಯಾಯಾಲಯ ನೀಡಿದೆ. ನಿಗದಿತ ಸಮಯದಲ್ಲಿ ಸಾಲ ವಾಪಸ್ ನೀಡುವ ಕುರಿತು ಸ್ವತಃ ಅರ್ಜಿದಾರರು ಭರವಸೆ ನೀಡಿದ್ದಾರೆ.ಹೀಗೆ ಅವರು ಸಾಲವನ್ನು ಮರುಪಾವತಿಸಲು ಹಲವಾರು
ಅವಕಾಶಗಳಿದ್ದರೂ (HighCourt about loan recover) ಕೂಡ ವಿಫಲರಾದರು.
ಇದನ್ನೂ ಓದಿ : ಚಂದ್ರಯಾನ- 3 : ಚಂದಿರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯುವ ಸಮಯ ಬಹಿರಂಗ, ಲ್ಯಾಂಡಿಂಗ್ ಪ್ರಕ್ರಿಯೆ ವೀಕ್ಷಿಸುವುದು ಹೇಗೆ?
ಬ್ಯಾಂಕ್ ಸಾಲಗಾರನು ಸಾಕಷ್ಟು ಸಮಯವನ್ನು ನೀಡಿದ ನಂತರ ಸಾಲವನ್ನು ಮರುಪಾವತಿಸಲು ವಿಫಲವಾದಾಗ, ಸಾಲ ನೀಡಿದ ಬ್ಯಾಂಕ್ ಬಲವಂತವಾಗಿ ಬಾಕಿ ಇರುವ ಸಾಲ ವಸೂಲಿಗೆ ಮುಂದಾಗಬಹುದು.
ಅಂತಹ ಸಂದರ್ಭಗಳಲ್ಲಿ, ನ್ಯಾಯಾಲಯಗಳು (Court) ರಕ್ಷಣೆ ನೀಡಲು ಸಾಧ್ಯವಿಲ್ಲ. ಇನ್ನು ಈ ಬಗ್ಗೆ ಹೈಕೋರ್ಟ್ ಈ ಅರ್ಜಿದಾರರು ವಕೀಲರಾಗಿದ್ದಾರೆ ಒಂದು ವೇಳೆ ಇವರಿಗೆ ನ್ಯಾಯಾಲಯವು ಮುಲಾಜು
ತೋರಿಸಿದರೆ ಸಮಾಜದ ಟೀಕೆಗೆ ಗುರಿಯಾಗಬೇಕಾಗುತ್ತದೆ. ಅರ್ಜಿದಾರರ ಮನವಿಯನ್ನು ಹೀಗಾಗಿ ಪರಿಗಣಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಅಲ್ಲದೆ ಅವರ ಅರ್ಜಿ ವಜಾಗೊಳಿಸಿದೆ.
ಇದೇ ವೇಳೆ ತನ್ನ ಬಾಕಿ ವಸೂಲಿಗೆ ಬ್ಯಾಂಕ್ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲು ಮುಕ್ತವಾಗಿದೆ ಎಂದು ಸ್ಪಷ್ಟಪಡಿಸಿದೆ.
ಪ್ರ

ಕರಣದ ಹಿನ್ನೆಲೆ: ಸುಬ್ರಮಣ್ಯಶ್ವರ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ 1.50 ಕೋಟಿ ರೂಪಾಯಿ ಸಾಲವನ್ನು ಹೈಕೋರ್ಟ್ ನ ಹಿರಿಯ ವಕೀಲರಾಗಿರುವ ಅರ್ಜಿದಾರರು ಪಡೆದಿದ್ದರು. ಈ ಬ್ಯಾಂಕ್ ಸಾಲವನ್ನು
ಬಡ್ಡಿ ಸಹಿತ ಒಟ್ಟು 120 ಕಂತುಗಳಲ್ಲಿ ಮರುಪಾವತಿ ಮಾಡಬೇಕಿತ್ತು. ಕೋವಿಡ್ (Covid)ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿ ಬರಬೇಕಾದ ಹಣ ಬರಲಿಲ್ಲವಾದ್ದರಿಂದ ಸಾಲದ ಕಂತುಗಳು ಬಾಕಿ ಉಳಿದಿದ್ದವು.
ಇದನ್ನೂ ಓದಿ : BPL Card ಸರ್ವೇ: ನಕಲಿ ಬಿಪಿಎಲ್ ಕಾರ್ಡ್‌ದಾರರಿಗೆ ಕಾದಿದೆ ಶಾಕ್ ! ಅಸಲಿ-ನಕಲಿ ಸರ್ವೆಗೆ ಮುಂದಾಗಿದೆ ಆಹಾರ ಇಲಾಖೆ
ಇನ್ನು ಸಂಬಂಧ ಪಟ್ಟ ಬ್ಯಾಂಕ್ ಹಲವು ಬಾರಿ ಸಾಲ ಮರುಪಾವತಿಗೆ ಸೂಚಿಸಿ ನೋಟಿಸ್ (Notice) ನೀಡಿದ ನಂತರವೂ ಹಾಗೆಯೇ ಬಾಕಿ ಸಾಲ ಉಳಿದಿತ್ತು. ಅಂತಿಮವಾಗಿ ಅರ್ಜಿದಾರರಿಂದ ಬಲವಂತವಾಗಿ
ಸಾಲ ವಸೂಲಾತಿ ಪ್ರಕ್ರಿಯೆ ಯನ್ನು ಬ್ಯಾಂಕ್ ಬೇರೆ ದಾರಿ ಕಾಣದೆ ಪ್ರಾರಂಭಿಸಿತ್ತು. ಅರ್ಜಿದಾರರು ಆಸ್ತಿ ಹರಾಜಿಗೆ ಮುಂದಾಗಿದ್ದ ಬ್ಯಾಂಕ್ ಕ್ರಮ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.
ರಶ್ಮಿತಾ ಅನೀಶ್