ಕೋವಿಡ್ 4ನೇ ಅಲೆಯಿಂದ ಪಾರಾಗಬಹುದು ; ಮಾಸ್ಕ್, ಸಾಮಾಜಿಕ ಅಂತರ ಪಾಲಿಸಿ : ಡಾ. ಕೆ ಸುಧಾಕರ್!

Dr sudhakar

ರಾಜ್ಯದಲ್ಲಿ(State) ಕೋವಿಡ್ 4ನೇ(Covid19) ಅಲೆಯ ಮುನ್ಸೂಚನೆ ಎದುರಾಗಿದ್ದು, ರಾಜ್ಯದ ಆರೋಗ್ಯ ಸಚಿವ(Health Minister) ಡಾ. ಕೆ ಸುಧಾಕರ್(Dr. Sudhakar) ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಅವರೊಟ್ಟಿಗೆ ನಡೆಸಿದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ 4ನೇ ಅಲೆ ಆವರಿಸುವ ಮುನ್ಸೂಚನೆ ಲಭಿಸಿದೆ.

ಈ ಕಾರಣ ಈಗಾಗಲೇ ನಮ್ಮ ಆರೋಗ್ಯ ಇಲಾಖೆ ಕೋವಿಡ್ 4ನೇ ಅಲೆ ಎದುರಿಸಲು ಮುನ್ನೆಚ್ಚರಿಕೆ ಮತ್ತು ಪೂರ್ವಸಿದ್ಧತೆಗಳ ತಯಾರಿ ಮಾಡಿಕೊಂಡಿದೆ. ಜನಸಾಮಾನ್ಯರು ಆತಂಕ ಪಡುವ ಸಂಗತಿಯೇನಿಲ್ಲ! ಕೋವಿಡ್ 4ನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿ ಕಡ್ಡಾಯವಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರವನ್ನು ಪಾಲಿಸುವುದರಿಂದ ಕೋವಿಡ್ ಸೋಂಕನ್ನು ತಡೆಗಟ್ಟಬಹುದು. ಕೋವಿಡ್ ನಿಯಮಾವಳಿಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಿದರೇ ನಾವು 4ನೇ ಅಲೆಗೆ ಭಯಪಡುವ ಅಗತ್ಯವಿಲ್ಲ. ಗುಂಪು ಸೇರುವ ಸ್ಥಳಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ತಪ್ಪದೇ ಪಾಲಿಸಿ ಹಾಗೂ ಅನವಶ್ಯಕ ಗುಂಪು ಗುಂಪಾಗಿ ಸೇರಬೇಡಿ ಎಂದು ಹೇಳಿದರು.

ಈ ಮಧ್ಯೆ ದೇಶದ ರಾಜಧಾನಿ ನವದೆಹಲಿಯಲ್ಲಿ ಕೋವಿಡ್ 4ನೇ ಅಲೆಯ ಆರ್ಭಟ ವ್ಯಾಪಕವಾಗಿದ್ದು, ಸತತ 5ನೇ ದಿನವೂ ದೆಹಲಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಗೊಂಡಿದೆ. ಈ ಹಿನ್ನೆಲೆ ದೆಹಲಿ ಆಡಳಿತ ಮಂಡಳಿ ಕಳವಳ ವ್ಯಕ್ತಪಡಿಸಿದೆ. ಕೋವಿಡ್ ಸೊಂಕಿತರ ಸಂಖ್ಯೆಯಲ್ಲಿ ಹೀಗೆ ಏರಿಕೆ ಕಂಡುಬಂದರೆ, ಮಕ್ಕಳಿಗೆ ಶಾಲೆಯಲ್ಲಿ ಪಾಠ ಮಾಡುವುದು ಕಷ್ಟಸಾಧ್ಯ! ಮಾರ್ಗವಿಲ್ಲದೇ ಆನ್‍ಲೈನ್ ಅಥವಾ ಪರ್ಯಾಯ ವ್ಯವಸ್ಥೆ ಹುಡುಕಬೇಕಾಗುತ್ತದೆ ಎಂದು ತಿಳಿಸಿದೆ. ಸದ್ಯ ಇದೇ ಮಾದರಿ ಕರ್ನಾಟಕಕ್ಕೂ ಎದುರಾಗಬಹುದಾ ಎಂಬ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಇಂಥ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಬಹುದು.

ಒಟ್ಟಾರೇ ಆರೋಗ್ಯ ಇಲಾಖೆ ಮುಂದಿನ ದಿನಗಳಲ್ಲಿ ಹೊರಡಿಸುವ ಪ್ರಕಟಣೆ, ನಿಯಮಗಳು ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ!

Exit mobile version