ಹೊಸದಿಲ್ಲಿ,ಏ,04: ಬಾಲಿವುಡ್ ನಟ ಅಕ್ಷಯ್ ಕುಮಾರ್ಗೆ ಕೋವಿಡ್ ತಗುಲಿರುವುದು ಭಾನುವಾರ ದೃಢಪಟ್ಟಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ʻನನಗೆ ಕೋವಿಡ್-19 ತಗುಲಿರುವುದು ಇಂದು ಬೆಳಿಗ್ಗೆ ಗೊತ್ತಿಗಿದೆ. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿದ್ದೇನೆ. ಮನೆಯಲ್ಲೇ ಪ್ರತ್ಯೇಕವಾಗಿದ್ದೇನೆʼ ಎಂದು ಹೇಳಿದ್ದಾರೆ.
ʻಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್ ಪರೀಕ್ಷೆಗೆ ಒಳಗಾಗಿ. ಆರೋಗ್ಯದ ಕಡೆ ಗಮನಹರಿಸಿʼ ಎಂದು ತಿಳಿಸಿದ್ದಾರೆ.
53 ವರ್ಷ ವಯಸ್ಸಿನ ನಟ ಅಕ್ಷಯ್ ಕುಮಾರ್ ʻರಾಮ್ ಸೇತುʼ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ತಿಂಗಳು ಸಿನಿಮಾ ಮುಹೂರ್ತದಲ್ಲಿ ಪಾಲ್ಗೊಳ್ಳಲು ನುಸ್ರತ್ ಬಚ್ಚನ್, ಜಾಕ್ವೆಲಿನ್ ಡಿಸೋಜಾ ಅವರೊಂದಿಗೆ ನಟ ಅಕ್ಷಯ್ ಅಯೋಧ್ಯೆಗೆ ಹೋಗಿದ್ದರು.