ರಾಜ್ಯದಲ್ಲಿ ಕೊರೊನಾ ಸೊಂಕಿನ ಆರ್ಭಟ ಮತ್ತಷ್ಟು ಉಪಟಳ.!

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಸೊಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದೆ ಎಂಬ ಖುಷಿ ಜನರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತ್ತಿತ್ತು. ಆದರೆ ಸದ್ಯ ಸಿಕ್ಕಿರುವ ವರದಿಯನ್ನು ಗಮನಿಸಿದರೆ ರಾಜ್ಯದ ಜನರಿಗೆ ಮತ್ತೆ ಅಘಾತ ಎದುರಾಗಿದೆ. ಹೌದು, ಸತತವಾಗಿ ಕೊರೊನಾ ಸೋಂಕಿತರು ಹೆಚ್ಚುತ್ತಿದ್ದು, ಈ ಸಂಖ್ಯೆಯೂ ವೇಗವಾಗಿ ತೊಂದರೆಯನ್ನು ಹೆಚ್ಚಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ಮೂರನೇ ಅಲೆಯ ಅರ್ಭಟ ದಾಖಲೆ ಮಟ್ಟಕ್ಕೆ ಮೀರಲಿದೆ ಎಂಬುದನ್ನು ತಜ್ಞರು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ದೇಶದಲ್ಲಿ ಕೊರೊನಾ ವಿಪರೀತ ಏರಿಕೆಯಾಗಿದ್ದಂತ ಮಹಾರಾಷ್ಟ್ರ ರಾಜ್ಯದಲ್ಲಿ ಇಂದು ಇಳಿಕೆ ಪ್ರಮಾಣ ಕಂಡಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯಲ್ಲಿ ಸಾವಿನ ಸಂಖ್ಯೆ ಎಲ್ಲವೂ ದಾಖಲೆಯಾಗುತ್ತಿದೆ. ಇದೇ ರೀತಿ ಮುಂದುವರಿದರೆ ಕಷ್ಟ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಕುರಿತು ವೈದ್ಯರು ಏನು ಹೇಳಿದ್ದಾರೆ ಎಂಬುದನ್ನು ಮುಂದೆ ತಿಳಿಯೋಣ.

.ಮಹಾರಾಷ್ಟ್ರ ಮತ್ತು ದೆಹಲಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸೋಂಕಿನ ತೀವ್ರತೆ ಅವಧಿ ಮೂರು ವಾರಗಳ ವ್ಯತ್ಯಾಸವಿದೆ. ಕೊರೋನಾ ಮೊದಲೆರಡು ಅಲೆಗಳಲ್ಲಿಯೂ ಮಹಾರಾಷ್ಟ್ರ ದೆಹಲಿಯಲ್ಲಿ ಸೋಂಕು ಏರಿಕೆಯಾಗಿ ಮೂರು ವಾರದ ಬಳಿಕ ಕರ್ನಾಟಕದಲ್ಲಿ ಏರಿಕೆಯಾಗಿತ್ತು. ಮೂರನೇ ಅಲೆಯಲ್ಲಿಯೂ ಇದೇ ರೀತಿ ಮುಂದುವರೆದಿದೆ. ಸದ್ಯ ಮಹಾರಾಷ್ಟ್ರ, ದೆಹಲಿಯಲ್ಲಿ ಸೋಂಕು ತಗ್ಗಿದ್ದು, ನಮ್ಮಲ್ಲಿ ಫೆಬ್ರವರಿ ಎರಡನೇ ವಾರದಲ್ಲಿ ಇಳಿಕೆಯಾಗಬಹುದು ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.


ರಾಜ್ಯದಲ್ಲಿ ಕೊರೋನಾ ಹೊಸ ಪ್ರಕರಣ, ಪಾಸಿಟಿವಿಟಿ ದರ ನೋಡಿದರೆ ಸೋಂಕು ಉಚ್ಛ್ರಾಯ ಸ್ಥಿತಿಯಲ್ಲಿದೆ. ಮಹಾರಾಷ್ಟ್ರ, ದೆಹಲಿಯಲ್ಲಿ ಈಗಾಗಲೇ ಏರಿಕೆಯಾಗಿ ತಗ್ಗಿದ್ದು, ಮುಂದಿ ಎರಡು ವಾರದಲ್ಲಿ ರಾಜ್ಯದಲ್ಲಿಯೂ ತೀವ್ರತೆ ತಗ್ಗಬಹುದು ಅಂತ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್, ಮಂಜುನಾಥ್ ತಿಳಿಸಿದ್ದಾರೆ.
ಕೋವಿಡ್ ಸೋಂಕು ದಿನೇದಿನೇ ಹೆಚ್ಚುತ್ತಿದ್ದರೂ ಅದು ಒಬ್ಬರಿಂದ ಒಬ್ಬರಿಗೆ ಹರಡುವ ಪ್ರಮಾಣ ನಿರಂತರವಾಗಿ ಇಳಿಕೆಯಾಗುತ್ತಿದ್ದು, ಮುಂದಿನ 14 ದಿನಗಳಲ್ಲಿ ದೇಶದಲ್ಲಿ ಮೂರನೇ ಅಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಐಐಟಿ ಮದ್ರಾಸ್ನ ಅಧ್ಯಯನ ಹೇಳಿದೆ.

Exit mobile version