ಹಸುವಿನ ಸಗಣಿ ತಿಂದರೆ ನಾರ್ಮಲ್‌ ಡೆಲಿವರಿ ಆಗುತ್ತೆ : ಆರ್‌ಎಸ್‌ಎಸ್‌ ಮುಖಂಡ ಪ್ರಮುಖ್‌ ಶಂಕರ್‌ಲಾಲ್‌

Viral News: ಗರ್ಭಿಣಿಯರು ದೇಶಿ ಹಸುವಿನ ಸಗಣಿ ತಂದರೆ ನಾರ್ಮಲ್‌ ಡೆಲಿವರಿ ಆಗುತ್ತದೆ. ಹೀಗಾಗಿ ಎಲ್ಲ ಮಹಿಳೆಯರು ಪ್ರತಿದಿನ ದೇಶಿ ಹಸುವಿನ ಸಗಣಿ ತಿನ್ನುವುದು ಉತ್ತಮ ಎಂದು(cowdung help normal delivery) ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ್‌ ಭಾರತೀಯ ಗೋಸೇವಾ ಪ್ರಮುಖ್‌(RSS Akhil Bharatiya Goseva Pramukh) ಶಂಕರ್‌ಲಾಲ್‌(Shankarlal) ಅವರು ನೀಡಿರುವ ಹೇಳಿಕೆ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇದಕ್ಕೂ ಮುನ್ನ ಇತ್ತೀಚೆಗೆ ವೈದ್ಯರೊಬ್ಬರು ಕೂಡಾ ದೇಶಿ ಹಸುವಿನ ಸಗಣಿ ತಿಂದರೆ ಯಾವುದೇ ರೋಗಗಳು ಬರುವುದಿಲ್ಲ ಎಂದು ಹೇಳಿ, ವಿಡಿಯೋದಲ್ಲಿ ತಾವೇ ಸ್ವತಃ ಸಗಣಿ ತಿಂದು ಅದರ ಮಹತ್ವವನ್ನು ಸಾರಿದ್ದರು.

ವೈದ್ಯರ ಈ ವಿಡಿಯೋ ಕೂಡಾ ಸಾಮಾಜಿಕ ತಾಲತಾಣದಲ್ಲಿ(Social Media) ಭಾರೀ ವೈರಲ್‌ಆಗಿತ್ತು. ವೈದ್ಯರ ಈ ನಡೆಯನ್ನು ಅನೇಕರು ಟೀಕಿಸಿದ್ದರು.

ಯಾವುದೇ ವೈದ್ಯಕೀಯ ಆಧಾರಗಳಿಲ್ಲದೇ, ಈ ರೀತಿಯಾಗಿ ತಪ್ಪು ಸಂದೇಶ ನೀಡಬಾರದು ಎಂದು ವಾದಿಸಿದ್ದರು.

ಇದೀಗ ಆರ್‌ಎಸ್‌ಎಸ್‌(RSS) ಮುಖಂಡ ಶಂಕರ್‌ಲಾಲ್‌ ಅವರು ಕೂಡಾ ಅದೇ ರೀತಿಯ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಇನ್ನು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಸುವಿಗೆ ವಿಶೇಷ ಸ್ಥಾನವಿದೆ. ಹಸುವನ್ನು ನಾವು ಗೋಮಾತೆ ಎಂದು ಪೂಜಿಸುತ್ತೇವೆ. ದೇಶಿ ಹಸುವಿನ ಗೋಮೂತ್ರವನ್ನು (cowdung help normal delivery) ಪರಿಶುದ್ದ ಮತ್ತು ಪವಿತ್ರ ಎಂದು ಭಾವಿಸಲಾಗುತ್ತದೆ.

ತಟ್ಟಿದರೆ ಬೆರಣಿಯಾಗುವೆ, ಸುಟ್ಟರೆ ಬೂದಿಯಾದೆ ಎಂಬ ಮಾತು ಕೇಳಿರುತ್ತೀರ. ಅದು ನಿಜ, ಹಸುವಿನ ದೇಹದ ಅನೇಕ ಭಾಗಗಳು ಮಾನವನಿಗೆ ಉಪಯೋಗಕ್ಕೆ ಬರುತ್ತವೆ.

ಹೀಗಾಗಿಯೇ ನಮ್ಮ ಹಿರಿಯರು ಹಸುವಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಆದರೆ ಸಗಣಿ ತಿಂದರೆ ನಾರ್ಮಲ್‌ ಡೆಲಿವರಿ(Normal Delivery) ಆಗುತ್ತದೆ ಎಂಬುದಕ್ಕೆ ಯಾವುದೇ ವೈದ್ಯಕೀಯ ಆಧಾರಗಳಿಲ್ಲ.

ಇದು ಕೇವಲ ಉತ್ಪ್ರೇಕ್ಷಿತ ಹೇಳಿಕೆ ಮಾತ್ರ.

ಇದನ್ನೂ ಓದಿ: ಪದ್ಮವಿಭೂಷಣ ಪ್ರಶಸ್ತಿಯನ್ನು ಕರ್ನಾಟಕ ಜನತೆಗೆ ಅರ್ಪಿಸುತ್ತೇನೆ : ಎಸ್. ಎಂ ಕೃಷ್ಣ

ಅದೇ ರೀತಿ ಕೆಲವರು ಹಸುವಿನ ಸಗಣಿ ಮತ್ತು ಗೋಮೂತ್ರ ಸೇವಿಸಿದರೆ ದೇಹ ಮತ್ತು ಮನಸ್ಸು ಶುದ್ದವಾಗುತ್ತದೆ ಎಂದು ಹೇಳುತ್ತಾರೆ.

ಆದರೆ ಈ ರೀತಿಯ ಹೇಳಿಕೆಗಳನ್ನು ನಂಬುವುದಕ್ಕೂ ಮೊದಲು ಅದರ ಕುರಿತು ಒಂದಷ್ಟು ಅಧ್ಯಯನ ಮಾಡುವುದು ಮುಖ್ಯ.

ದೇಶಿ ಹಸುವಿನ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟ ಹೊಂದಿರುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಗಣಿ ತಿಂದರೆ ನಾರ್ಮಲ್‌ ಡೆಲಿವರಿ ಆಗುತ್ತದೆ ಎಂಬ ಹೇಳಿಕೆಗೆ ಯಾವುದೇ ವೈದ್ಯಕೀಯ ಆಧಾರವಿಲ್ಲ.

Exit mobile version