ಹಸುಗಳಿಗೆ ಬಾಯಿಯ ಮೇಲ್ಭಾಗದಲ್ಲಿ ಹಲ್ಲುಗಳು ಇಲ್ಲ, ಯಾಕೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಉತ್ತರ!

ನಮ್ಮ ದೇಶದಲ್ಲಿ, ಪುರಾತನ ಕಾಲದಿಂದಲೂ ಹಸುವಿಗೆ(Cow) ತಾಯಿಯ ಸ್ಥಾನಮಾನ ನೀಡಲಾಗಿದೆ. ಹಸುವಿಗೆ ಸಂಬಂಧಿಸಿದ ಎಲ್ಲವನ್ನೂ ದೈವಿಕವೆಂದು ಪರಿಗಣಿಸಲಾಗುತ್ತದೆ. ಹಸುವಿನ ತುಪ್ಪ, ಹಸುವಿನ ಹಾಲು, ಹಸುವಿನ ಮೂತ್ರ ಮತ್ತು ಹಸುವನ್ನೂ ಕೂಡ ಪೂಜೆಯಲ್ಲಿ ಬಳಸಲಾಗುತ್ತದೆ.


ಭಾರತದಲ್ಲಿ, ಹಸುಗಳು ಬಹಳ ಮುಖ್ಯವಾದ ಪ್ರಾಣಿ ಸಂಪನ್ಮೂಲಗಳಾಗಿವೆ ಮತ್ತು ಕೃಷಿ ಹಾಗೂ ಡೈರಿ ಉದ್ಯಮದಲ್ಲಿ ಹೆಚ್ಚು ಉಪಯುಕ್ತವಾಗಿವೆ. ವರದಿಗಳು ಗಮನಿಸಿದಂತೆ, ‘ಪಂಚಗವ್ಯ’ ಹಸುವಿನಿಂದ ಪಡೆದ ಐದು ಪ್ರಮುಖ ವಸ್ತುಗಳನ್ನು ವಿವರಿಸಲು ಬಳಸುವ ಪದ, ಇದರಲ್ಲಿ ಸೇರಿವೆ ಹಸುವಿನ ಮೂತ್ರ, ಹಾಲು, ತುಪ್ಪ, ಮೊಸರು ಮತ್ತು ಸಗಣಿ. ಎಲ್ಲಾ ಐದು ಉತ್ಪನ್ನಗಳು ಅನೇಕ ಆರೋಗ್ಯ ಅಸ್ವಸ್ಥತೆಗಳ ವಿರುದ್ಧ ಹೋರಾಡುವ ಔಷಧೀಯ ಗುಣಗಳನ್ನು ಹೊಂದಿವೆ ಎಂದು ಅಧ್ಯಯನಗಳು ಪ್ರತಿಪಾದಿಸುತ್ತವೆ.


ಇನ್ನು ಹಸುಗಳ ಹಲ್ಲುಗಳ ಜೋಡಣೆಯೂ ವಿಶಿಷ್ಟವಾಗಿದೆ. ಇದರ ದವಡೆಯ ಮುಖ್ಯ ಲಕ್ಷಣವೆಂದರೆ ಕೆಳಗಿನ ದವಡೆ ಮೇಲಿನದಕ್ಕಿಂತ ಕಿರಿದಾಗಿರುತ್ತದೆ. ಈ ರಚನೆಯಿಂದಗಿ, ಪ್ರಾಣಿಗಳು ಸುಲಭವಾಗಿ ಒಂದು ಬದಿಯಲ್ಲಿ ಅಥವಾ ಇನ್ನೊಂದು ಬದಿಯಲ್ಲಿ ಆಹಾರವನ್ನು ಅಗಿಯಬಹುದು. ಹಸುಗಳ ಮೇಲಿನ ದವಡೆಯಲ್ಲಿ ಬಾಚಿಹಲ್ಲುಗಳು ಮತ್ತು ಕೋರೆಹಲ್ಲುಗಳು ಇರುವುದಿಲ್ಲ. ಅಂತಹ ಹಲ್ಲುಗಳ ಎಲ್ಲಾ ಕಾರ್ಯಗಳನ್ನು ಅದರ ಪ್ಲೇಟ್‌ನಿಂದ ನಿರ್ವಹಿಸಲಾಗುತ್ತದೆ, ಇದು ಕೆಳಗಿನ ಬಾಚಿಹಲ್ಲುಗಳ ಎದುರು ಇರುತ್ತೆ.

ಹಸುಗಳಿಗೆ ಬಾಚಿಹಲ್ಲುಗಳು ಬೇಕಾಗುವುದು ಆಹಾರವನ್ನು ಅಗಿಯುವುದಕ್ಕಾಗಿ ಅಲ್ಲ, ಹುಲ್ಲನ್ನು ನೆಲದಿಂದ ಕೀಳುವ ಸಲುವಾಗಿ. ಎಲ್ಲಾ ಹಲ್ಲುಗಳನ್ನು ಆರ್ಕೇಡ್‌ಗಳಲ್ಲಿ ಜೋಡಿಸಲಾಗಿದೆ, ಅಂದರೆ ಸಾಲುಗಳಲ್ಲಿ, ದನಕರುಗಳಿಗೆ ಆಹಾರವನ್ನು ಬಾಯಿಯಲ್ಲಿ ಚೆನ್ನಾಗಿ ಪುಡಿ ಮಾಡಲು ಅನುವು ಮಾಡಿಕೊಡುತ್ತದೆ.
ಆಹಾರವನ್ನು ಅಗಿಯುವ ಪ್ರಕ್ರಿಯೆಯಲ್ಲಿ ನಾಲಿಗೆ ಪ್ರಮುಖ ಪಾತ್ರ ವಹಿಸುತ್ತದೆ, ಹಸುವಿನ ನಾಲಿಗೆ ಬಹಳ ಒರಟಾಗಿರುತ್ತದೆ.

ಅದು ಆಹಾರವನ್ನು ಗಟ್ಟಿಯಾಗಿ ಬಾಯಿಯೊಳಗೆ ಹಿಡಿದುಕೊಳ್ಳಲು ಮತ್ತು ಆಹಾರವನ್ನು ಸೇವಿಸುವುದರಲ್ಲಿ ಭಾಗವಹಿಸುತ್ತದೆ. ಅಲ್ಲದೆ, ನಾಲಿಗೆ ಆಹಾರವನ್ನು ಚೆನ್ನಾಗಿ ಬೆರೆಸಲು ಅನುವು ಮಾಡಿಕೊಟ್ಟು ನಂತರ ಅದನ್ನು ಅನ್ನನಾಳಕ್ಕೆ ಕಳುಹಿಸುತ್ತದೆ. ವಯಸ್ಕ ಹಸುವಿನ ಹಲ್ಲುಗಳ ಸಂಖ್ಯೆ ಮಾನವರಂತೆಯೇ ಇರುತ್ತದೆ, ಅಂದ್ರೆ 32 ಹಲ್ಲುಗಳಿರುತ್ತವೆ. 8 ಹಲ್ಲುಗಳು ಕೆಳ ದವಡೆಯ ಮೇಲೆ ಪ್ರತ್ಯೇಕವಾಗಿ ಇರುವ ಬಾಚಿಹಲ್ಲುಗಳು, ಮತ್ತು ಉಳಿದ 24 ಸ್ಥಳೀಯವಾಗಿವೆ,

ಅಂದ್ರೆ ಅವು ಮೇಲಿನ ಮತ್ತು ಕೆಳಗಿನ ದವಡೆಯ ಮೇಲೆ ಇರುತ್ತವೆ. ಹಸುವಿನ ಹಲ್ಲುಗಳ ರಚನೆ ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ನಿಜಕ್ಕೂ ಬಹಳ ವಿಶಿಷ್ಟವಾಗಿದೆ ಎಂದೇ ಹೇಳಬಹುದು.

Exit mobile version