ಬೆಂಗಳೂರು, ಏ. 06: ಕನ್ನಡ ಚಿತ್ರರಂಗದ ಕ್ರೇಜಿ಼ ಸ್ಟಾರ್ ನಟ ರವಿಚಂದ್ರನ್ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಡುತ್ತಿದ್ದಾರೆ!
ಅಭಿಮಾನಿಗಳ ಪಾಲಿನ ಪ್ರೀತಿಯ ರವಿಮಾಮಾ ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಆ ಮೂಲಕ ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಮತ್ತು ಯೂಟ್ಯೂಬ್ ನಲ್ಲಿ ಏಕಕಾಲಕ್ಕೆ ಅಧಿಕೃತ ಖಾತೆಗಳನ್ನು ರವಿಚಂದ್ರನ್ ತೆರೆಯಲಿದ್ದಾರೆ.
ಇನ್ನೂ ರವಿಚಂದ್ರನ್ ಅವರು ಸೋಷಿಯಲ್ ಮೀಡಿಯಾಗೆ ಲಗ್ಗೆ ಇಡುತ್ತಿರುವುದು ಫ್ಯಾನ್ಸ್ ಗಳಲ್ಲಿ ಸಂಭ್ರಮ ಮೂಡಿಸಿದೆ. ಈ ಕುರಿತು ಪುಟ್ಟದೊಂದು ಟೀಸರ್ ರೂಪದ ವಿಡಿಯೋ ರಿಲೀಸ್ ಆಗಿದೆ. ಫಿಲ್ಮ್ ಸ್ಟೈಲ್ನಲ್ಲಿ ಸೂಚನೆ ನೀಡಿದ್ದಾರೆ. ನೆಟ್ವರ್ಲ್ಡ್ಗೆ ‘ಕಮಿಂಗ್ ಸೂನ್’ ಅಂತ 10 ಸೆಕೆಂಡ್ ಟೀಸರ್ ರಿವೀಲ್ ಮಾಡಿದ್ದಾರೆ. ಇನ್ಮುಂದೆ ಡೈರೆಕ್ಟ್ ಆಗಿ ಕ್ರೇಜಿಸ್ಟಾರ್ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದು, ಸಿನಿಮಾದ ಬಗ್ಗೆ ಅಪ್ಡೇಟ್ ಕೊಡ್ತಾರೆ.
ಕ್ರೇಜಿಸ್ಟಾರ್ ಅವರ ಡಿಜಿಟಲ್ ಲೋಕದ ಆಗಮನಕ್ಕೆ ಕನ್ನಡ ಚಿತ್ರರಂಗ ಸ್ವಾಗತ ಕೋರಿದೆ. ನಿರ್ದೇಶಕ ರಘುರಾಮ್ ಹಾಗೂ ನಟ ರವಿಶಂಕರ್ ಸೇರಿದಂತೆ ಚಂದನವನದ ತಾರೆಯರು ರವಿಚಂದ್ರನ್ ಅವರ ಆಗಮನಕ್ಕೆ ಶುಭ ಕೋರಿದ್ದಾರೆ. ಅದೇ ರೀತಿ ಸಾಕಷ್ಟು ಅಭಿಮಾನಿಗಳು ಕೂಡ ಉತ್ಸುಕರಾಗಿದ್ದಾರೆ.