Mumbai: ಇದೇ ವರ್ಷ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಬಿಸಿಸಿಐ (BCCI) ಭಾರತದ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಅಜಿತ್ ಅಗರ್ಕರ್ (cricket world cup 2023) ನೇತೃತ್ವದ ಆಯ್ಕೆ
ಸಮಿತಿಯು 15 ಆಟಗಾರರ ತಂಡವನ್ನು ಇಂದು ಅಂತಿಮಗೊಳಿಸಿದೆ. ಈ ವರ್ಷದ ಮೇ ತಿಂಗಳಿನಿಂದ ಯಾವುದೇ ಪಂದ್ಯವನ್ನು ಆಡದಿದ್ದರೂ ಕನ್ನಡಿಗ ಕೆಎಲ್ ರಾಹುಲ್ (K L Rahul) ಅವರನ್ನು
ವಿಶ್ವಕಪ್ ತಂಡಕ್ಕೆ (cricket world cup 2023) ಸೇರಿಸಿಕೊಳ್ಳಲಾಗಿದೆ.

ಸದ್ಯ ಕೆ.ಎಲ್.ರಾಹುಲ್ ಬೆಂಗಳೂರಿನ (Bengaluru) ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ (Cricket Academy fitness) ಮೌಲ್ಯಮಾಪನದಲ್ಲಿ ಉತ್ತೀರ್ಣರಾದ ನಂತರ ಏಷ್ಯಾಕಪ್ನ ಸೂಪರ್
ಫೋರ್ ಹಂತದ ಪಂದ್ಯಗಳಲ್ಲಿ ಆಡಲು ಶ್ರೀಲಂಕಾಕ್ಕೆ (Srilanka) ಹಾರಲು ತಯಾರಿ ನಡೆಸುತ್ತಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ (Tilak Varma) ಮತ್ತು ವೇಗದ ಬೌಲರ್
ಪ್ರಸಿದ್ಧ್ ಕೃಷ್ಣ ಅವರು ಶ್ರೀಲಂಕಾದಲ್ಲಿ ಪ್ರಸ್ತುತ 17ರ ತಂಡದಿಂದ ಹೊರಗುಳಿದ ಇಬ್ಬರು ಆಟಗಾರರಾಗಿದ್ದು, ಏಷ್ಯಾಕಪ್ನಲ್ಲಿ (Asia Cup) ಮೀಸಲು ಆಟಗಾರರಾಗಿರುವ ಸಂಜು ಸ್ಯಾಮ್ಸನ್ ಜೊತೆಗೆ
ಸ್ಥಾನ ವಂಚಿತರಾಗಿದ್ದಾರೆ.
ಸನಾತನ ಧರ್ಮ ಹೇಳಿಕೆ : ಪ್ರಿಯಾಂಕ್ ಖರ್ಗೆ – ಬಿ.ಎಲ್.ಸಂತೋಷ್ ನಡುವೆ ಟ್ವೀಟ್ ಸಮರ
ಇನ್ನು ಇಶಾನ್ ಕಿಶನ್ (Ishan Kishan) ಅವರು ಕೆ.ಎಲ್.ರಾಹುಲ್ ಜೊತೆಗೆ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಆಯ್ಕೆ
ಮಾಡಲಾಗಿದೆ. ಇನ್ನು ಮೊಹಮ್ಮದ್ ಸಿರಾಜ್ (Mohammed Siraj), ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ ಒಳಗೊಂಡ ವೇಗದ ದಾಳಿಯನ್ನು ಬುಮ್ರಾ ಮುನ್ನಡೆಸಿದರೆ, ಕುಲದೀಪ್
ಯಾದವ್, ಅಕ್ಷರ್ ಪಟೇಲ್ (Akshar Patel), ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ಮೂವರು ಆಲ್ರೌಂಡರ್ಗಳಾಗಿದ್ದಾರೆ.

ಇನ್ನು ಭಾರತ ತಂಡವು ತನ್ನ ವಿಶ್ವಕಪ್ ಅಭಿಯಾನವನ್ನು ಅಕ್ಟೋಬರ್ 8 ರಂದು ಚೆನ್ನೈನಲ್ಲಿ (Chennai) ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ಆರಂಭಿಸುತ್ತದೆ. ಈ ಬಾರಿ ವಿಶ್ವಕಪ್ ಗೆಲ್ಲುವ ನೆಚ್ಚಿನ
ತಂಡಗಳಲ್ಲಿ ಭಾರತವು ಒಂದಾಗಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (Shreyas Aiyar), ಕೆಎಲ್ ರಾಹುಲ್ (WK), ಇಶಾನ್ ಕಿಶನ್ (WK), ಸೂರ್ಯಕುಮಾರ್ ಯಾದವ್,
ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ (Ravindra Jadeja), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್
ಸಿರಾಜ್ಭಾ ರತ, ಪಾಕಿಸ್ತಾನ (Pakistan), ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ (New Zealand), ಬಾಂಗ್ಲಾದೇಶ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ಸ್ಕಾಟ್ಲೆಂಡ್ ಮತ್ತು ಶ್ರೀಲಂಕಾ ತಂಡಗಳು
ಈ ಬಾರಿಯ ವಿಶ್ವಕಪ್ನಲ್ಲಿ ಭಾಗಿಯಾಗಲಿವೆ.