ಸ್ಟೈಡರ್ ಮ್ಯಾನ್ ಆಗಿ ಸಿನಿಲೋಕಕ್ಕೆ ಕಾಲಿಟ್ಟ ಟೀಂ ಇಂಡಿಯಾದ ಸ್ಟಾರ್ ಪ್ಲೇಯರ್ ಶುಭಮನ್ ಗಿಲ್

ಶುಭಮನ್ ಗಿಲ್ (Shubman Gill) ಭಾರತೀಯ ಕ್ರಿಕೆಟ್‌ನ (Cricket) ಅತ್ಯುತ್ತಮ ಯುವ ಬ್ಯಾಟ್ಸ್‌ಮನ್‌ (Batsman). ಇದೀಗ ಕ್ರಿಕೆಟ್ ತೊರೆದಿರುವ ಅವರು ಸಿನೆಮಾ ಕ್ಷೇತ್ರದತ್ತ ತಮ್ಮ ಹೆಜ್ಜೆ ಇಟ್ಟಿದ್ದಾರೆ.

ಅನಿಮೇಟೆಡ್ ಚಲನಚಿತ್ರ ಸ್ಟೈಡರ್ ಮ್ಯಾನ್ (Spider Man) : ಅಕ್ರಾಸ್ ದಿ ಸ್ಟೈಡರ್-ವರ್ಸ್‌ನಲ್ಲಿ (Across the Spider-Verse) ಭಾರತೀಯ ಸ್ಪೈಡರ್ ಮ್ಯಾನ್‌ಗೆ ಧ್ವನಿ ನೀಡಲಿದ್ದಾರೆ ಶುಭಮನ್ ಗಿಲ್.

ಅಕ್ರಾಸ್ ದಿ ಸ್ಟೈಡರ್-ವರ್ಸ್‌ನ ಟ್ರೇಲರ್ ಜೂನ್ 2 ರಂದು ಟ್ರೇಲರ್ (Trailer) ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಸೋನಿ ಪಿಕ್ಚರ್ಸ್ ಇಂಡಿಯಾ (Sony Pictures India) ಈ ದೃಶ್ಯಾವಳಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಚಿತ್ರದ ಹಿಂದಿ (Hindi version) ಮತ್ತು ಪಂಜಾಬಿ ಆವೃತ್ತಿಗಳಿಗೆ ಶುಭಮಾನ್ ಗಿಲ್ ಧ್ವನಿ ನೀಡುವುದನ್ನು ಖಚಿತಪಡಿಸಿದ್ದಾರೆ. ಈ ಚಿತ್ರವನ್ನು ಎರಡು ಭಾಷೆಗಳಿಗೆ ಡಬ್ಬಿಂಗ್ ಮಾಡಿದ ಅನುಭವವನ್ನೂ ಶುಭಮನ್ ಗಿಲ್ ಹಂಚಿಕೊಂಡಿದ್ದಾರೆ.

ನಾನು ಸ್ಟೈಡರ್ ಮ್ಯಾನ್ ಸಿನಿಮಾಗಳನ್ನು ನೋಡುತ್ತಾ ಬೆಳೆದೆ. ಮೊದಲ ಬಾರಿಗೆ ಭಾರತೀಯ ಸ್ಟೈಡರ್ ಮ್ಯಾನ್ ಅನ್ನು ತೆರೆಯ ಮೇಲೆ ಬಿಡುಗಡೆ ಮಾಡುತ್ತಿದ್ದಾರೆ. ನಮ್ಮ ಭಾರತೀಯ ಸ್ಟೈಡರ್‌ಮ್ಯಾನ್ ಆದ ಪವಿತ್ ಪ್ರಭಾಕರ್ (Pavit Prabhakar) ಅವರಿಗೆ ಹಿಂದಿ ಮತ್ತು ಪಂಜಾಬಿಯಲ್ಲಿ (Panjabi version) ಧ್ವನಿ ನೀಡುವುದು ನನಗೆ ವಿಭಿನ್ನ ಅನುಭವ ನೀಡಿದೆ ಅಂದಿದ್ದಾರೆ ಶುಭಮನ್‌ ಗಿಲ್‌.

ಈ ಸಿನಿಮಾದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ. ಇದೀಗ ಚಿತ್ರತಂಡ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿದ್ದು, ಜೂನ್ 2 ದೇಶಾದ್ಯಂತ ಸೈಡರ್ ಮ್ಯಾನ್ ಅಭಿಮಾನಿಗಳಿಗೆ ದೊಡ್ಡ ಕ್ಷಣವಾಗಲಿದೆ.

ಈ ಚಿತ್ರವು “ಸ್ಪೈಡರ್ ಮ್ಯಾನ್ ನೋ ವೇ ಹೋಮ್’ (Spider-Man No Way Home) ನಲ್ಲಿ ಮಾಡಿದಂತೆಯೇ ಇದೆ. ಶುಭಮನ್ ಗಿಲ್ ಅವರು ಧ್ವನಿ ನೀಡಿದ ಈ ಚಿತ್ರವನ್ನು ನೋಡಲು ನಾವು ಉತ್ಸುಕರಾಗಿದ್ದೇವೆ ಏಕೆಂದರೆ ಅವರು ಕೇವಲ ಯೂತ್ ಐಕಾನ್ ಮಾತ್ರವೇ ಅಲ್ಲ ನಿಜವಾದ ಹೀರೋ ಕೂಡ ಆಗಿದ್ದಾರೆ.

ಶುಭಮನ್ ಗಿಲ್ ಐಪಿಎಲ್ 2023 (IPL 2023) ರಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ಪರ ಆಡುತ್ತಿದ್ದಾರೆ ಮತ್ತು ಉತ್ತಮ ಸ್ಥಿತಿಯಲ್ಲಿದ್ದಾರೆ. ಇವರು ಇದುವರೆಗೆ 11 ಪಂದ್ಯಗಳಲ್ಲಿ 46.90 ಸರಾಸರಿಯೊಂದಿಗೆ 469 ರನ್ ಗಳಿಸಿದ್ದಾರೆ ಮತ್ತು ನಾಲ್ಕು ಅರ್ಧ ಶತಕಗಳನ್ನು ಗಳಿಸಿದ್ದಾರೆ, ಅಷ್ಟೇ ಅಲ್ಲದೆ 143.43 ಸ್ಟೈಕ್ ರೇಟ್ ಅನ್ನು ಹೊಂದಿದ್ದಾರೆ

Exit mobile version