CRPFನಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

CRPFನಿಂದ ಸ್ಪೆಷಲಿಸ್ಟ್ ಮೆಡಿಕಲ್ ಆಫೀಸರ್ (Specialist Medical Officer) ಮತ್ತು GDMO (General Duty Medical Officers) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ crpf.gov.in ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಇರಲಿದ್ದು, 2021ರ ನವೆಂಬರ್ 22 ಮತ್ತು ನವೆಂಬರ್ 29 ದೇಶದ ವಿವಿಧ ಕೇಂದ್ರಗಳಲ್ಲಿ ವಾಕ್-ಇನ್- ಇಂಟರ್ವ್ಯೂ (Walk In Interview) ನಡೆಸಲಾಗುತ್ತದೆ. ಬೆಂಗಳೂರಿನ ಸಿಆರ್‌ಪಿಎಫ್ ಕಾಂಪೋಸಿಟ್ ಹಾಸ್ಟಿಟಲ್‌ನಲ್ಲೂ 29 ರಂದು ಸಂದರ್ಶನ ನಡೆಯಲಿದೆ. ಆಸಕ್ತ ಭಾಗಹಿಸಬಹುದು. ಬೆಂಗಳೂರು ಮಾತ್ರವಲ್ಲದೇ ದೇಶದ ವಿವಿಧೆಡೆ ಈ ಸಂದರ್ಶನ ನಡೆಯಲಿದೆ. 

ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF), ಈ ನೇಮಕಾತಿ  ಅಭಿಯಾನದಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿಗಳ (Specialist Medical Officer)  29 ಹುದ್ದೆಗಳು ಹಾಗೂ ಜಿಡಿಎಂಒ (General Duty Medical Officers) 31 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. 

ಸ್ಪೆಷಲಿಸ್ಟ್ ವೈದ್ಯಕೀಯ ಅಧಿಕಾರಿ ಹುದ್ದೆಗೆ ಆಯ್ಕೆಯಾಗುವ ಆಗುವ ಅಭ್ಯರ್ಥಿಗಳಿಗೆ ಮಾಸಿಕ 85,000 /-  ರೂ. ವೇತನ ಪಡೆಯಬಹುದು. ಹಾಗೇ ಜಿಡಿಎಂಒ (General Duty Medical Officers) ಹುದ್ದೆಗೆ ಮಾಸಿಕ 75,000 /- ರೂ. ವೇತನ ಸಿಗಲಿದೆ.

ಅಭ್ಯರ್ಥಿಯು ಸಂಬಂಧಪಟ್ಟ ವಿಶೇಷದಲ್ಲಿ ಅಂದ್ರೆ ಮೆಡಿಕಲ್ (Medical) ವಿಭಾಗದಲ್ಲಿ ಪದವಿ (Degree) / ಡಿಪ್ಲೊಮಾ (Diploma) ಹೊಂದಿರಬೇಕು. ಜೊತೆಗೆ ಪದವಿ ನಂತರ ಒಂದೂವರೆ ವರ್ಷಗಳ ಅನುಭವ ಅಥವಾ ಡಿಪ್ಲೊಮಾ ಪಡೆದ ನಂತರ ಎರಡೂವರೆ ವರ್ಷಗಳ ಅನುಭವ ಹೊಂದಿರಬೇಕು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿ ಗರಿಷ್ಟ 70 ವರ್ಷಗಳಾಗಿರುತ್ತದೆ. ಇನ್ನು GDMO (General Duty Medical Officers) ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಯು MBBS ಅಥವಾ ಇಂಟರ್ನ್‌ಶಿಪ್ (Internship) ಮಾಡಿರಬೇಕು. ಎಂದು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

Exit mobile version