ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಕಿಲ್ಲ; ಕೋಲಾಹಲ ಸೃಷ್ಟಿಸಿದ ಸಿಟಿ ರವಿ ಹೇಳಿಕೆ

Bengalore :  ವಿಧಾನಸಭಾ ಚುನಾವಣೆಗೆ (Assembly election) ಕ್ಷಣಗಣನೆ ಶುರುವಾಗಿರುವ ಹೊತ್ತಿನಲ್ಲೇ  ಬಿಜೆಪಿ (BJP) ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ನೀಡಿರುವ ಹೇಳಿಕೆ ಇದೀಗ(CT Ravi statement) ರಾಜ್ಯ ಬಿಜೆಪಿಯಲ್ಲಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ.  ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಸಮುದಾಯ ಬಿಜೆಪಿಯಿಂದ ದೂರ ಸರಿಯುತ್ತಿದೆ.

ಹೀಗಾಗಿ ರಾಜ್ಯ ರಾಜಕೀಯದಲ್ಲಿ ಲಿಂಗಾಯತ ನಾಯಕರಿಗೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.‌ಯಡಿಯೂರಪ್ಪ (B.S Yediyurappa) ಮತ್ತು

ಅವರ ಬೆಂಬಲಿಗರು ಕೂಡಾ  ಪಕ್ಷದ ಹೈಕಮಾಂಡ್‌ ಹೇಳಿದಂತೆ ಕೇಳಬೇಕು ಎಂದು  ಸಿಟಿ ರವಿ ನೀಡಿರುವ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು,

ಇದು  ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದೇ ವೇಳೆ ಯಡಿಯೂರಪ್ಪನವರ ಪುತ್ರ ವಿಜಯೇಂದ್ರಗೆ (B. Y. Vijayendra) ಟಿಕೆಟ್‌ನೀಡುವ ಕುರಿತು ಮಾತನಾಡಿದ ಸಿಟಿ ರವಿ,

  ವಿಜಯೇಂದ್ರಗೆ ಟಿಕೆಟ್‌ನೀಡುವ ವಿಚಾರವನ್ನು ಯಡಿಯೂರಪ್ಪನವರ ಮನೆಯ ಕಿಚನ್‌ನಲ್ಲಿ ನಿರ್ಧಾರ ಮಾಡುವುದಿಲ್ಲ.

ಸ್ವತಃ ಯಡಿಯೂರಪ್ಪನವರು ಕೂಡಾ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ.

ಇದನ್ನೂ ಓದಿ : https://vijayatimes.com/nikhil-kumaraswamy-statement/

ಬಿಜೆಪಿಯಲ್ಲಿ ಇದಕ್ಕಾಗಿ ಹೈಕಮಾಂಡ್‌ ಇದ್ದು, ನಮ್ಮ ಚುನಾವಣಾ ಸಮಿತಿ ಈ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳುವ ಮೂಲಕ ಸಿಟಿ ರವಿ  (CT Ravi statement) ಪಕ್ಷದೊಳಗಿನ ಭಿನ್ನಮತವನ್ನು ಬೀದಿಗೆ ತಂದಿದ್ದಾರೆ ಎನ್ನಲಾಗ್ತಿದೆ.

ಇನ್ನು ರಾಜ್ಯದಲ್ಲಿ ಈಗಾಗಲೇ ಲಿಂಗಾಯತ ಸಮುದಾಯ (Lingayat community) ಮೀಸಲಾತಿ ವಿಚಾರದಲ್ಲಿ ಬಿಜೆಪಿ ಮೇಲೆ  ಮುನಿಸಿಕೊಂಡಿದೆ. 

ಇನ್ನೊಂದೆಡೆ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದ ಯಡಿಯೂರಪ್ಪನವರನ್ನು  ಅಧಿಕಾರದಿಂದ ಕೆಳಗಿಳಿಸಿ ಅವಮಾನ ಮಾಡಲಾಗಿದೆ ಎಂಬ ಅಸಮಾಧಾನವೂ ಲಿಂಗಾಯತ ಸಮುದಾಯದಲ್ಲಿದೆ.

ಇದೇ ಹೊತ್ತಿನಲ್ಲಿ ಸಿಟಿ ರವಿ ನೀಡಿರುವ ಈ ಹೇಳಿಕೆ  ಬಿಜೆಪಿ ಮೇಲೆ ಗಂಭೀರ ಪರಿಣಾಮ ಬೀರುವ  ಸಾಧ್ಯತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ : https://vijayatimes.com/r-ashoka-vs-siddaramaiah/

ಇನ್ನೊಂದೆಡೆ ಯಡಿಯೂರಪ್ಪ  ಪುತ್ರ ವಿಜಯೇಂದ್ರ ಟಿಕೆಟ್‌ ನೀಡುವ ವಿಚಾರದಲ್ಲಿ ಸಿಟಿ ರವಿ ನೀಡಿರುವ ಹೇಳಿಕೆ ಲಿಂಗಾಯತ ಮುಖಂಡರನ್ನು ಕೆರಳಿಸಿದೆ.

ಬಿಜೆಪಿಯಲ್ಲಿ ಇದೀಗ ಲಿಂಗಾಯತರು ವರ್ಸಸ್‌ ಅದರ್ಸ್‌ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ. ವಿ ಸೋಮಣ್ಣ (V.Somanna), ನಾರಾಯಣಗೌಡ ಸೇರಿದಂತೆ ಅನೇಕ ನಾಯಕರು  ಪಕ್ಷ ಬೀಡುವ ಸಿದ್ದತೆಯಲ್ಲಿದ್ದಾರೆ.

ಇನ್ನೊಂದೆಡೆ  ಪ್ರಮುಖ ರಾಜ್ಯ ನಾಯಕರ ನಡುವೆ ತಿಕ್ಕಾಟ ನಡೆಯುತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾಗಿ ಟಿಕೆಟ್‌ ಹಂಚಿಕೆಯಾದ ನಂತರ ಬಿಜೆಪಿ ಭಿನ್ನಮತ ಇನ್ನಷ್ಟು ಸ್ಪೋಟಗೊಳ್ಳುವ ಸಾಧ್ಯತೆಯಿದೆ.

Exit mobile version