ಭೀಮಾನದಿ ತೀರದಲ್ಲಿ ನಿಷೇದಾಜ್ಞೆ ಜಾರಿ: ವಿದ್ಯುತ್ ಸಂಪರ್ಕ ಕಡಿತ, ಹೆಸ್ಕಾಂ ವಿರುದ್ಧ ರೈತರ ಆಕ್ರೋಶ

Vijayapura: ಮಹಾರಾಷ್ಟ್ರದ (Maharashtra) ಉಜನಿ ಜಲಾಶಯದಿಂದ ವಿಜಯಪುರದ ಭೀಮಾನದಿಗೆ ನೀರು (Curfew Imposed in Bhima River) ಬಿಡುಗಡೆ ಹಿನ್ನೆಲೆ ಜಿಲ್ಲೆಯ ಚಡಚಣ

ಹಾಗೂ ಇಂಡಿ ತಾಲೂಕಿನ ಭೀಮಾನದಿ ತೀರದ ನದಿ ತಟದ 100 ಮೀಟರ್ ಅಂತರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದ್ದು, ಅಧಿಕಾರಿಗಳು ನದಿ ತಟದ ಗ್ರಾಮಗಳ ಸುತ್ತಮುತ್ತಲ ಭಾಗಗಳಲ್ಲಿ

ವಿದ್ಯುತ್ ಸಂಪರ್ಕ ಕಟ್ ಮಾಡಿದ್ದಾರೆ. ಹಾಗಾಗಿ (Curfew Imposed in Bhima River) ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಡಿ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು, ಜಿಲ್ಲಾಧಿಕಾರಿ ಟಿ ಭೂಬಾಲನ್ (T Bhubhalan) ಸೂಚನೆ ಮೇರೆಗೆ ನಿಷೇದಾಜ್ಞೆ ಜಾರಿ ಮಾಡಿದ್ದಾರೆ. ನದಿ ತಟದ ಗ್ರಾಮಗಳ ಸುತ್ತಮುತ್ತಲ

ಭಾಗಗಳಲ್ಲಿ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ನೀರಿನ ಅಭಾವ ಉಂಟಾಗಬಾರದು ಮತ್ತು ನದಿಯ ನೀರನ್ನು ಕೃಷಿಗೆ ಬಳಕೆ

ಮಾಡಬಾರದೆಂದು ವಿದ್ಯುತ್ ಸಂಪರ್ಕ ಕಟ್ (Power Line Cut) ಮಾಡಲಾಗಿದೆ.

ಹೆಸ್ಕಾಂ ಕಚೇರಿಗೆ ರೈತರ ಮುತ್ತಿಗೆ
ಚಡಚಣ ಪಟ್ಟಣದ ಹೆಸ್ಕಾಂ (Hescom) ಕಚೇರಿಗೆ ರೈತರು ಮುತ್ತಿಗೆ ಹಾಕಿದ್ದು, ಅಧಿಕಾರಿಗಳ ಕ್ರಮಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಶೀಲ್ದಾರ್ ಹಾಗೂ ಹೆಸ್ಕಾಂ ಅಧಿಕಾರಿಗಳ ಜೊತೆಗೆ

ರೈತರು ವಾಗ್ವಾದ ನಡೆಸಿದ್ದಾರೆ. ನದಿ ನೀರನ್ನು ಬಳಕೆ ಮಾಡದಂತೆ ಕ್ರಮ ಕೈಗೊಳ್ಳಿ. ಆದರೆ ನದಿ ಭಾಗದ ವಿದ್ಯುತ್ ಕಟ್ ಮಾಡಿದ್ದು ಯಾಕೆ ಎಂದು ರೈತರು ಪ್ರಶ್ನೆ ಮಾಡಿದ್ದಾರೆ.

ಕೂಡಲೇ ವಿದ್ಯುತ್ ಸಂಪರ್ಕ ನೀಡಬೇಕೆಂದು ಒತ್ತಾಯಿಸಿದ್ದು, ಪ್ರತಿಭಟನೆ ವೇಳೆ ಅಧಿಕಾರಿಗಳ ಎದುರು ರೈತರು ದೀರ್ಘ ದಂಡ ನಮಸ್ಕಾರ ಹಾಕಿ ಮನವಿ ಮಾಡಿದ್ದಾರೆ. ವಿದ್ಯುತ್ ಸಂಪರ್ಕ ನೀಡದಿದ್ದರೆ

ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ನದಿ ಭಾಗದಲ್ಲಿನ ಜಮೀನಿನಲ್ಲಿ ಬಾವಿ, ಕೊಳವೆ ಬಾವಿಗಳಿವೆ. ವಿದ್ಯುತ್ ಇಲ್ಲದೇ ಬೆಳೆಗಳಿಗೆ ನೀರು ಬಿಡುವುದು ಹೇಗೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕಲಬುರಗಿ (Kalburgi) ಜಿಲ್ಲೆಯ ಜನರಿಗೆ ಭೀಮಾ ನದಿಯು ಜೀವನದಿ ಎನಿಸಿಕೊಂಡಿದ್ದು, ಭೀಮಾ ನದಿ ದಂಡೆಯಲ್ಲಿ 169 ಹಳ್ಳಗಳಿವೆ. ಜೊತೆಗೆ ಕಲ್ಬುರ್ಗಿ ನಗರ, ಅಫಜಲಪುರ, ಜೇವರ್ಗಿ ಪಟ್ಟಣದ

ಜನರಿಗೆ ಕುಡಿಯುವ ನೀರಿನ ಮೂಲ ಇದೇ ಭೀಮಾನದಿ. ನದಿ ದಂಡೆಯಲ್ಲಿರುವ ಗ್ರಾಮದ ಜನರು, ನೀರಿಗಾಗಿ ಆಶ್ರಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಹುಟ್ಟಿ, ರಾಜ್ಯದಲ್ಲಿ ವಿಜಯಪುರ, ಕಲಬುರಗಿ,ಯಾದಗಿರಿ

ಜಿಲ್ಲೆಯಲ್ಲಿ ಬರೋಬ್ಬರಿ 289 ಕಿಲೋ ಮೀಟರ್ ದೂರ ಹರಿದು, ರಾಯಚೂರು (Raichur) ಬಳಿ ಕೃಷ್ಣಾ ನದಿ ಸೇರುತ್ತದೆ.

ಇದನ್ನು ಓದಿ: ಒಳ ಮೀಸಲಾತಿ ಸಮಿತಿ ರಚನೆ: ದಲಿತ ಸಮುದಾಯದ ದಾರಿ ತಪ್ಪಿಸುವ ಕುತಂತ್ರ ಎಂದು ಸಿದ್ದರಾಮಯ್ಯ ವಾಗ್ದಾಳಿ

Exit mobile version