ನೀವೇನಾದ್ರೂ ಗುಂಗುರು ಕೂದಲು ಮಾಡಿಸಿಕೊಂಡಿದ್ದೀರಾ? ಇದರಿಂದ ಆಗುವ ಪರಿಣಾಮಗಳು ಹೀಗಿದೆ.

ಹೆಣ್ಣು ಮಕ್ಕಳ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುವ ಕೇಶರಾಶಿಯು ನೈಸರ್ಗಿಕ,ನೀಳವಾಗಿರುವ (Curling damage your hair) ಕೂದಲನ್ನು ಕರ್ಲಿಂಗ್‌ ಮಾಡಿಸುವುದು ಇದೀಗ

ಸಾಮಾನ್ಯವಾಗಿಬಿಟ್ಟಿದೆ. ಆದ್ರೆ ಇದರಿಂದಾಗುವ ಅಡ್ಡ ಪರಿಣಾಮಗಳ ಬಗ್ಗೆ ಗೂತ್ತಿಲ್ಲದಿದ್ದರೆ ಹೇಗೆ ಮೆಟೈನ್‌ ಮಾಡಬೇಕು ಎಂಬುದರ ಬಗ್ಗೆ ಹೇರ್‌ ಸ್ಟೈಲಿಸ್ಟ್ ಸೋನಾ (Hair stylist Sona) ತಿಳಿಸಿದ್ದಾರೆ.

ನಿನ್ನೆ ಒಂದು ಸ್ಟ್ರೈಲ್ ಇವತ್ತು ಇನೊಂದು ಸ್ಟ್ರೈಲ್ ಈಗಿನ ಕಲಿಯುಗದ ಕಾಲದಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ನೆಟ್ಟಗಿರುವ ಕೂದಲ ರಾಶಿಯನ್ನು ಗುಂಗುರು ಮಾಡಿಕೊಂಡು ತಾತ್ಕಾಲಿಕವಾಗಿ

ಗ್ಲಾಮರಸ್‌ ಆಗಿ ಕಾಣುವ ಫ್ಯಾಷನ್‌ ಕಾಲವಿದು. ಸದ್ಯಕ್ಕೆ ಯುವತಿಯರ ಹಾಟ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಲ್ಲೊಂದಾಗಿದೆ” ಎನ್ನುತ್ತಾರೆ ಸೌಂದರ್ಯ ತಜ್ಞರು (Beauty experts).

ಕರ್ಲಿ ಹೇರ್‌ ಸ್ಟೈಲಿಂಗ್‌ ಮಾಡಲು ನಿಮ್ಮ ಕೂದಲು ಕರ್ಲಿಯಾಗಿರಬೇಕಿಲ್ಲ! ಇದೀಗ ಟ್ರೆಂಡಿಯಾಗಿರುವ ಟೈಟ್‌ ರಿಂಗಲ್ಸ್‌, ಕ್ರೌಡಿ ಕರ್ಲ್‌, ಸ್ಟೆಪ್‌ ಬೈ ಸ್ಟೆಪ್‌ ಕರ್ಲ್ಸ್, ಲೂಸ್‌ ಕರ್ಲ್ಸ್ ,ಸ್ಟ್ರೈಟ್‌ ಜೊತೆ

(Tight Curls, Crowdy Curls, Step by Step Curls, Loose Curls, Straight) ಲೈಟಾಗಿ ಕರ್ಲಿಕೂಡ ಇದೀಗ ತಾತ್ಕಲಿಕವಾಗಿ ಸೃಷ್ಟಿಸಬಹುದು. ಹೌದು, ಕರ್ಲಿ ಹೇರ್‌ ಸ್ಟೈಲಿಂಗ್‌

ನಿರ್ವಹಣೆ ಕೊಂಚ ಕಷ್ಟವಾದರೂ (curling damage your hair) ಯೂನಿಕ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ನೀಡುತ್ತದೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ಗಳು.

ಕಾಮನ್‌ ಆಯ್ತು ಕರ್ಲಿಂಗ್‌
ಇಂದು ಬ್ಯೂಟಿ ಕ್ಷೇತ್ರ ಯಾವ ಮಟ್ಟಿಗೆ ಬದಲಾಗಿದೆ ಎಂದರೆ, ಗುಂಗರು ಕೂದಲಿನಲ್ಲೂ ಬಗೆಬಗೆಯ ವೆರೈಟಿಗಳನ್ನು ಕಾಣಬಹುದು. ಬ್ಯೂಟಿಷಿಯನ್‌ ರೀಟಾ (Beautician Rita) ಪ್ರಕಾರ, ಈ ಹಿಂದೆ,

ಕೂದಲನ್ನು ಗುಂಗುರುಗೊಳಿಸಬೇಕಾದಲ್ಲಿ ರೋಲರ್ಸ್‌ ಹಾಗೂ ಪರ್ಮಿಂಗ್‌ (Rollers and perming) ಬಳಸಬೇಕಾಗಿತ್ತು. ಆದರೆ ಇಂದು ಇನ್‌ಸ್ಟಂಟ್‌ ಕ್ರೀಮ್‌ ಬಳಸುವುದರಿಂದಲು ಬಗೆಬಗೆಯ ವಿಧಾನಗಳು

ಕ್ರೀಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಮುಖಕ್ಕೆ ಮೆಚ್ಚುವ ಹೇರ್ ಸ್ಟೈಲ್
ಇಂದು ಕಾಸ್ಮೆಟಿಕ್‌ ಪ್ರಪಂಚ ಬಹಳಷ್ಟು ಮುಂದುವರಿದಿದೆ. ಲೂಸ್‌ ಕರ್ಲ್ಸ್, ಟೈಟ್ ಕಲ್ಸ್‌,ಕ್ರೌಡಿ ಕರ್ಲ್‌, ಹೀಗೆ ಸಾಕಷ್ಟು ವೆರೈಟಿ ಕರ್ಲಿಂಗ್‌ಗಳಿವೆ. ಒಟ್‌ನಲ್ಲಿ, ನಿಮ್ಮ ಮುಖಕ್ಕೆ ಯಾವ ಬಗೆಯ ಹೇರ್

ಸ್ಟೈಲ್ ಸೂಟ್‌ ಆಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸ್ಟೈಲ್ ಮಾಡಿಸಿಕೊಂಡರೆ ಒಳಿತು. ಉದ್ದ ಮುಖವಿದ್ದವರಿಗೆ ಕರ್ಲಿ ಹೇರ್‌ ಫ್ಯಾಷನ್‌ ಸೂಟ್‌ ಆಗುತ್ತದೆ. ಇನ್ನು ದಪ್ಪಗಿರುವವರಿಗೆ

ಸಂಪೂರ್ಣ ಕರ್ಲಿ ಮಾಡಿಸಿಕೊಂಡರೆ ಮತ್ತಷ್ಟು ಸುಂದರವಾಗಿ ಕಾಣಿಸುತ್ತಾರೆ ಎನ್ನುತ್ತಾರೆ ಎಕ್ಸ್‌ಪಾರ್ಟ್ ಗಳು.

ಹೇರ್ ಬಗ್ಗೆ ಸಾಮಾನ್ಯ ಜ್ಞಾನ
ಟೈಟ್‌ ರಿಂಗ್ಲೆಟ್ಸ್‌ ಬಗೆಯದ್ದಕ್ಕೆ ಹಾಟ್‌ ರೋಲರ್ಸ್‌ ಬಳಸುವುದು ಒಳಿತು. ಸಾಫ್ಟರ್‌ ಕರ್ಲ್‌ಗಳಿಗೆ ಕರ್ಲಿಂಗ್‌ ಐರನ್‌ ಮಾಡಿಸಬೇಕು.ಇನ್ನು ನಿಮಗೆ ದೊಡ್ಡ ದೊಡ್ಡ ಸುರಳಿಯಂತೆ ಬೇಕಾದಲ್ಲಿ

ಸ್ಟೈಲಿಂಗ್‌ ಜೆಲ್‌ ಹಾಕಬಹುದು. ಕರ್ಲಿಂಗ್‌ ಮಾಡಿಸುವ ಮುನ್ನ ಈ ಬಗ್ಗೆ ಸಾಮಾನ್ಯ ಜ್ಞಾನವಿದ್ದರೆ ಒಳಿತು ಎನ್ನುತ್ತಾರೆ ಹೇರ್‌ ಸ್ಟೈಲ್‌ ಸ್ಪೆಷಲಿಸ್ಟ್‌ ಬಾಬು.

ಕರ್ಲಿಂಗ್‌ ಮಾಡಿಸುವವರಿಗೆ ಸಲಹೆ
ಕರ್ಲಿ ಹೇರ್‌ ಸ್ಟೈಲ್‌ ಹೊಂದಿರುವ ಬಹುತೇಕ ಹುಡುಗಿಯರ ಕೂದಲು ನಿಸ್ತೇಜವಾದಂತೆ ಇಲ್ಲವೇ, ಒಣಗಿದಂತಿರುತ್ತದೆ. ಆಗಾಗ್ಗೆ ಕಂಡೀಷನ್‌ ಅಗತ್ಯ. ಒದ್ದೆಯಿದ್ದಾಗ ಬಾಚಕೂಡದು. ಶೈನಿಂಗ್‌ಗಾಗಿ

ಹೇರ್‌ ಸಿರಮ್‌ (Hair serum) ಬಳಸಬಹುದು. ಟ್ರೆಂಡ್‌ಗೊಸ್ಕರ ಟೆಂಪರರಿ ಕರ್ಲಿಂಗ್‌ಗೆ ಮೊರೆ ಹೋಗಿ. ಆದರೆ, ಪರ್ಮನೆಂಟ್‌ ಬೇಡ ಎನ್ನುತ್ತಾರೆ ಬ್ಯೂಟಿ ತಜ್ಞರು, ಇದರಿಂದ ಕೂದಲ ಸಮಸ್ಯೆ

ಹೆಚ್ಚಾಗಬಹುದು ಎಂಬುದು ತಜ್ಞರ ಅಭಿಪ್ರಾಯ.

ಇದನ್ನು ಓದಿ: ಕೋಲಾರದಲ್ಲಿ ಮುಂಜಾನೆ ಟೀ, ಕಾಫಿಗೂ ಮೊದಲೇ ಸಿಗುತ್ತೆ ಎಣ್ಣೆ: ಕಳೆದ 3 ತಿಂಗಳಲ್ಲಿ 40 ಕೊಲೆ

Exit mobile version