Baku: 2023ರ ಚೆಸ್ (Chess) ವಿಶ್ವಕಪ್ ಟೂರ್ನಿಯ ಭಾರತದ ಪ್ರಜ್ಞಾನಂದ (Praggnanandhaa) ಹಾಗೂ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರ ನಡುವಣ ಫೈನಲ್ ಅತ್ಯಂತ ಕುತೂಹಲ ಕೆರಳಿಸಿದ್ದು, ಬುಧವಾರ ನಡೆದಿದ್ದ ಎರಡನೇ ಸುತ್ತು ಕೂಡ ಡ್ರಾನಲ್ಲಿ ಅಂತ್ಯವಾಯಿತು. ಈ ಹಿನ್ನೆಲೆಯಲ್ಲಿ ಕಾದಾಟ ನಡೆಸಲು ಗುರುವಾರ ನಿರ್ಣಾಯಕ ಹಂತದಲ್ಲಿ ಇಬ್ಬರೂ ಕಣಕ್ಕೆ ಇಳಿಯಲಿದ್ದಾರೆ. ಗುರುವಾರ ಟೈ ಬ್ರೇಕರ್ (Tie Breaker) ಮೂಲಕ ಚಾಂಪಿಯನ್ ಅನ್ನು ನಿರ್ಧರಿಸಲಾಗುತ್ತದೆ. ಸೆಮಿಫೈನಲ್ ಪಂದ್ಯ ಕೂಡ ಇದೇ ರೀತಿ ಆಗಿತ್ತು.
ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಜ್ಞಾನಂದ ಮತ್ತು ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಎಫ್ಐಡಿಇ (FIDE) ವಿಶ್ವಕಪ್ ಚೆಸ್ ಟೂರ್ನಿಯ ಫೈನಲ್ನಲ್ಲಿ (Final) ಮುಖಾಮುಖಿಯಾಗಲಿದ್ದಾರೆ. ಇಬ್ಬರ ನಡುವಿನ ಎರಡನೇ ಸುತ್ತಿನ ಪಂದ್ಯವೂ ಡ್ರಾನಲ್ಲಿ ಅಂತ್ಯಗೊಂಡಿದೆ. ಇದೀಗ ಗುರುವಾರ ಟೈ ಬ್ರೇಕರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಮೊದಲ ಹಂತದ ಪಂದ್ಯ 35 ಸುತ್ತುಗಳವರೆಗೆ ನಡೆಡಿದ್ದು, ಎರಡನೇ ಹಂತದಲ್ಲಿ 30 ಸುತ್ತುಗಳ ನಂತರವೇ ಉಭಯ ತಂಡಗಳ ನಡುವೆ ಸಮಬಲವಾಯಿತು. ಪಂದ್ಯದ ಎರಡೂ ನಡೆಗಳ ಆಕ್ರಮಣ ಶೀಲತೆಯನ್ನು ಫಲಿತಾಂಶದಿಂದ ಅಳೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಡ್ರಾಗಾಗಿ ಇಬ್ಬರೂ ಒಪ್ಪಿಗೆ ನೀಡಿದರು.
ಕಾರ್ಲ್ಸನ್ (Carlsen) ಅವರು ಬಿಳಿ ಕಾಯಿಗಳೊಂದಿಗೆ ಪ್ರಜ್ಞಾನಂದ ವಿರುದ್ಧ ಘನ ಪ್ರದರ್ಶನ ನೀಡಿದರು. ಆದರೆ ಭಾರತೀಯ ಆಟಗಾರ ಯಾವುದೇ ಕ್ಷಣದಲ್ಲಿ ಕುಗ್ಗಲಿಲ್ಲ. ವಿಶ್ವದ ನಂ. 1 ಆಟಗಾರ ಕಾರ್ಲ್ಸನ್ ಮತ್ತು 23ನೇ ಶ್ರೇಯಾಂಕಿತ ಪ್ರಜ್ಞಾನಂದ (Praggnanandhaa) ನಡುವಣ ಮೊದಲ ಎರಡು ಸುತ್ತಿನ ಪಂದ್ಯಗಳು ಡ್ರಾಗೊಂಡ ನಂತರ ಈಗ ವಿಶ್ವ ಚಾಂಪಿಯನ್ (Champion) ಅನ್ನು ಟೈ-ಬ್ರೇಕರ್ಗಳ ಮೂಲಕ ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಇಬ್ಬರೂ ಆಟಗಾರರು 30 ನಡೆಗಳ ನಂತರ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡರು.
18ರ ಹರೆಯದ ಭಾರತದ ಆಟಗಾರ ಅನುಭವಿ ಕಾರ್ಲ್ಸನ್ರನ್ನು ಅದ್ಭುತ ಪ್ರದರ್ಶನದಿಂದ ಡ್ರಾ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು. ಬಿಳಿ ಕಾಯಿಗಳೊಂದಿಗೆ ಆಟವಾಡಿದ್ದ ಪ್ರಜ್ಞಾನಂದ (Praggnanandhaa) ಅವರು ಕಾರ್ಲ್ಸನ್ಗೆ ತುಂಬಾ ಬೇಸರವನ್ನುಂಟು ಮಾಡಿದ್ದರು.
ಭವ್ಯಶ್ರೀ ಆರ್.ಜೆ