ಕರ್ನಾಟಕ : ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ (Cyber centers charging double) ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸರ್ಕಾರ ಇನ್ನೂ ಕೊನೆಯ ದಿನಾಂಕ ಪ್ರಕಟಿಸಿಲ್ಲ.
ಆದರೂ ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಸೈಬರ್ ಸೆಂಟರ್ಗಳ (Cyber Center) ಬಳಿ ಜನರು ತುಂಬಿ ತುಳುಕುತ್ತಿದ್ದು, ತಂಡೋಪತಂಡವಾಗಿ ಸೈಬರ್ ಕೇಂದ್ರಗಳಿಗೆ ಅರ್ಜಿ
ಸಲ್ಲಿಸಲು ಧಾವಿಸುತ್ತಿದ್ದಾರೆ. ಕೆಲವರು ಅರ್ಜಿ ಸಲ್ಲಿಕೆಗೆ ದಂಧೆಯಂತೆ ಹೆಚ್ಚಿನ ಹಣ ಪಡೆಯುತ್ತಿದ್ದರೂ ಇದಕ್ಕೆ (Cyber centers charging double) ಕಡಿವಾಣ ಇಲ್ಲದಂತಾಗಿದೆ.
ಇನ್ನು ಆಧಾರ್ ಕಾರ್ಡ್(Adhar Card),ಪಾನ್ ಕಾರ್ಡ್(Pan Card), ಪಡಿತರ ಚೀಟಿ, ವಿದ್ಯುತ್ ಬಿಲ್ ಸೇರಿದಂತೆ ನಾನಾ ದಾಖಲೆಗಳನ್ನು ಹಿಡಿದು ಸೈಬರ್ ಸೆಂಟರ್ಗಳ ಬಳಿ ನಿಂತಿರುವ ಜನರು
ಗೃಹಜ್ಯೋತಿ(Gruha Jyoti) ಸೇರಿದಂತೆ ಬೇರೆ ಬೇರೆ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ತಡಬಡಾಯಿಸುತ್ತಿದ್ದಾರೆ. ಇದರ ನಡುವೆ ಸರ್ವರ್ ಸಮಸ್ಯೆ ಸರ್ವೆ ಸಾಮಾನ್ಯವಾಗಿದ್ದು, ಕೆಲಸ ಕಾರ್ಯ
ಬಿಟ್ಟು ಜನರು ಗಂಟೆಗಟ್ಟಲೇ ಇಡೀ ದಿನ ಕಾದು ಕುಳಿತುಕೊಳ್ಳುವಂತಾಗಿದೆ.

ಟೋಕನ್ನಿಂದ ತಡ
ಕರ್ನಾಟಕ ಒನ್ (Karnataka One), ಗ್ರಾಮ ಒನ್ನಲ್ಲಿ (Grama One) ಅರ್ಜಿ ಸಲ್ಲಿಕೆಗೆ ಉಚಿತವಾಗಿ ಅವಕಾಶವಿದ್ದರೂ ಅಲ್ಲಿ ಟೋಕನ್ಗಳನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಕೆಗೆ ಟೋಕನ್ (Token)
ಇದ್ದವರಿಗೆ ಮಾತ್ರವೇ ಅವಕಾಶ ಸಿಗುತ್ತಿದೆ. ಆದ್ದರಿಂದ ಅಲ್ಲಿ ಕೆಲಸವು ತಡವಾಗಿಯೇ ನಡೆಯುತ್ತಿದೆ. ಇದರಿಂದಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಹೋಗದೆ ಸೈಬರ್ ಸೆಂಟರ್ಗಳತ್ತ ಮುಖ ಮಾಡಿದ್ದಾರೆ.
ಇಲ್ಲಿ ಆಗುತ್ತಿರುವ ಸರ್ವರ್ ಸಮಸ್ಯೆ ನಡುವೆಯೂ ಕೂಡ ಕಾದು ಕೆಲಸ ಮುಗಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪಗಳು ಕೆಲ ಸೈಬರ್ ಸೆಂಟರ್ಗಳಲ್ಲಿ ಸಾಕಷ್ಟು ಕೇಳಿ ಬರುತ್ತಿವೆ.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ಇನ್ನು ಸರ್ವರ್ (Server)ಸಮಸ್ಯೆಯಿಂದ ಕೆಲವರು ಕಾಯದೆ ಹಣ, ದಾಖಲೆ ನೀಡಿ ಸರ್ವರ್ ಕಾರ್ಯ ನಿರ್ವಹಿಸುವ ವೇಳೆ ಸೈಬರ್ ಸೆಂಟರ್ ನವರೇ ಅರ್ಜಿ ನಮೂನೆ ಭರ್ತಿ ಮಾಡಿ ಸಂಬಂಧಪಟ್ಟವರಿಗೆ ಕರೆ
ಮಾಡಿ ಒಟಿಪಿ (OTP)ಪಡೆದು ಪೂರ್ಣಗೊಳಿಸುತ್ತಿದ್ದಾರೆ. ಇನ್ನು ಕೆಲವರು ಗ್ಯಾರಂಟಿ ಯೋಜನೆಯ ಅರ್ಜಿ ಸಲ್ಲಿಕೆ ಜತೆಗೆ ಆಧಾರ್-ಪಾನ್ ಲಿಂಕ್ ಮಾಡಲು ಬರುವುದರಿಂದ ಸಾಕಷ್ಟು ವಿಳಂಬವಾಗಿದೆ. ಒಟ್ಟಿನಲ್ಲಿ
ಸೈಬರ್ ಸೆಂಟರ್ ಬಳಿಯೇ ಜನಜಂಗುಳಿ ಏರ್ಪಟ್ಟಿದ್ದರೂ ಸಹ ಸಂಬಂಧಿಸಿದ ಅಧಿಕಾರಿಗಳು ಜನರ ಸಮಸ್ಯೆ ಪರಿಗಣಿಸದೇ ಇರುವುದು ಸಾರ್ವಜನಿಕ ವಲಯದಲ್ಲಿಆಕ್ರೋಶಕ್ಕೆ ಕಾರಣವಾಗಿದೆ
ಅರ್ಜಿಗಳ ಸಲ್ಲಿಕೆಗೂ ಪ್ಯಾಕೇಜ್
ಸರ್ವರ್ ಸಮಸ್ಯೆಯಿಂದ ಅರ್ಜಿಗಳನ್ನು ಸಲ್ಲಿಸಲು ಹಲವು ಅಡೆತಡೆಗಳು ಮತ್ತು ವಿಳಂಬಗಳಿವೆ. ಈ ನಿಟ್ಟಿನಲ್ಲಿ ಕೆಲವು ಸೈಬರ್ ಕೇಂದ್ರಗಳು ನಾನಾ ಯೋಜನೆಗಳಿಗೆ ಅರ್ಜಿ ಸಲ್ಲಿಸುತ್ತಿವೆ. ಇನ್ನು ನಗರದ
ಕೆಲ ಕಡೆಗಳಲ್ಲಿಇದಕ್ಕಾಗಿ ದಾಖಲೆ ಮತ್ತು ಹಣ ನೀಡಿ ಎಂದು ಇಂತಿಷ್ಟು ಹಣ ನಿಗಧಿಪಡಿಸಿರುವುದೂ ಕಂಡುಬಂದಿದೆ. ರಾತ್ರಿ ವೇಳೆಯಲ್ಲೂ ಸರ್ವರ್ಗೆ ಕಾದು ಕೆಲವರು ಅರ್ಜಿ ಸಲ್ಲಿಸುತ್ತಿರುವುದು ತಿಳಿದುಬಂದಿದೆ.
ದುಪಟ್ಟು ಹಣ ವಸೂಲಿ
ಅರ್ಜಿ ಸಲ್ಲಿಕೆಗೆ ಸರಕಾರ ಕೊನೆ ದಿನಾಂಕ ನಿಗಧಿಪಡಿಸಿಲ್ಲ.ಆದರೂ ಜನರು ಆತುರ ಪಡದೆ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ.ಅದರಲ್ಲೂ ಅನೇಕ ಜನರು ಸೈಬರ್ ಸೆಂಟರ್ಗಳಿಗೆ ತೆರಳಿ ಊಹಾಪೋಹ ಮಾತುಗಳಿಗೆ
ಒಳಗಾಗಿ ಹಣ ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕೂಡಲೇ ಜನರಿಗೆ ಸೂಕ್ತ ಮಾಹಿತಿ, ನಿರ್ದೇಶನ ಸಂಬಂಧಪಟ್ಟ ಅಧಿಕಾರಿಗಳು ನೀಡಿದರೆ ಅನುಕೂಲ.

ಸೈಬರ್ ಸೆಂಟರ್ಗಳ ಹತ್ತಿರ ಜನರು ತುಂಬಿ ತುಳುಕುತ್ತಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠ ಅಲ್ಲಿ ಜನರಿಗೆ ಏನು ಸಮಸ್ಯೆಯಾಗುತ್ತಿದೆ ಎಂಬುದಕ್ಕಾದರೂ ಪರಿಶೀಲಿಸದೇ ಇರುವುದು
ಸರಿಯಲ್ಲ.ಈ ಬಗ್ಗೆ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಬಗೆಹರಿಸುವ ಜತೆಗೆ ಕೂಡಲೇ ಭೇಟಿ ನೀಡಿ ಜನರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಿ
ರಶ್ಮಿತಾ ಅನೀಶ್