Bengaluru : ಚಾಲೆಂಜಿಂಗ್ ಸ್ಟಾರ್(Challenging Star), ದಾಸ, ನಟ ದರ್ಶನ್ ತೂಗುದೀಪ(Darshan Thoogudeepa) ಅವರ ಮುಂಬರುತ್ತಿರುವ ‘D56’ ಚಿತ್ರಕ್ಕೆ ಇದೀಗ ಟೈಟಲ್ (D56 film title confusion) ಫೈನಲ್ ಬಗ್ಗೆ ಚಿತ್ರತಂಡ ಚರ್ಚಿಸುತ್ತಿದ್ದು, ದರ್ಶನ್ ಅವರ ಅಭಿಮಾನಿಗಳು ತಮಗೆ ಇಷ್ಟವಾದ ಟೈಟಲ್ ಒಂದನ್ನು ಚಿತ್ರತಂಡಕ್ಕೆ ಸೂಚಿಸಿದ್ದಾರೆ.

ಹಿರಿಯ ಖಳನಾಯಕ ಸುಧೀರ್(Sudhir) ಅವರ ದ್ವಿತೀಯ ಪುತ್ರ ತರುಣ್ ಸುಧೀರ್(Tharun Sudhir) ಹಾಗೂ ಚಾಲೆಂಜಿಂಗ್ ಸ್ಟಾರ್,
ಡಿ ಬಾಸ್ ದರ್ಶನ್(D Boss Darshan) ಅವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 2ನೇ ಚಿತ್ರ ‘D56’ ಆಗಿದ್ದು, ‘D56’ ಎಂಬ ತಾತ್ಕಾಲಿಕ ಶೀರ್ಷಿಕೆ ಇಟ್ಟು ಕಳೆದ (D56 film title confusion) ವರ್ಷವಷ್ಟೇ ಚಿತ್ರದ ಮುಹೂರ್ತ ಈಡೇರಿಸಿ,
ಚಿತ್ರೀಕರಣವನ್ನು ಪ್ರಾರಂಭಿಸಿರುವ ಚಿತ್ರತಂಡ ಇದೀಗ ಚಿತ್ರಕ್ಕೆ ಅಧಿಕೃತ ಟೈಟಲ್ ಹುಡುಕಾಟದಲ್ಲಿ ಇದೆ.
ಇದನ್ನು ಆದಷ್ಟು ಬೇಗ ನಿರ್ಧರಿಸಿ, ನಟ ದರ್ಶನ್ ಅವರ ಹುಟ್ಟುಹಬ್ಬದ ದಿನದಂದೇ ಟೈಟಲ್ ಘೋಷಣೆ ಮಾಡಲು ಚಿತ್ರತಂಡ ಚಿಂತಿಸಿದೆ ಎಂದು ಹೇಳಲಾಗಿದೆ.

ಸದ್ಯ ನಟ ದರ್ಶನ್ ಅವರ ‘D56’ ಚಿತ್ರಕ್ಕೆ 2 ಟೈಟಲ್‌ಗಳು ಅಭಿಮಾನಿಗಳಿಂದ ಕೇಳಿಬಂದಿದ್ದು, ಈ ಟೈಟಲ್‌ಗಳು ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ಹರಿದಾಡುತ್ತಿವೆ.
ಇವೆರಡು ಟೈಟಲ್ ಗಳಲ್ಲಿ ಒಂದು ಟೈಟಲ್ ಚಿತ್ರಕ್ಕೆ ಪಕ್ಕ ಎಂದು ಅಭಿಮಾನಿಗಳೇ ನಿರ್ಧರಿಸಿ ಹೇಳುತ್ತಿದ್ದಾರೆ.
ರಾಕ್‌ಲೈನ್ ವೆಂಕಟೇಶ್(Rockline Venkatesh) ಅವರ ರಾಕ್‌ಲೈನ್ ಪ್ರೊಡಕ್ಷನ್ಸ್(Rockline Production) ಬ್ಯಾನರ್‌ನಲ್ಲಿ ‘D56’ ಸಿನಿಮಾ ತಯಾರಾಗುತ್ತಿದೆ.
ದರ್ಶನ್ ಅವರಿಗೆ ನಾಯಕಿಯಾಗಿ ಹಿರಿಯ ನಟಿ ಮಾಲಾಶ್ರೀ(Malashree) ಅವರ ಮಗಳು ರಾಧನಾ ರಾಮ್(Radhana Ram) ಕಾಣಿಸಿಕೊಳ್ಳಲಿದ್ದಾರೆ.
ಈ ಹಿಂದೆಯೇ ರಾಧನಾ ರಾಮ್ ಅವರನ್ನು ತಮ್ಮ ಚಿತ್ರದ ನಾಯಕಿ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಣೆ ಕೂಡ ಮಾಡಿತ್ತು.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ಎರಡು ಟೈಟಲ್‌ಗಳು ಭಾರಿ ವೈರಲ್ ಆಗುತ್ತಿದೆ. ‘D56’ ಚಿತ್ರಕ್ಕೆ ಚಿತ್ರತಂಡ ‘ಚೌಡಯ್ಯ’ ಅಥವಾ ‘ಕಾಟೇರಾ’ ಎಂಬ ಟೈಟಲ್‌ಗಳ ಪೈಕಿ ಒಂದನ್ನು ಖಚಿತಗೊಳಿಸಲಿದೆ ಎಂದು ಹೇಳಲಾಗುತ್ತಿದೆ.
ಆದ್ರೆ, ಈ ಬಗ್ಗೆ ಚಿತ್ರತಂಡ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ದರ್ಶನ್ ಅವರ ಅಭಿಮಾನಿಗಳು ಕಾಟೇರಾ ಎಂಬುದನ್ನು ಟೈಟಲ್ ಆಗಿ ಬಳಸಿಕೊಳ್ಳುವುದು ಸೂಕ್ತ ಎಂದು ಅಭಿಪ್ರಾಯಿಸಿದ್ದಾರೆ.
ಒಟ್ಟಾರೆ ಈ ಎಲ್ಲಾ ಗೊಂದಲಗಳಿಗೆ ದರ್ಶನ್ ಅವರ ಜನ್ಮದಿನದಂದು ಉತ್ತರ ಸಿಗಲಿದೆ ಎಂಬುದು ಖಚಿತ ಎಂದೇ ಹೇಳಬಹುದು.