ಬೆಂಗಳೂರು : ಗೃಹ ಜ್ಯೋತಿ ಯೋಜನೆಗೆ(Gruha Jyoti Sheme) ಕರ್ನಾಟಕದಲ್ಲಿ ಅನೇಕ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ನಿನ್ನೆ ಒಂದೇ ದಿನ 50000 ಕ್ಕಿಂತಲೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ. ಆದ್ದರಿಂದ ನಿನ್ನೆಯಂತೆ ಇಂದು ಕೂಡ ಸರ್ವರ್ ಡೌನ್(Server Down) ಆಗಿದೆ ಆದರೆ ಸ್ವಲ್ಪ ಹೊತ್ತಿನ ನಂತರ ಪ್ರಯತ್ನಿಸಬಹುದು.
ಹಾಗಾದರೆ ಅರ್ಜಿ ಸಲ್ಲಿಸಬೇಕಾದರೆ ಮೊದಲು ಇಲ್ಲಿ ಕೊಟ್ಟಿರುವ ಲಿಂಕ್(Link) ಮೇಲೆ ಕ್ಲಿಕ್ ಮಾಡಿ
https://sevasindhugs1.karnataka.gov.in/index.html

- ನಂತರ ಇಲ್ಲಿ ಗೃಹಜ್ಯೋತಿ ಎಂಬ ಆಯ್ಕೆ ಏರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಂತರ ಭಾಷೆ, ಖಾತೆ ಸಂಖ್ಯೆ ಅಂದರೆ ಕರೆಂಟ್ ಬಿಲ್(Curent bill) ನಂಬರ್ ಹಾಕಬೇಕು ಆಗ ಎಸ್ಕಾಂ(ESCOM) ಹೆಸರು, ಖಾತೆದಾರರ ಹೆಸರು,ಖಾತೆದಾರರ ವಿಳಾಸವನ್ನು ಅದೇ ತನ್ನಷ್ಟಕ್ಕೇ ತೆಗೆದುಕೊಳ್ಳುತ್ತದೆ.
- ನಂತರ ನಿವಾಸಿ ವಿಧವನ್ನು ಮಾಲಿಕರಾಗಿದ್ದರೆ ಮಾಲಿಕ ಎಂದು,ಬಾಡಿಗೆದಾರರಾಗಿದ್ದರೆ, ಬಾಡಿಗೆದಾರ ಎಂದು ಆಯ್ಕೆ ಮಾಡಿಕೊಳ್ಳಿ
- ನಂತರ ಕೊನೆಗೆ ನಿಮ್ಮ ಆಧಾರ್ ನಂಬರ್(Adhar Card) ಕೇಳುತ್ತದೆ ಅದನ್ನು ನಮೂದಿಸಿ ಆಗ ನಿಮ್ಮ ಹೆಸರನ್ನು ಅದೇ ತನ್ನಷ್ಟಕ್ಕೇ ತೆಗೆದುಕೊಳ್ಳುತ್ತದೆ.
- ನಂತರ ನಿಮ್ಮ ದೂರವಾಣಿ ಸಂಖ್ಯೆಯನ್ನು(Mobile Number) ಇಲ್ಲಿ ನಮೂದಿಸಿ
- ನಂತರ ನಿಮ್ಮ ಮೊಬೈಲ್ ಗೆ ಒಂದು OTP ಬರುತ್ತದೆ ಅದನ್ನು ಇಲ್ಲಿ ನಮೂದಿಸಿ
- ನಂತರ ಇಲ್ಲಿ ಒಂದು Declaration / ಘೋಷಣೆ ಬರುತ್ತದೆ ಅದನ್ನು ಓದಿ ಕೊನೆಯಲ್ಲಿ I ಅಗ್ರೀ (I Agree)ಎಂಬ ಆಯ್ಕೆ ಏರುತ್ತದೆ ಅದರ ಮುಂದೆ click ಮಾಡಿ,
- ನಂತರ ಒಂದು Captcha ಬರುತ್ತದೆ ಅದನ್ನು type ಮಾಡಿ.

- ಕೊನೆಗೆ Submit ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ನಿಮಗೆ ನೀವು ಸಲ್ಲಿಸಿದ ಅರ್ಜಿ ಸ್ವೀಕೃತಿ ದೊರೆಯುತ್ತದೆ,ಅದನ್ನು ಡೌನ್ಲೋಡ್ ಮಾಡಿಕೊಳ್ಳಿ
Declaration / ಘೋಷಣೆ ಈ ರೀತಿ ಏರುತ್ತದೆ
ಈ ಮೇಲಿನ ಖಾತೆ ಸಂಖ್ಯೆಯನ್ನು ಗೃಹ ಬಳಕೆಗೆ ಮಾತ್ರ ಬಳಸಲಾಗುತ್ತದೆ. ಒಂದು ವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸಿದ್ದಲ್ಲಿ ಪ್ರಯೋಜನಗಳನ್ನು ಸ್ವಯಂಚಾಲಿತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನನಗೆ ತಿಳಿದಿದೆ ಮತ್ತು ನಾನು ಈಗಾಗಲೇ ಪಡೆದಿರುವ ಪ್ರಯೋಜನಗಳನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಸಿದ್ಧನಿದ್ದೇನೆ. ನಾನು ಮೇಲೆ ಒದಗಿಸಿರುವ ಎಲ್ಲಾ ವಿವರಗಳು ನನಗೆ ತಿಳಿದಿರುವಂತೆ ಸರಿಯಾಗಿದೆ ಎಂದು ಈ ಮೂಲಕ ದೃಢೀಕರಿಸುತ್ತೇನೆ.” )

ಸೂಚನೆ: ಇಂದು ಬಹಳಷ್ಟು ಜನ ಅರ್ಜಿ ಹಾಕುತ್ತಿದ್ದಾರೆ. ಒಂದು ವೇಳೆ ತಾಂತ್ರಿಕ ಕಾರಣಗಳಿಂದ ವೆಬ್ಸೈಟ್ ತೆರೆಯದಿದ್ದರೆ,ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ
ರಶ್ಮಿತಾ ಅನೀಶ್