ಡಿಸಿ vs ಪಾಲಿಕೆ ಆಯುಕ್ತೆ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಟಾರ್ಚರ್; ಕರ್ತವ್ಯಕ್ಕೆ ರಾಜೀನಾಮೆ ನೀಡಿದ ಶಿಲ್ಪಾನಾಗ್

ಮೈಸೂರು, ಜೂ. 03: ಜಿಲ್ಲಾಧಿಕಾರಿ ಕಾರ್ಯವೈಖರಿ ಸಂಬಂಧ ಸ್ಥಳೀಯ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ ಇದೀಗ ಮೈಸೂರು ಮಹಾನಗರ ಪಾಲಿಕೆ ಶಿಲ್ಪಾನಾಗ್ ಸಹ ಜಿಲ್ಲಾಧಿಕಾರಿ ವಿರುದ್ಧ ಬಹಿರಂಗವಾಗಿ ಅಸಮಾಧನ ವ್ಯಕ್ತಪಡಿಸಿದ್ದಾರೆ.

ಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಹಂತದಿಂದಲೂ ಕೆಲಸ ನಿರ್ವಹಿಸುತ್ತಿದ್ದೇವೆ,
ಆದರೂ ಸಿಟಿಯಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ, ಟೆಸ್ಟ್ ಸರಿಯಾಗಿ ನಡೆಯುತ್ತಿಲ್ಲ ಎಂಬ ಮಾತುಗಳು ಬರುತ್ತಿವೆ ಎಂದು ಜಿಲ್ಲಾಡಳಿತದ ಕಾರ್ಯವೈಖರಿಗೆ ಪಾಲಿಕೆ ಆಯುಕ್ತರಿಂದ ಬೇಸರ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶಕ್ಕೆ ಒಂದು ಮಾನದಂಡ, ಗ್ರಾಮೀಣ ಪ್ರದೇಶಕ್ಕೆ ಒಂದು ಮಾನದಂಡ. ಸೂಕ್ತವಾಗಿ ಕೊರೊನಾ ನಿರ್ವಹಣೆ ಮಾಡಿದ್ರೂ, ಪಾಲಿಕೆ ಕೆಲಸ ಮಾಡ್ತಿಲ್ಲ ಎಂದು ಬಿಂಬಿಸಲಾಗ್ತಿದೆ, ಡಿಸಿ ನಡೆ ವಿರುದ್ಧ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅಸಮಾಧಾನ ಹೊರ ಹಾಕಿದ್ದಾರೆ.

ಮೊನ್ನೆ ಒಂದು ದುಃಖದ ಸಂಗತಿ ಯಾಯಿತು. 3000 ಮೆಡಿಷನ್ ಕಿಟ್ ನ್ನು ಒಂದು ಸಂಸ್ಥೆ ನೀಡಿತು. ಪಾಲಿಕೆ ಕಚೇರಿಯ ಬೀಗ ತೆಗೆದು ಪೊಲೀಸರನ್ನ ಕಳುಹಿಸಿ ಜಿಲ್ಲಾಡಳಿತ ಔಷಧಿ ತೆಗೆದುಕೊಳ್ಳಲಾಯಿತು.
ಒಬ್ಬ ಐಎಎಸ್ ಅಧಿಕಾರಿಯಿಂದ ಮತ್ತೊಬ್ಬ ಐಎಎಸ್ ಅಧಿಕಾರಿಗಳ ಮೇಲೆ ಈ ನಡೆ ಸರಿಯಿಲ್ಲ.

ಜಿಲ್ಲಾಡಳಿತದ ಕೆಲವು ನಿರ್ಣಯ ಸಹಿಸಿಕೊಂಡು ಸಾಕಾಗಿದೆ.
ನಮಗೆ ಯಾವುದೇ ಅನುಧಾನ ನೀಡಿಲ್ಲ, ಸಿ.ಎಸ್.ಆರ್ ನಿಧಿಯಿಂದ ಎಲ್ಲ ಕೆಲಸ ಮಾಡುತ್ತಿದ್ದೇವೆ. ಸಿ.ಎಸ್.ಆರ್ ನ ವಾಟ್ಸಾಪ್ ಗ್ರೂಪ್ ನಿಂದ ನನ್ನನ್ನು ತಗೆಯುವ ಕೆಲಸ ಆಗಿದೆ. ನಾನು ಸಹ ಸಾಕಷ್ಟು ಐಎಎಸ್ ಅಧಿಕಾರಿಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ ಈ ರೀತಿ ಎಂದು ಆಗಿಲ್ಲ.

ಪ್ರತಿ ದಿನ ಈ ಅವಮಾನ ಸಾಕಾಗಿದೆ. ಒಬ್ಬ ಅಧಿಕಾರಿಯಾಗಿ ಕೆಲಸ ಮಾಡಲು ಸಾಕಾಗಿದೆ.
ಒಬ್ಬರ ದುರಂಕರ ದಿಂದ ಇಡೀ ನಗರವನ್ನ ಸುಡುವ ಕೆಲಸ ವಾಗುತ್ತಿದೆ. ಮೈಸೂರು ನಗರದಲ್ಲಿ ಜನರು ಅಧಿಕಾರಿಗಳು ನಮಗೆ ಸಹಕಾರ ನೀಡುತ್ತಿದ್ದಾರೆ ಎಂದು ಬೇಸರದಿಂದ ಗದ್ಗದಿತರಾದ ಶಿಲ್ಪನಾಗ್. ನೇರವಾಗಿ ರೋಹಿಣಿ ಸಿಂಧೂರಿ ವಿರುದ್ದ ಆರೋಪಿಸಿರುವ ಶಿಲ್ಪನಾಗ್‌, ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಗಿದೆ. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದೆ.

ಜಿಲ್ಲಾಡಳಿತದಿಂದ‌ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‌ಆರ್ ಫಂಡ್‌ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು.
ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ. ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದೆ.

ಅವರ ಹೀಗೋಯಿಂದ ನಾವು ಮಾಡುವ ಕೆಲಸಕ್ಕೆ ಮನ್ನಣೆ ಸಿಗ್ತಿಲ್ಲ ಎಂದು ರಾಜೀನಾಮೆ ನೀಡಲು ಮುಂದಾದ ಶಿಲ್ಪನಾಗ್, ಬೇಸರದಿಂದ ರಾಜೀನಾಮೆ ನೀಡಲು ನಿರ್ಧಾರ ಮಾಡಿರುವುದಾಗಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಯಾವುದೇ ಅಧಿಕಾರಿಗೂ ಈ ರೀತಿಯ ಜಿಲ್ಲಾಧಿಕಾರಿ ಸಿಗದಿರಲಿ ಎಂದು ಪತ್ರ ಬರೆದಿರುವ ಶಿಲ್ಪನಾಗ್, ಈಗಾಗಲೇ ರಾಜೀನಾಮೆ ಬರೆದಿದ್ದಾರೆ.

Exit mobile version