2ರಿಂದ 18ನೇ ವರ್ಷದೊಳಗಿನವರ ಕೋವ್ಯಾಕ್ಸಿನ್ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ ಅನುಮೋದನೆ

ಹೊಸದಿಲ್ಲಿ, ಮೇ. 13: 2ರಿಂದ 18ನೇ ವರ್ಷದೊಳಗಿನವರಿಗೆ ಕೋವ್ಯಾಕ್ಸಿನ್ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ.

ವಿಷಯ ತಜ್ಞರ ಸಮಿತಿಯ (ಎಸ್ಇಸಿ) ಶಿಫಾರಸನ್ನು ಅಂಗೀಕರಿಸಿರುವ ಡಿಸಿಜಿಐ ಕೊವಾಕ್ಸಿನ್ ಲಸಿಕೆಯ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಅನುಮತಿ ನೀಡಿದೆ. ಹೈದರಾಬಾದ್ ನ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) 2 ರಿಂದ 18 ವರ್ಷದೊಳಗಿನ ಕೋವಾಕ್ಸಿನ್ ನ 2 ಮತ್ತು 3ನೇ ಹಂತ ಕ್ಲಿನಿಕಲ್ ಪ್ರಯೋಗವನ್ನು ಪ್ರಸ್ತಾಪಿಸಿತ್ತು.

ತ್ವರಿತ ನಿಯಂತ್ರಕ ಪ್ರತಿಕ್ರಿಯೆಯಾಗಿ ಮೇ 11ರಂದು ವಿಷಯ ತಜ್ಞರ ಸಮಿತಿ(ಎಸ್ಇಸಿ) (ಸಿಒವಿಐಡಿ -19) ನಲ್ಲಿ ಈ ಪ್ರಸ್ತಾಪವನ್ನು ಚರ್ಚಿಸಲಾಗಿತ್ತು. ವಿವರವಾದ ಚರ್ಚೆಯ ನಂತರ ಸಮಿತಿಯು ಕೆಲವು ಷರತ್ತುಗಳಿಗೆ ಪ್ರಸ್ತಾವಿತ ಹಂತ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಅನುಮತಿ ನೀಡಲು ಶಿಫಾರಸು ಮಾಡಿದೆ.

ಕ್ಲಿನಿಕಲ್ ಪ್ರಯೋಗವನ್ನು 525 ಆರೋಗ್ಯವಂತ ಸ್ವಯಂ ಸೇವಕರಲ್ಲಿ ನಡೆಸಲಾಗುತ್ತದೆ. ಪ್ರಯೋಗದಲ್ಲಿ ಲಸಿಕೆಯನ್ನು ದಿನ 0 ಮತ್ತು 28 ನೇ ದಿನದಲ್ಲಿ ಎರಡು ಪ್ರಮಾಣದಲ್ಲಿ ಇಂಟ್ರಾಮಸ್ಕುಲರ್ ಮಾರ್ಗದಿಂದ ನೀಡಲಾಗುತ್ತದೆ.

Exit mobile version