ಡಿ.16 ರಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ!?

ಬೆಂಗಳೂರು, ಡಿ. 14: ಲಾಕ್‍ಡೌನ್ ನಂತರ ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿದ್ದ ಜನಜೀವನ ಮತ್ತೆ ಅದೇ ರೀತಿಯಲ್ಲಿ ಪ್ರತಿಭಟನೆಗಳ ರೂಪದಲ್ಲಿ ಬಂದ್ ಮುಷ್ಕರಗಳು ಪ್ರಾರಂಭವಾಗಿವೆ. ಮೊದಲನೆಯದಾಗಿ ರಾಜ್ಯದಾದ್ಯಂತ ರೈತರ ಪ್ರತಿಭಟನೆ ಕಾವೇರಿತು. ತದನಂತರ ಸಾರಿಗೆ ನೌಕರರ ಮುಷ್ಕರದಿಂದ ಸತತ ನಾಲ್ಕು ದಿನದಲ್ಲಿ ಸಾರ್ವಜನಿಕರು ಬಸ್‍ಗಳಿಲ್ಲದೆ ಪರದಾಡುವಂತಾಗಿದೆ.

ಇದು ಸರ್ಕಾರಕ್ಕೆ ಒಂದರ ಮೇಲೆ ಒಂದು ತಲೆಬಿಸಿಯಾಗಿ ಪರಿಣಮಿಸುತ್ತಿದೆ. ಹೀಗಿರುವಾಗ ಸರ್ಕಾರಕ್ಕೆ ಮತ್ತೊಂದು ಶಾಕ್ ಕಾದಿದೆ. ಅದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ(ಕ್ಯಾಮ್ಸ್) ವಿವಿಧ ಬೇಡಿಕೆಗಳನ್ನು ಆಗ್ರಹಿಸಿ, ಡಿಸೆಂಬರ್ 16 ರಂದು ರಾಜ್ಯದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದೆ. ಇದರ ಬಗ್ಗೆ ಮಾಹಿತಿ ನೀಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಡಿ. 16ರಂದು ರಾಜ್ಯದಲ್ಲಿ ಖಾಸಗಿ ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಹಲವು ಬೇಡಿಕೆಗಳಿಗೆ ಆಗ್ರಹಿಸಿ ಹೋರಾಟ  ನಡೆಸಲಾಗುತ್ತದೆ. ಆದರೆ ಕೊರೋನಾ ಕಷ್ಟದ ಸಮಯದಲ್ಲಿ ಸರ್ಕಾರ ಖಾಸಗಿ ಶಿಕ್ಷಕರನ್ನು ನಿರ್ಲಕ್ಷಿಸಿದೆ. ಹೀಗಾಗಿ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಖಾಸಗಿ ಸಂಸ್ಥೆಯ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ.

Exit mobile version