ಚಟ ಬಿಡಿಸಲ್ಲಾ, ಚಟ್ಟಕ್ಕೇರಿಸ್ತಾರೆ ಎಚ್ಚರ!

ಚಟ್ಟಕ್ಕೇರಿಸ್ತಾರೆ ಎಚ್ಚರಿಕೆ,

ಒಂದು ವಾರದಲ್ಲಿ ಕುಡಿತ ಬಿಡಸ್ತೀವಿ, ಏನೇ ವ್ಯಸನ ಇದ್ರೂ ಅದನ್ನ ದೂರ ಮಾಡ್ತೀವಿ ಅಂತೆಲ್ಲ ಹಗಲಿಡೀ ಜಾಹಿರಾತು ಕೊಡೋ ಕೇಂದ್ರಗಳ ಬಗ್ಗೆ ಎಚ್ಚರ! ಈ ಕೇಂದ್ರಗಳು ಚಟ ಬಿಡಸೋ ಹೆಸ್ರಲ್ಲಿ ನಿಮ್ಮನ್ನ ಅಥವಾ ನಿಮ್ಮವರನ್ನ ಚಟ್ಟಕ್ಕೇರಿಸಬಹುದು ಎಚ್ಚರ! ಯಾಕಂದ್ರೆ ನಮ್ಮ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಚಟ ಬಿಡಸೋ ಅನಧಿಕೃತ ಕೇಂದ್ರಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಈ ಕೇಂದ್ರಗಳು ನಡೆಸೋ ಅಕ್ರಮ ಚಟುವಟಿಕೆಗಳಿಂದ ಹತ್ತಾರು ಯುವ ಜೀವಗಳು ಬಲಿಯಾಗ್ತಿವೆ. ಅದು ಹೇಗೆ ಅನ್ನೋದ್ರ ಎಕ್ಸ್ಕ್ಲೂಸಿವ್ ಮಾಹಿತಿ ವಿಜಯಟೈಮ್ಸ್ ತಂಡಕ್ಕೆ ಸಿಕ್ಕಿದೆ.
ಬೆಂಗಳೂರಿನ ಸಜರ್ಾಪುರದ ರಾಮನಾಯಕನ ಹಳ್ಳಿ ಗ್ರಾಮದಲ್ಲಿರುವ ಮೋಕ್ಷ ಫೌಂಡೇಷನ್ ನಡೆಸುತ್ತಿರೋ ವ್ಯಸನ ಬಿಡಿಸೋ ಕೇಂದ್ರದ ಕ್ರೌರ್ಯದ ಈಗ ಬಟಾ ಬಯಲಾಗಿದೆ. ರಂಜಿತ್ ಅನ್ನೋ ಬಡ ಹುಡುಗನ ಮೇಲೆ ಮೋಕ್ಷ ಫೌಂಡೇಷನ್ ನಡೆಸಿದ ದೌರ್ಜನ್ಯ ಬರ್ಬರವಾಗಿದೆ. ಆತ ಈಗ ಜೀವನ್ಮರಣದ ನಡುವೆ ಹೋರಾಟ ಮಾಡ್ತಿದ್ದಾನೆ. ಮೋಕ್ಷ ಫೌಂಡೇಷನ್ ಸಿಬ್ಬಂದಿ ನಡೆಸಿರೋ ದಾಳಿಯಿಂದ ರಂಜಿತ್ ಎರಡು ಕಿಡ್ನಿ ಕಳೆದುಕೊಂಡಿದ್ದಾನೆ. ಲಿವರ್ ಡ್ಯಾಮೇಜ್ ಆಗಿದೆ. ಇರೋ ಒಬ್ಬ ಮಗನನಿಗಾದ ಅನ್ಯಾಯ ಕಂಡು ವಿಧವೆ ತಾಯಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಆದ್ರೆ ರಂಜಿತ್ನನ್ನು ಈ ದುಸ್ಥಿತಿಗೆ ತಳ್ಳಿದ ಮೋಕ್ಷ ಫೌಂಡೇಷನ್ನವರು ತಮ್ಮೆಲ್ಲಾ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ರಂಜಿತ್ನ ಸ್ಥಿತಿ ಗಂಭೀರ ಆದಾಗ ಆತನನ್ನು ವೈದೇಹಿ ಆಸ್ಪತ್ರೆಗೆ ಸೇರಿಸಿ, ಓಡಿ ಹೋಗಿದ್ದಾರೆ. ಜೊತೆಗೆ ಈ ಘಟನೆಯನ್ನು ಯಾರಿಗೂ ಹೇಳದಂತೆ ಜೀವ ಬೆದರಿಕೆಯನ್ನೂ ಕೊಟ್ಟಿದ್ದಾರೆ.
ಇದು ರಂಜಿತ್ ಒಬ್ಬನ ಕತೆಯಲ್ಲ, ಈ ರೀತಿ ಮೋಕ್ಷ ಫೌಂಡೇಷನ್ನೊಳಗಿರೂ ಮೂವತ್ತುಕ್ಕೂ ಹೆಚ್ಚು ವ್ಯಸನಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೆ ಈ ಕೇಂದ್ರದವರು ಕೊಡೋ ಟಾರ್ಚರ್ಗೆ ಅನೇಕರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದೆ, ಸಕರ್ಾರದ ನೀತಿ ನಿಯಮಗಳನ್ನ ಪಾಲಿಸದೆ ನಡೆಯುತ್ತಿರೋ ಮೋಕ್ಷ ಫೌಂಡೇಷನ್ನ ಇನ್ನಷ್ಟು ಕರ್ಮಕಾಂಡದ ಕತೆಯನ್ನ ವಿಜಯಟೈಮ್ಸ್ ವಿಷುವಲ್ ಸಮೇತವಾಗಿ ಬುಧವಾರ ಸಂಜೆ ಬಯಲುಮಾಡಲಿದೆ. ತಪ್ಪದೇ ವೀಕ್ಷಿಸಿ ವಿಜಯಟೈಮ್ಸ್. ಜೊತೆಗೆ ನಮ್ಮ ಚಾನೆಲನ್ನ ಸಬ್ಸ್ಕ್ರೈಬ್ ಮಾಡಿ, ಬೆಲ್ ಬಟನ್ ಒತ್ತಿ. ಲೈಕ್ ಶೇರ್ ಮಾಡಿ

Exit mobile version