ಡೆಡ್ಲಿ ಬಿಪಿಎ, ನಾವು ಸೇವಿಸುವ ಆಹಾರ ನಮ್ಮ ಪ್ರಾಣಕ್ಕೆ ಕಂಟಕ! ; ತಪ್ಪದೇ ಈ ಮಾಹಿತಿ ಓದಿ

ಪ್ರತಿನಿತ್ಯ ನಾವು ಪ್ಲಾಸ್ಟಿಕ್ (Plastic) ಡಬ್ಬಗಳಲ್ಲಿ ಸ್ಟೋರ್ ಮಾಡಲಾದ ಆಹಾರ, ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿ ಕುಡಿಯುವ ನೀರು ನಮಗೆ ಆಪತ್ತು! ಎಂಬ ಸಂಗತಿ ನಮಗೆ ತಿಳಿದಿಲ್ಲ.

ಆ ಬಾಟಲ್ ಡಬ್ಬಗಳಲ್ಲಿ ಉಪಯೋಗಿಸುವ ರಾಸಾಯನಿಕಗಳು ಎಷ್ಟು ಡೇಂಜರಸ್ ಅಂತ ನಿಮ್ಗೆ ಗೊತ್ತಿದಿಯಾ? ಇದಕ್ಕೆ ಉತ್ತರ ಇಂದಿನ ಸ್ಟೋರಿಯಲ್ಲಿ ಹೇಳಿದ್ದೀವಿ ವೀಕ್ಷಿಸಿ.

ಸ್ನೇಹಿತರೆ ನಮ್ಮ ಹಿರಿಯರು ಅಂದಿನ ಕಾಲದಲ್ಲಿ ಮಣ್ಣಿನ ಮಡಿಕೆಯನ್ನು ಉಪಯೋಗಿಸಿ ಆಹಾರವನ್ನು ತಯಾರಿಸುತ್ತಿದ್ದರು. ಅವರು ಯಾವುದೇ ತರಹದ ಪ್ಲಾಸ್ಟಿಕ್ ಮೈಕ್ರೋ ವೇವ್ ಗಳನ್ನು ಉಪಯೋಗಿಸದೆ,

ಆಹಾರವನ್ನು ತಯಾರಿಸಿ ಉತ್ತಮವಾದ ಜೀವನವನ್ನು ಕಳೆದರು. ಆದ್ರೆ ನಾವು ಈಗ ಸೇವಿಸುತ್ತಿರುವ ಪ್ರತಿ ತುತ್ತಿನಲ್ಲೂ ಅಡಗಿದೆ ಕಾರ್ಕೋಟಕ ವಿಷ. ಅಷ್ಟಕ್ಕೂ ಬಿಪಿಎ (BPA) ಅಂದ್ರೆ ಏನೂ?

ಬಿಪಿಎ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ, ಬಿಪಿಎ ಎಂದರೆ ಬಿಸ್ಫೆನಾಲ್ ಎ ಎಂದು ಅರ್ಥ. ಇದು ಈಸ್ಟ್ರೊಜೆನ್ನ ಸಂಶ್ಲೇಷಿತ ರೂಪವಾಗಿದೆ.

ಇದು ಸಾಮಾನ್ಯವಾಗಿ ಪ್ಲಾಸ್ಟಿಕ್ ಅನ್ನು ಗಟ್ಟಿಯಾಗಿಸಲು, ಆಹಾರ ಮತ್ತು ಪಾನೀಯ ಕ್ಯಾನ್‌ಗಳ ಒಳ ಭಾಗವನ್ನು ಲೇಪಿಸಲು ಬಳಸುವ ರಾಸಾಯನಿಕವಾಗಿದೆ.

ಇದನ್ನೂ ಓದಿ : https://vijayatimes.com/health-tips-for-dark-circle/


ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ಲೇಪಿತ ಪಾತ್ರೆಗಳಲ್ಲಿ ಇರಿಸಲಾಗಿರುವ ಆಹಾರ ಮತ್ತು ಬಿಸಿ ನೀರಿನಲ್ಲಿ ಇದು ಸುಲಭವಾಗಿ ಕರಗುತ್ತದೆ.
ಅಂತಹ ಪಾತ್ರೆಗಳಿಂದ ತಿಂದ ಅಥವಾ ಕುಡಿದ ನಂತರ ಅದು ಸುಲಭವಾಗಿ ನಮ್ಮ ದೇಹವನ್ನು ಸೇರುತ್ತದೆ.

ಬಿಪಿಎ ನಮ್ಮ ದೇಹವನ್ನು ಹೇಗೆ ಸೇರುತ್ತದೆ? : ಎ ಬಿಪಿಎ ನಮ್ಮ ದೇಹವನ್ನು ಏಕೆ ಸೇರಬಹುದು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಹೌದು, ನಾವು ಮಗುವಿಗೆ ಹಾಲುಣಿಸಲು ಉಪಯೋಗಿಸುವ ಮಗುವಿನ ಬಾಟೆಲ್ ಗಳ,

ಸಮಯ ಉಳಿಸಲೆಂದು ತಿನ್ನುವ ಪೂರ್ವ ಸಿದ್ಧ ಆಹಾರ ಪ್ಯಾಕೇಜ್ ಗಳು, ಬಾಯಿಗೆ ರುಚಿ ತರಲು ಕುಡಿಯುವ ಸೋಡಾ ಅಥವಾ ಜ್ಯೂಸ್ ಬಾಟಲ್ ,

ಪ್ಲಾಸ್ಟಿಕ್ ಡಬ್ಬಗಳು ಮತ್ತು ಪ್ಲಾಸ್ಟಿಕ್ ಬಾಟಲ್ ಗಳಿಂದ ಬಿಪಿಎ ನಮ್ಮ ದೇಹವನ್ನು ಅತಿ ಸುಲಭವಾಗಿ ಪ್ರವೇಶಿಸುತ್ತವೆ.

ಬಿಪಿಎಗಳ ಮೂಲ ಯಾವುದು ಗೊತ್ತಾ? : ನಾವು ನಮ್ಮ ಮಕ್ಕಳು ಹಠ ಮಾಡಲು ಶುರುಮಾಡಿದಾಗ ಮಕ್ಕಳನ್ನು ಸಮಾಧಾನ ಪಡಿಸಲು ಮಕ್ಕಳ ಕೈಗೆ ಗೊಂಬೆಗಳು ಅಥವಾ ಆಟದ ಸಾಮಾನುಗಳನ್ನು ಕೊಡುತ್ತವೆ.

ಆದರೆ ಈ ಆಟದ ಸಾಮಾನಿನಲ್ಲೂ ಕೂಡ ಈ ಬಿಪಿಎ ಉಪಯೋಗಿಸಲಾಗುತ್ತದೆ.

ಮಕ್ಕಳು ಆಟವಾಡುವ ಖುಷಿಯಲ್ಲಿ ಆ ಸಾಮಾನುಗಳನ್ನು ಬಾಯಲ್ಲಿ ಕಚ್ಚಿದರೆ ಅದರಲ್ಲಿನ ರಾಸಾಯನಿಕಗಳು ಮಗುವಿನ ದೇಹದೊಳಗೆ ಸೇರಿ ಮಗುವಿನ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಅದಲ್ಲದೆ ಮಗುವಿನ ಮೆದುಳಿಗೆ ದೊಡ್ಡ ಮಟ್ಟದ ತೊಂದರೆಗಳನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲ ನಾವು ಆಹಾರ ಸೇವಿಸಲು ಉಪಯೋಗಿಸುವ ಪ್ಲೇಟ್ ಗಳಲ್ಲಿಯೂ ಈ ಬಿಪಿಎ ಅಡಗಿದೆ.

ಈ ಬಿಪಿಎ ಅಡ್ಡ ಪರಿಣಾಮಗಳೇನು ? : ಈ ಬಿಪಿಎ ಮಹಿಳೆಯರಲ್ಲಿ ಬ್ರೆಸ್ಟ್ ಕ್ಯಾನ್ಸರ್ (Breast Cancer) ಮತ್ತು ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಅಷ್ಟೇ ಅಲ್ಲ ಮಹಿಳೆಯರಲ್ಲಿ ಬಂಜೆತನ, ಪುರುಷರಿಗೆ ದುರ್ಬಲತೆ, ವಯಸ್ಕರು ಮತ್ತು ಮಕ್ಕಳಲ್ಲಿ ಒಬೆಸಿಟಿ ತೊಂದರೆ.

ವಯಸ್ಕರಲ್ಲಿ ಹೃದಯ ರಕ್ತನಾಳದ ಕಾಯಿಲೆ, ಅಲರ್ಜಿ, ಅಸ್ತಮಾ, ಖಿನ್ನತೆ ಮತ್ತು ಮೆಮೊರಿ ದುರ್ಬಲತೆಯಂತ ತೊಂದರೆಗಳು ಕಾಡುತ್ತದೆ.

ಬಿಪಿಎ ತಡೆಗಟ್ಟಲು ಪರ್ಯಾಯಗಳೇನು? : ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಆದಷ್ಟು ಬಿಸಿಯಾದ ಆಹಾರವನ್ನು ಸೇವಿಸಿ ಮತ್ತು ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಸಂಗ್ರಹಿಸಲಾದ ಆಹಾರವನ್ನು ತಪ್ಪಿಸಿ.

https://youtu.be/ij1vIEBri1c

ಪ್ಲಾಸ್ಟಿಕ್ ಕಪ್ ನಿಂದ ಚಹಾ ಅಥವಾ ಕಾಫಿ ಕುಡಿಯುವ ಬದಲಿಗೆ ಸೆರಾಮಿಕ್ ಕಪ್ ಗಳನ್ನು ಬಳಸಿ. ಪ್ಲಾಸ್ಟಿಕ್ ಬದಲಿಗೆ ಗಾಜಿನ ಅಥವಾ ಸ್ಟೀಲ್ ಬಾಟಲಿಗಳಲ್ಲಿ ನೀರನ್ನು ಕುಡಿಯಿರಿ.

ಇದನ್ನೂ ಓದಿ : https://vijayatimes.com/history-of-anantha-padmanabha-swamy-temple/

ಮೈಕ್ರೋವೇವ್ ನಲ್ಲಿ ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸದೇ, ಬದಲಿಗೆ ಗಾಜಿನ ಪಾತ್ರೆಗಳನ್ನು ಉಪಯೋಗಿಸಿ. ಆದಷ್ಟು ಮಕ್ಕಳಿಗೆ ಪ್ಲಾಸ್ಟಿಕ್ ಆಟಿಕೆಗಳನ್ನು ಕೊಡುವುದನ್ನು ತಡೆಯಿರಿ.

ಈಗಲಾದರೂ ಎಚ್ಚೆತ್ತುಕೊಂಡು ಆದಷ್ಟು ಮಣ್ಣಿನ ಪಾತ್ರೆ, ಸೆರಮಿಕ್ ಪಾತ್ರೆ, ಸ್ಟೀಲ್ ಬಾಟೆಲ್ ಗಳನ್ನು ಉಪಯೋಗಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

Exit mobile version