ದೀಪಾವಳಿ ನಮೆಲ್ಲರ ಮನೆ ಮನ ಬೆಳಗಲಿ

ಹಬ್ಬಗಳ ರಾಜ ದೀಪಾವಳಿ ಹಬ್ಬ ಎಂದರೆ ಎಲ್ಲಿದ ಸಂತೋಷ ಸಂಭ್ರಮ, ಮನೆಯೆಲ್ಲ ಶೃಂಗಾರ. ಮನೆ ತುಂಬಾ ದೀಪಗಳ ಸಾಲು ಸಾಲು ,ರುಚಿ ರುಚಿಯಾದ , ಹೊಸ ಬಟ್ಟೆ ತೊಟ್ಟು ಖುಷಿ ಖುಷಿಯಾಗಿ ಓಡಾಟ ಮನೆಯಲ್ಲಿ ವಿವಿಧ ಪೂಜೆಗಳು, ಗಾಡಿ ಪೂಜೆ ಗೋವಿಗೆ ಪೂಜೆ ಬಗೆ ಬಗೆಯ ತಿಂಡಿ ತಿನಿಸುಗಳು ಅಗತ್ಯವಿಲ್ಲದಿದ್ದರೂ ಪೇಟೆಗೆ ಹೋಗಿ ತಿರುಗಾಡಿಕೊಂಡು ಬರುವುದು. ಒಂದೇ ಎರಡೇ ನಾಲ್ಕೈದು ದಿನಗಳು ಎಲ್ಲೆಲ್ಲೂ ಪಟಾಕಿಯ ಶಬ್ಧ. ಹೀಗೆ ದೀಪಾವಳಿಗೆ ಪೂರ್ವಸಿದ್ಧತೆಗೇ ವಾರಗಟ್ಟಲೆ ಬೇಕು.

ಹಬ್ಬಕ್ಕೆ ನೆಂಟರು, ಬಂದು ಬಳಗದವರು ಎಲ್ಲಾ ಒಟ್ಟಿಗೆ ಸೇರಿದಾಗ ಆಗುವ ಖುಷಿನೇ ಬೇರೆ. ಬಣ್ಣ ಬಣ್ಣದ ದೀಪಾಲಂಕಾರದಿಂದ ಶೃಂಗಾರಗೊಳ್ಳುವ ಮನೆಗಳು ಪೇಟೆಗಳು ದೇವಾಲಯಗಳು ಕಣ್ಣಿಗೆ ಹಬ್ಬವಾಗುವುದರ ಜೊತೆಗೆ ಮನಸ್ಸಿಗೆ ಮುದ ನೀಡುವುದು. ಮಕ್ಕಳ ಸಂತೋಷವಂತೂ ಹೇಳತೀರದು. ಪಟಾಕಿಯೇ ಮಕ್ಕಳ ಮೊದಲ ಸಂಭ್ರಮವೆಂದರೆ ತಪ್ಪಾಗಲಾರದು. ಆದರೆ ಈ ಪಟಾಕಿಯಿಂದ ಅನಾಹುತವಾಗಿ ಹಬ್ಬದ ಸಂಭ್ರಮವೆಲ್ಲಾ ಹಾಳಾಗಿ ಹೋಗುವ ಸಂಭವವೂ ಇದೆ. ಆದುದರಿಂದ ಸಂಭ್ರಮದ ಜೊತೆ ಜಾಗರೂಕತೆಯೂ ಅಷ್ಟೇ ಮುಖ್ಯವಾಗಿದೆ. ಅದರಲ್ಲೂ ಈ ವರ್ಷವಂತೂ ಕೊರೋನಾದಿಂದಲೇ ಜನ ಜೀವನ ಹೈರಾಣಾಗಿ ಹೋಗಿದೆ. ಸಾಕಷ್ಟು ಜೀವಗಳು ಜೀವ ಹಾನಿ ಆರ್ಥಿಕ ಹಾನಿ ಆಗಿ ಹೋಗಿವೆ ಸಾಕಷ್ಟು ಜನರು ಆ ನೋವಿನಲ್ಲೇ ಇದ್ದಾರೆ. ಆದ್ರಿಂದ ಹಬ್ಬದ ದಿನಗಳಲ್ಲಿ ಜಾಗರೂಕರಾಗಿ ನಡೆದುಕೊಳ್ಳುವುದು ಹಾಗೂ ಸರಳವಾಗಿ ಆಚರಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೊಳಗಾಗಿರುವುದರಿಂದ ಈ ಸಲದ ಹಬ್ಬವನ್ನು ಸರಳವಾಗಿ ಆಚರಿಸೋಣ. ಇನ್ನು ದೀಪಾಲಂಕಾರಕ್ಕಾಗಿ ಅತೀ ಹೆಚ್ಚು ಆಡಂಬರ ಬೇಡ .ಯಾಕೆಂದರೆ ಇದರಿಂದಾಗಿ ಅತ್ಯಧಿಕ ಕರೆಂಟ್ ಬಳಕೆಯಾಗುವುದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕರೆಂಟ್ ಕಡಿತವಾಗಿ ತೊಂದರೆಗಳಾಗುವುದು. ಕಷ್ಟದ ಈ ದಿನಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕಾಗಿದೆ. ಇದ್ದವರು ದುಂದು ವೆಚ್ಚ ಮಾಡುವ ಬದಲು ಇಲ್ಲದವರಿಗೆ ಸಹಾಯ ಮಾಡಿ ದೀಪಾವಳಿ ಮಾಡಿ. ಆದಷ್ಟು ಹಣತೆಯನ್ನೇ ಹಚ್ಚಿ ದೀಪಾವಳಿ ಹಬ್ಬ ಆಚರಿಸಿದರೆ ಒಳ್ಳೆಯದು. ಪಟಾಕಿಯಿಂದ ಪರಿಸರ ಹಾಳಾಗುವುದರ ಜೊತೆಗೆ ಆರೋಗ್ಯವೂ ಹಾಳಾಗುವುದು. ಮನೆ ತುಂಬಾ ಹಣತೆ ದೀಪಾಲಂಕಾರ ಮಾಡಿದಾಗ ಇದನ್ನು ನೋಡುವುದೇ ಒಂದು ಸೊಬಗು ಕಣ್ಮನ ತಂಪುಗೊಳಿಸಿ

Exit mobile version