ಸಂಘರ್ಷಕ್ಕೆ ತಿರುಗಿದ ‘ದೆಹಲಿ ಚಲೋ’: ಓರ್ವ ಯುವ ರೈತ ಸಾವು , 2 ದಿನ ಪ್ರತಿಭಟನೆ ಸ್ಥಗಿತ

New Delhi: ಎಂಎಸ್ಪಿ(MSP)ಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಪಂಜಾಬ್(Punjab) ಮತ್ತು ಹರಿಯಾಣ (Hariyana) ರೈತರು (Farmers) ನಡೆಸುತ್ತಿರುವ ದೆಹಲಿ ಚಲೋ ಹೋರಾಟ ಸಂಘರ್ಷಕ್ಕೆ ತಿರುಗಿದ್ದು, ಓರ್ವ ರೈತ ಸಾವಿಗೀಗಿದ್ದಾನೆ. 12 ಪೊಲೀಸರೂ ಗಾಯಗೊಂಡಿದ್ದು, ಉದ್ವಿಗ್ವ ಸ್ಥಿತಿ ಹಿನ್ನೆಲೆ 2 ದಿನ ಹೋರಾಟವನ್ನು ನಿಲ್ಲಿಸಲು ರೈತ ಮುಖಂಡರು ಕರೆ ನೀಡಿದ್ದಾರೆ.

ಶಂಭು ಮತ್ತು ಖನೌರಿ (Shambhu and Khanauri) ಗಡಿಯಲ್ಲಿ ಸಾವಿರಾರು ರೈತರು, ಭದ್ರತಾ ಸಿಬ್ಬಂದಿ ಜೊತೆಗೆ ಸಂಘರ್ಷಕ್ಕೆ ಮುಂದಾಗಿದ್ದಾರೆ. ಇದರಿಂದ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೇಂದ್ರ ಸರ್ಕಾರದೊಂದಿಗೆ (Central Govt) ನಾಲ್ಕನೇ ಸುತ್ತಿನ ಸಭೆಯ ನಂತರ ಬೇಡಿಕೆಯಂತೆ ಎಂಎಸ್ಪಿಗೆ ಒಪ್ಪದ ಕಾರಣ ರೈತರು ದೆಹಲಿಗೆ (Delhi) ಮುತ್ತಿಗೆ ಹಾಕಲು ಶಂಭು ಗಡಿಯಲ್ಲಿ ಹಾಕಿರುವ ಬ್ಯಾರಿಕೇಡ್ಗಳನ್ನು ಮುರಿಯಲು ಯತ್ನಿಸಿದರು. ಇದನ್ನು ತಡೆಯಲು ಪೊಲೀಸರು ಅಶ್ರುವಾಯು ಸಿಡಿಸಿದರು.

ಈ ವೇಳೆ ನಡೆದ ತಿಕ್ಕಾಟದಲ್ಲಿ ಪಂಜಾಬ್‌ನ ಬಟಿಂಡಾ ಜಿಲ್ಲೆಯ (Bathinda district of Punjab) ಬಲೋಕೆ ಗ್ರಾಮದ ರೈತ ಸುಭಕರನ್ ಸಿಂಗ್ ಎಂಬ 21 ವರ್ಷದ ಯುವ ರೈತ ಸಾವಿಗೀಡಾಗಿದ್ದಾನೆ. ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.ಭದ್ರತೆಗಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾನಿರತ ರೈತರು, ಬಳಿಕ ಅವರನ್ನು ಸುತ್ತುವರೆದು ಮೆಣಸಿನಕಾಯಿ ಪುಡಿಯನ್ನು ಸುರಿದು ಅದಕ್ಕೆ ಬೆಂಕಿ ಹಚ್ಚಿದರು. ಇದರಿಂದ ಹಲವಾರು ಪೊಲೀಸರು (Police) , ಉಸಿರಾಟ ತೊಂದರೆ, ಕಣ್ಣಿನ ಉರಿ, ನೋವು ಅನುಭವಿಸಿದರು. ಪ್ರತಿಭಟನಾ ಸ್ಥಳದಲ್ಲಿ ದೊಡ್ಡ ಬೆಂಕಿಯ ಜ್ವಾಲೆಗಳು ಎದ್ದವು. ಇದರಿಂದ ಹೋರಾಟ ಸಂಘರ್ಷದ ರೂಪ ಪಡೆಯಿತು.

ಕಳೆದ ಬಾರಿಯೂ ಕೃಷಿ ಕಾಯ್ದೆಗಳ (Bariyu Agricultural Acts) ವಿರುದ್ಧ ನಡೆದ ಹೋರಾಟವು ಸಂಘರ್ಷ ರೂಪಕ್ಕೆ ತಿರುಗಿ ಭಾರಿ ಅನಾಹುತ ಉಂಟು ಮಾಡಿತ್ತು. ಅಂಥದ್ದೇ ಘಟನೆಗಳು ಈ ಬಾರಿ ನಡೆಯಬಾರದು. ಇಲ್ಲವಾದಲ್ಲಿ ದೆಹಲಿ ಚಲೋ ಹೋರಾಟಕ್ಕೆ ಜಯ ಸಿಗುವುದಿಲ್ಲ ಎಂದರಿತ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ (Sarwan Singh Pandher) ಪ್ರತಿಭಟನೆಯನ್ನು ಸದ್ಯಕ್ಕೆ ನಿಲ್ಲಿಸಲು ರೈತರನ್ನು ಕೋರಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಂಧೇರ್ (Pandher), ಖನೌರಿ (Khanauri) ಗಡಿಯಲ್ಲಿ ನಡೆದ ಸಂಘರ್ಷದಿಂದಾಗಿ ಹೋರಾಟ ಸದ್ಯಕ್ಕೆ ನಿಲ್ಲಿಸಲಾಗಿದೆ. ಪೊಲೀಸರು ರೈತರ ಮೇಲೆ ರಬ್ಬರ್ ಬುಲೆಟ್, ಅಶ್ರುವಾಯುಗಳನ್ನು ಸಿಡಿಸಿದ್ದಾರೆ. ಪರಿಸ್ಥಿತಿ ನೋಡಿಕೊಂಡು, ಚರ್ಚಿಸಿದ ಬಳಿಕ ಮುಂದಿನ ನಿರ್ಧಾರವನ್ನು ಶುಕ್ರವಾರ ಸಂಜೆ ಪ್ರಕಟಿಸಲಾಗುವುದು ಎಂದಿದ್ದಾರೆ.

Exit mobile version