ಮೃತ ಗಂಡನ ಆಸ್ತಿ ಮೇಲೆ ಹಿಂದೂ ಮಹಿಳೆಗೆ ಸಂಪೂರ್ಣ ಅಧಿಕಾರವಿರುವುದಿಲ್ಲ: ದೆಹಲಿ ಹೈಕೋರ್ಟ್

New Delhi: ದಿಲ್ಲಿ ಹೈಕೋರ್ಟ್‌ (Delhi High court) ಮಹತ್ವದ ಆದೇಶ ಹೊರಡಿಸಿದ್ದು, ಯಾವುದೇ (Delhi HC New Order) ಆದಾಯ ಇಲ್ಲದ ಹಿಂದೂ ಮಹಿಳೆ ತನ್ನ ಜೀವಿತಾವಧಿವರೆಗೂ

ಮೃತ ಗಂಡನ ಆಸ್ತಿಯನ್ನು ಅನುಭವಿಸುವ ಹಕ್ಕು ಹೊಂದಿರುತ್ತಾಳೆ ಎಂದು ತಿಳಿಸಿದೆ. ಆದರೆ ಮೃತ ಗಂಡನ ಆಸ್ತಿಯ ಮಾರಾಟ ಅಥವಾ ಪರಭಾರೆಗೆ ಪತ್ನಿಗೆ ಸಂಪೂರ್ಣ ಅಧಿಕಾರ ಇಲ್ಲ ಎಂದು

ನ್ಯಾಯಾಲಯ (Delhi HC New Order) ಸ್ಪಷ್ಟನೆ ನೀಡಿದೆ.

ಯಾವುದೇ ಮಹಿಳೆ ತನ್ನ ಮೃತ ಗಂಡನ ಆಸ್ತಿಯನ್ನು ಮಾರಾಟ ಮಾಡುವ ವೇಳೆ ಆತನಿಗೆ ಕಾನೂನು ಬದ್ಧ ಉತ್ತರಾಧಿಕಾರಿ ಇದ್ದರೆ ಅವರ ಸಮ್ಮತಿಯನ್ನು ಪಡೆಯಬೇಕಾದ್ದು ಕಡ್ಡಾಯ ಎಂದು ನ್ಯಾಯಾಲಯ

ಹೇಳಿದೆ. ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಮೃತ ವ್ಯಕ್ತಿಯ ಉತ್ತರಾಧಿಕಾರಿಗಳು ಇದ್ದರೆ ಅವರ ಸಮ್ಮತಿ ಸಮೇತ ಮೃತ ಗಂಡನ ಆಸ್ತಿಯನ್ನು ಮಹಿಳೆ ಮಾರಾಟ ಮಾಡಬಹುದಾಗಿದೆ.

ಏನಿದು ಪ್ರಕರಣ?
ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿತ್ತು ಆಸ್ತಿ ಹಂಚಿಕೆ ಕುರಿತ ಪ್ರಕರಣವೊಂದು, ವ್ಯಕ್ತಿಯೊಬ್ಬ ತನ್ನ ಮರಣಕ್ಕೂ ಮುನ್ನ ವಿಲ್ (Will) ಬರೆಸಿದ್ದ. ವಿಲ್ ಪ್ರಕಾರ, ಆತನ ಹೆಂಡತಿ ತನ್ನ ಜೀವಿತಾವಧಿವರೆಗೂ ಗಂಡನ

ಆಸ್ತಿಯನ್ನು ಅನುಭವಿಸಬಹುದಿತ್ತು. ಆಕೆಯ ಮರಣಾನಂತರ ಆಸ್ತಿಯನ್ನು ಹೇಗೆಲ್ಲಾ ಹಂಚಿಕೆ ಮಾಡಬೇಕು (Delhi HC New Order) ಎಂದು ಪತಿ ತನ್ನ ವಿಲ್‌ನಲ್ಲಿ ಬರೆದಿಟ್ಟಿದ್ದರು.

ಈ ಪ್ರಕರಣದ ಕುರಿತಾಗಿ ತೀರ್ಪು ನೀಡಿರುವ ದಿಲ್ಲಿ ನ್ಯಾಯಾಲಯ, ಯಾವುದೇ ಆದಾಯ ಇಲ್ಲದ ಹಿಂದೂ ಮಹಿಳೆ ತನ್ನ ಗಂಡನ ಆಸ್ತಿಯನ್ನು ಅನುಭವಿಸುವ ಸಂಪೂರ್ಣ ಹಕ್ಕು ಹೊಂದಿರುತ್ತಾರೆ ಎಂದು ಹೇಳಿದೆ.

ಆಕೆ ತನ್ನ ಗಂಡ ನೀಡಿದ್ದ ಜೀವನ ಮಟ್ಟವನ್ನು ಆತನ ಮರಣಾನಂತರವೂ ಮುಂದುವರೆಸಿಕೊಂಡು ಹೋಗಬಹುದು. ಆಕೆಯ ಜೀವಿತಾವಧಿವರೆಗೂ ಆರ್ಥಿಕ ಭದ್ರತೆ ಪಡೆಯಬಹುದು ಎಂದು ಹೇಳಿದೆ.

ಈ ಮೂಲಕ ಮಹಿಳೆಯು ತನ್ನ ಪತಿಯ ಮರಣಾನಂತರ ಆಕೆಯ ಮಕ್ಕಳ ಆಶ್ರಯದಲ್ಲಿ, ಅಧೀನದಲ್ಲಿ ಬದುಕುವಂತೆ ಆಗಬಾರದು ಎನ್ನುವ ಕಾರಣಕ್ಕೆ ನ್ಯಾಯಾಲಯ (Court) ಈ ತೀರ್ಮಾನ ಕೈಗೊಂಡಿದೆ.

ಇದೇ ಕಾರಣಕ್ಕಾಗಿ ಮಹಿಳೆಗೆ ತನ್ನ ಜೀವಿತಾವಧಿವರೆಗೂ ಮೃತ ಗಂಡನ ಆಸ್ತಿಯನ್ನು ಅನುಭವಿಸಲು ಸಂಪೂರ್ಣ ಹಕ್ಕು ಹೊಂದಿರುತ್ತಾಳೆ ಎಂದು ನ್ಯಾಯಾಲಯ ಹೇಳಿದೆ. ಅಷ್ಟೇ ಅಲ್ಲ, ಆಸ್ತಿಯಿಂದ ಲಭ್ಯ ಆಗುವ

ಆದಾಯವನ್ನು ತನ್ನ ಜೀವಿತಾವಧಿಯವರೆಗೆ ಸಂಪೂರ್ಣವಾಗಿ ಬಳಸಿಕೊಳ್ಳುವ ಅಧಿಕಾರವೂ ಮಹಿಳೆಗೆ ಇದೆ ಎಂದು ನ್ಯಾಯಾಲಯ ಹೇಳಿದೆ.

Exit mobile version