ಹಿಂದೂ ಅಧ್ಯಯನ ಕೇಂದ್ರವನ್ನು ರಚಿಸಲು 17 ಸದಸ್ಯರ ಸಮಿತಿಯನ್ನು ಸ್ಥಾಪಿಸಿದ ದೆಹಲಿ ವಿಶ್ವವಿದ್ಯಾಲಯ!

New Delhi : ದೆಹಲಿ ವಿಶ್ವವಿದ್ಯಾನಿಲಯವು(Delhi University Hindu Studies) 17 ಸದಸ್ಯರ ಸಮಿತಿಯನ್ನು ಸ್ಥಾಪಿಸಿದ್ದು, ವಿಶ್ವವಿದ್ಯಾಲಯದಲ್ಲಿ ಹಿಂದೂಗಳ(Hindu) ಇತಿಹಾಸದ ಬಗ್ಗೆ ಕೋರ್ಸ್‌ಗಳನ್ನು ಕಲಿಸಲು ಹಿಂದೂ ಅಧ್ಯಯನ ಕೇಂದ್ರವನ್ನು ರಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಸುದ್ದಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಶೈಕ್ಷಣಿಕ ಪರಿಷತ್ತಿನ ಸದಸ್ಯರೊಬ್ಬರು ಈ ಕೇಂದ್ರದ ಅಗತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು.

17 ಸದಸ್ಯರ ಸಮಿತಿಯ ನೇತೃತ್ವವನ್ನು ದಕ್ಷಿಣ ದೆಹಲಿ ಕ್ಯಾಂಪಸ್‌ನ ನಿರ್ದೇಶಕ ಪ್ರಕಾಶ್ ಸಿಂಗ್(prakash singh) ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಭಾರತದಾದ್ಯಂತ ಸುಮಾರು 23 ವಿಶ್ವವಿದ್ಯಾನಿಲಯಗಳು ಹಿಂದೂ ಅಧ್ಯಯನದ ಕೋರ್ಸ್‌ಗಳನ್ನು ನೀಡುತ್ತವೆ.

ದೆಹಲಿ ವಿಶ್ವವಿದ್ಯಾನಿಲಯ ಕೂಡ ಹಿಂದೂ ಅಧ್ಯಯನ ಕೇಂದ್ರವನ್ನು ಹೊಂದಿರಬೇಕು ಎಂದು ಭಾವಿಸಿದೆ ಎಂದು ಪ್ರಕಾಶ್ ಸಿಂಗ್ ಹೇಳಿರುವುದಾಗಿ ಪಿಟಿಐ(PTI) ವರದಿಯಲ್ಲಿ ಉಲ್ಲೇಖಿಸಿದೆ.

ನಮ್ಮಲ್ಲಿ ಬೌದ್ಧ ಅಧ್ಯಯನ ಕೇಂದ್ರವಿದೆ. ಆದರೆ ಹಿಂದೂ ಅಧ್ಯಯನ ಕೇಂದ್ರವಿಲ್ಲ! ಹಿಂದೂ ಅಧ್ಯಯನಕ್ಕಾಗಿ ಕೇಂದ್ರವನ್ನು ತೆರೆಯುವುದು ಕಾರ್ಯಸಾಧ್ಯವೇ ಎಂದು ನಾವು ನೋಡಬೇಕಿದೆ.

ಸಮಿತಿಯು ಆರಂಭದಲ್ಲಿ ಕೇಂದ್ರದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಲು ಗಮನಹರಿಸುತ್ತದೆ ಮತ್ತು ನಂತರ ಅದಕ್ಕೆ ಅನುಗುಣವಾಗಿ ಕೋರ್ಸ್‌ಗಳನ್ನು ಪರಿಚಯಿಸುತ್ತದೆ ಎಂದು ಹೇಳಿದರು.

ಮೊದಲು ನಾವು ಸ್ನಾತಕೋತ್ತರ ಮತ್ತು ಸಂಶೋಧನೆಯಲ್ಲಿ ಕೋರ್ಸ್‌ಗಳನ್ನು(Delhi University Hindu Studies) ಪರಿಚಯಿಸುತ್ತೇವೆ ಮತ್ತು ನಂತರ ನಾವು ಯುಜಿ(UG) ಕೋರ್ಸ್‌ಗಳನ್ನು ಪರಿಚಯಿಸಬಹುದು.

ಎಷ್ಟು ಕೋರ್ಸ್‌ಗಳನ್ನು ಪರಿಚಯಿಸಬೇಕು ಮತ್ತು ಮುಂದಿನ ಕೋರ್ಸ್‌ಗಳನ್ನು ಈ ವರ್ಷದಲ್ಲಿಯೇ ಪರಿಚಯಿಸಬೇಕೇ ಎಂಬುದನ್ನು ಸಮಿತಿಯು ನಿರ್ಧರಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ.

ಆದರೆ, ಶೈಕ್ಷಣಿಕ ಪರಿಷತ್ ಸದಸ್ಯರೊಬ್ಬರು ಕೇಂದ್ರದ ಅಗತ್ಯವನ್ನು ವಿರೋಧಿಸಿದ್ದು, ಸಿಖ್(Sikh), ಮುಸ್ಲಿಂ(Muslim) ಮತ್ತು ಇತರ ಕೇಂದ್ರಗಳು ಎಲ್ಲಿವೆ?

ವಿಶ್ವವಿದ್ಯಾನಿಲಯವು ಈ ಇತರ ಧರ್ಮಗಳಿಗೆ ಕೋರ್ಸ್‌ಗಳನ್ನು ತೆರೆಯಬೇಕು ಎಂದು ಕೌನ್ಸಿಲ್ ಸದಸ್ಯರು ಅಭಿಪ್ರಾಯಿಸಿದ್ದಾರೆ.
ಇದನ್ನೂ ಓದಿ: https://vijayatimes.com/babar-azam-video-leaked/

ಈ ಹೇಳಿಕೆಗೆ ಉತ್ತರಿಸಿದ ಸಿಂಗ್ ಅವರು, ದುರದೃಷ್ಟವಶಾತ್, ನಾವು ಹಿಂದೂಗಳ ಧಾರ್ಮಿಕ ಭಾಗವನ್ನು ಮಾತ್ರ ನೋಡುತ್ತೇವೆ, ಹಿಂದೂ ಒಂದು ಜೀವನ ವಿಧಾನವಾಗಿದೆ.

ಧರ್ಮವು ಅದರ ಒಂದು ಅಂಶವಾಗಿದೆ, ನಮಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕೇಂದ್ರವು ಈ ಅಂಶದ ಮೇಲೆ ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದರು.

ಸಿಂಗ್ ಜೊತೆಗೆ, ಸಮಿತಿಯ ಸದಸ್ಯರು ಮುಕ್ತ ಕಲಿಕೆಯ ಕ್ಯಾಂಪಸ್‌ನ ನಿರ್ದೇಶಕ ಪ್ರೊ. ಪಾಯಲ್ ಮಾಗೊ, ಪ್ರೊ.ಕೆ. ರತ್ನಾಬಲಿ, ಡೀನ್, ಶೈಕ್ಷಣಿಕ ವ್ಯವಹಾರಗಳು, ಡೀನ್, ವಿಜ್ಞಾನ ವಿಭಾಗ, ಡೀನ್, ಸಾಮಾಜಿಕ ವಿಭಾಗ ವಿಜ್ಞಾನ, ಡೀನ್, ಕಲಾ ವಿಭಾಗ, ಇತಿಹಾಸ ವಿಭಾಗದ ಮುಖ್ಯಸ್ಥೆ ಪ್ರೊ.ಸೀಮಾ ಬಾವಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಸಂಗೀತ್ ಕುಮಾರ್ ರಾಗಿ ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ.ಅನಿಲ್ ಕುಮಾರ್ ಅನೇಜ ಸೇರಿದಂತೆ ಅನೇಕರು ಸಮಿತಿಯ ಭಾಗವಾಗಿದ್ದಾರೆ.

Exit mobile version