ಡೆಲ್ಟಾ ರೂಪಾಂತರಿ: ಅಮೆರಿಕಾದಲ್ಲಿ ಹೆಚ್ಚಾಗುತ್ತಿರುವ ಸೋಂಕಿತರು

ವಾಷಿಂಗ್ಟನ್, ಆ. 10: ಕೊರೊನಾ ವೈರಸ್ ಡೆಲ್ಟಾ ರೂಪಾಂತರದಿಂದಾಗಿ ಅಮೆರಿಕದಲ್ಲಿ ಸೋಂಕಿಗೀಡಾಗುತ್ತಿರುವವರ ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 6 ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ.

ಕಳೆದ ಮೂರು ದಿನಗಳಿಂದ ಅಮೆರಿಕದಲ್ಲಿ ಸರಾಸರಿ ಒಂದು ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಇದರೊಂದಿಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ 35ರಷ್ಟು ಏರಿಕೆಯಾಗಿದೆ. ಫ್ಲೋರಿಡಾ, ಲೂಯಿಸಿಯಾನ, ಅರ್ಕಾನ್ಸಾಸ್‌ಗಳಲ್ಲಿ ಅತಿಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವೂ ಶೇ 40ರಷ್ಟು ಹೆಚ್ಚಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇದು ಶೇ 18ರಷ್ಟು ಹೆಚ್ಚಾಗಿದೆ.

ಫ್ಲೋರಿಡಾದಲ್ಲಿ ಒಂದೇ ದಿನ 28,317 ಪ್ರಕರಣಗಳು ವರದಿಯಾಗಿವೆ. ಫ್ಲೋರಿಡಾದಲ್ಲಿ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಸಂಖ್ಯೆಯೂ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ ಎಂದು ಅಮೆರಿಕ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ತಿಳಿಸಿದೆ.

Exit mobile version