ಡೆಲ್ಟಾ ಪ್ಲಸ್ ರೂಪಾಂತರಿ ತಳಿಗೆ 2ನೇ ಬಲಿ

ಭೂಪಾಲ್,ಜೂ.25: ನಿನ್ನೆಯಷ್ಟೆ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಮಹಿಳೆಯೊಬ್ಬಳು ಡೆಲ್ಟಾ ಪ್ಲಸ್ ರೂಪಾಂತರದ ತಳಿಗೆ ಬಲಿಯಾಗಿದ್ದಳು. ಇದೀಗ ಮತ್ತೊಬ್ಬ ಸೋಂಕಿತ ಕೂಡ ಡೆಲ್ಟಾ ಪ್ಲಸ್ ರೂಪಾಂತರದ ತಳಿಗೆ ಬಲಿಯಾಗಿ ಎಲ್ಲರಲ್ಲು ಭಯಹುಟ್ಟಿಸಿದ್ದರೆ. ಸಾವನ್ನಪ್ಪಿದ ಇಬ್ಬರು ಕೋವಿಡ್ ಲಸಿಕೆ ಪಡೆದು ಕೊಂಡಿರಲ್ಲಿಲ್ಲ ಎಂದು ಆರೊಗ್ಯ ಸಚಿವಲಯ ಮಾಹಿತಿ ನೀಡಿದೆ.

ಮಧ್ಯ ಪ್ರದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕಿಗೆ ತುತ್ತಾದ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, ರಾಜಧಾನಿ ಭೂಪಾಲ್‌ನಲ್ಲಿ ಮೂರು ಮಂದಿ, ಉಜ್ಜೈನ್ ನಲ್ಲಿ ಇಬ್ಬರು ಮತ್ತು ರೈಸೆನ್ ಮತ್ತು ಅಶೋಕ್ ನಗರದ ತಲಾ ಒಬ್ಬರು ಸೋಂಕಿತರಿದ್ದಾರೆ ಎನ್ನಲಾಗಿದೆ. ಈ ಏಳೂ ಮಂದಿಯ ಜೆನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯನ್ನು ಕಳೆದ ತಿಂಗಳು ಮಾಡಿಸಲಾಗಿತ್ತು. ಆದರೆ ಜೂನ್ ನಲ್ಲಿ ಇದರ ಫಲಿತಾಂಶ ಪ್ರಕಟವಾಗಿದೆ.

ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಈ 7 ಮಂದಿಯ ಪೈಕಿ 3 ಮಂದಿ ಸೋಂಕಿತರು ಕೋವಿಡ್ ಲಸಿಕೆ ಮೊದಲ ಅಥವಾ 2 ಡೋಸ್ ಗಳನ್ನು ಪಡೆದಿದ್ದು, ಇಬ್ಬರು ಕೋವಿಡ್ ಲಸಿಕೆ ಪಡೆದಿರಲಿಲ್ಲ. ಎಲ್ಲರೂ ಗುಣಮುಖರಾಗಿದ್ದಾರೆ. ಲಸಿಕೆ ಪಡೆಯದೇ ಗುಣಮುಖರಾದವರ ಪೈಕಿ 22 ರ‍್ಷದ ಯುವತಿ ಮತ್ತು 2 ವಷ೯ದ ಪುಟ್ಟ ಮಗು ಕೂಡ ಸೇರಿದೆ ಎಂದು ಹೇಳಲಾಗಿದೆ.

ದೇಶಕ್ಕೆ ಕಟ್ಟೆಚ್ಚರ

ದೇಶದ ಹಲವು ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಸೋಂಕು ಹೆಚ್ಚು ಕಾಣಿಸಿಕೊಂಡಿರುವ ರಾಜ್ಯಗಳಿಗೆ ಕಂಟೈನ್ಮೆಂಟ್ ವಲಯಗಳನ್ನು ಸ್ಥಾಪಿಸಿ ಬಿಗಿಕ್ರಮ ಕೈಗೊಳ್ಳುವಂತೆ ಕೇಂದ್ರ ಸಕಾ೯ರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೊರೊನಾ ಡೆಲ್ಟಾ ಪ್ಲಸ್ ರೂಪಾಂತರ ತಳಿ ಕಾಣಿಸಿಕೊಂಡಿರುವ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ರ‍್ನಾಟಕ, ತಮಿಳುನಾಡು, ಜಮ್ಮು-ಕಾಶ್ಮೀರ ಸೇರಿದಂತೆ ಎಲ್ಲ ರಾಜ್ಯಗಳಿಗೂ ಡೆಲ್ಟಾ ಪ್ಲಸ್ ತಡೆಗೆ ಕ್ರಮಕೈಗೊಳ್ಳುವಂತೆ ಸೂಚಿಸಿರುವ ಕೇಂದ್ರ ಸಕಾ೯ರ ಡೆಲ್ಟಾ ಪ್ಲಸ್‌ ನ ಪ್ರಕರಣ ತೀವ್ರವಾಗಿರುವ ಮಹಾರಾಷ್ಟ್ರ. ಕೇರಳ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕರ‍್ಯರ‍್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

Exit mobile version