• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಬಿ.ಸಿ ನಾಗೇಶ್ ಅವರೇ ತಮ್ಮಲ್ಲಿ ವಿನಂತಿ, ದಯವಿಟ್ಟು ಇದು ಮುಂದುವರಿಯಬಾರದು : ದೇವನೂರು ಮಹಾದೇವ!

Mohan Shetty by Mohan Shetty
in ರಾಜ್ಯ
Letter
0
SHARES
1
VIEWS
Share on FacebookShare on Twitter

ರಾಜ್ಯದಲ್ಲಿ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಸದ್ಯ ಅನೇಕ ತಿರುವುಗಳನ್ನು ಪಡಯುತ್ತಿದೆ. ಈ ಮಧ್ಯೆ ರಾಜ್ಯ ಪ್ರಾಥಮಿಕ ಮತ್ತು ಫ್ರೌಡಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರಿಗೆ, ಸಾಹಿತಿಗಳಾದ ದೇವನೂರು ಮಹಾದೇವ ಅವರು ಪತ್ರ ಬರೆಯುವ ಮುಖೇನ ವಿನಂತಿ ಮಾಡಿಕೊಂಡಿದ್ದಾರೆ.

Author

ಅಷ್ಟಕ್ಕೂ ಪತ್ರದಲ್ಲಿ ತಿಳಿಸಿರುವ ಸಂಗತಿ ಏನು? ಎಂಬುದನ್ನು ತಿಳಿಯುವುದಾದರೆ, ಈ ಹಿಂದೆ ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿರುವ ನನ್ನ ಪಠ್ಯವನ್ನು ಕೈಬಿಡಬೇಕೆಂದು ತಮಗೆ ವಿನಂತಿಸಿ ದಿನಾಂಕ 26.05.2022 ರಂದು ಪತ್ರ ಬರೆದು ಕೊರಿಯರ್ ಮುಖಾಂತರ ರವಾನಿಸಿದ್ದೆ, ಅದನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರವರಿಗೂ ಬರೆದು ಕೊರಿಯರ್ ರವಾನಿಸಿದ್ದೆ. ಆ ಪತ್ರದಲ್ಲಿ ನಾನು ಒಪ್ಪಿಗೆ ಇಲ್ಲದಿರುವುದಕ್ಕೆ ಸ್ಪಷ್ಟನೆ ನೀಡಿದ್ದೇನೆ. ಹೀಗಿದ್ದೂ ನನ್ನ ಮನವಿಯನ್ನು ತಾವು ಪರಿಗಣಿಸದೆ, ಇತ್ತೀಚಿನ ತಮ್ಮ ಹೇಳಿಕೆಯಲ್ಲಿ“ಪರಿಷ್ಕ್ರತ ಮುದ್ರಣವೇ ಜಾರಿಗೆ ಬರುತ್ತದೆ” ಎಂದಿದ್ದೀರಿ.

ಇದನ್ನೂ ಓದಿ : https://vijayatimes.com/ct-ravi-controversial-statement/

ಕ್ಷಮಿಸಿ, ನಿಮ್ಮಈ ಧೋರಣೆ ನನಗೆ ದಬ್ಬಾಳಿಕೆ ಅನ್ನಿಸಿಬಿಟ್ಟಿತು.
ಮತ್ತೂ ಹೇಳಬೇಕೆಂದರೆ, ಚತುರ್ವರ್ಣ ವಿರೋಧಿ ಬಸವಣ್ಣನವರ ಪಾಠವನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕತ್ತುಹಿಚುಕಿರುವುದು, ಕುವೆಂಪು, ಅಂಬೇಡ್ಕರ್ ಅವರನ್ನು ಗೇಲಿ ಮಾಡುವ ಮನಸ್ಥಿತಿಯ ವ್ಯಕ್ತಿಯನ್ನೇ ಪಠ್ಯಪುಸ್ತಕ ಪರಿಷ್ಕರಣೆಗೆ ಅಧ್ಯಕ್ಷನನ್ನಾಗಿಸಿರುವುದು ಹಾಗೂ ಒಂದು ಒಕ್ಕೂಟ ಸರ್ಕಾರದಲ್ಲಿಆ ಒಕ್ಕೂಟದ ಅಂಗವಾಗಿರುವ ಕರ್ನಾಟಕ ರಾಜ್ಯವು ತನಗೂ ಒಂದು ಧ್ವಜವೂ ಬೇಕು ಎಂದು ದನಿ ಎತ್ತಿದ ಸಂದರ್ಭದಲ್ಲಿ,

Letter

ಆ ಪರಿಕಲ್ಪನೆಯನ್ನು ತನ್ನ ಲಂಗೋಟಿಗೆ ಹೋಲಿಕೆ ಮಾಡಿದ ಹೀನ ಅಭಿರುಚಿಯ ವ್ಯಕ್ತಿಯನ್ನು ಮಕ್ಕಳ ಪಠ್ಯಪರಿಷ್ಕರಣೆ ಮಾಡಲು ಅಧ್ಯಕ್ಷನನ್ನಾಗಿಸಿರುವುದು ಮತ್ತು ಸಮರ್ಥಿಸುತ್ತಿರುವುದು, ಭಿನ್ನಾಭಿಪ್ರಾಯಗಳನ್ನು ಟೂಲ್ ಕಿಟ್ ಎಂದು ರಾಜಕೀಯಗೊಳಿಸಿ ಪರಾರಿಯಾಗಲು ನೋಡುವುದು, ಇವೆಲ್ಲ ಹಾಗೂ ನಾಡಿನ ಗಣ್ಯರು, ಮಠಾಧಿಪತಿಗಳು, ಲೇಖಕರು, ಪ್ರಜ್ಞಾವಂತರು ತಮ್ಮ ನೋವನ್ನು ವ್ಯಕ್ತಪಡಿಸಿ ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಿ ಎಂದು ಕೇಳಿಕೊಂಡರೂ ತಾವು ಅದನ್ನುಕಾಲು ಕಸಮಾಡಿ ಲೆಕ್ಕಿಸದಿರುವುದನ್ನು ನೋಡಿದಾಗ ಇದು ನಾಡಿನ ಕೇಡಿನ ಲಕ್ಷಣಗಳು ಎಂದೆನಿಸುತ್ತಿದೆ.

ಇದನ್ನೂ ಓದಿ : https://vijayatimes.com/sensex-nifty-rises/

ಕೊನೆಯದಾಗಿ ತಮ್ಮಲ್ಲಿ ಒಂದು ವಿನಂತಿ-ಇದು ಮುಂದುವರಿಯಬಾರದು, ದಯವಿಟ್ಟು ಮುಂದುವರಿಯಬಾರದು! ಎಂದು ಬರೆದು ರವಾನಿಸಿದ್ದಾರೆ.

Tags: AuthorDevanur MahadevKarnatakasyllabusTextbook

Related News

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌
Vijaya Time

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

May 29, 2023
ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ
Vijaya Time

ನೂತನ ಸಚಿವ ಸಂಪುಟದ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ??? ಇಲ್ಲಿದೆ ಮಾಹಿತಿ

May 29, 2023
ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ
Vijaya Time

ಅತ್ತ ಸಂಸತ್‌ ಭವನ ಉದ್ಘಾಟನೆ, ಇತ್ತ ದೇಶಕ್ಕೆ ಕೀರ್ತಿ ತಂಡ ಕುಸ್ತಿಪಟುಗಳ ಬಂಧನ: ಹಾಡುಹಗಲೇ ಪೊಲೀಸ್‌ ಗೂಂಡಾಗಿರಿ

May 29, 2023
ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ
ಪ್ರಮುಖ ಸುದ್ದಿ

ರಾಮನಗರ: ಕಾಂಗ್ರೆಸ್ ಅಭ್ಯರ್ಥಿ ಕೊಟ್ಟಿದ್ದ ಕುಕ್ಕರ್ ಸ್ಫೋಟ; ಬಾಲಕಿಗೆ ಗಂಭೀರ ಗಾಯ

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.