ಲಿವ್-ಇನ್ ಸಂಬಂಧ ಅಪಾಯಕಾರಿ ರೋಗ ಇದರ ವಿರುದ್ಧ ಕಾನೂನು ತರಬೇಕು: ಬಿಜೆಪಿ ಸಂಸದ ಆಗ್ರಹ

ಲಿವ್-ಇನ್ ಸಂಬಂಧಗಳು ‘ಅಪಾಯಕಾರಿ ರೋಗವಾಗಿದ್ದು, ಇದರ ವಿರುದ್ಧ ಕಾನೂನು (Dharambir Singh Viral Statement) ಕ್ರಮ ಜರುಗಿಸಬೇಕು ಮತ್ತು ಸಮಾಜದಿಂದ ಇದನ್ನು ನಿರ್ಮೂಲನೆ

ಮಾಡಬೇಕು ಎಂದು ಹರಿಯಾಣದ ಬಿಜೆಪಿ ಸಂಸದ ಧರಂಬೀರ್ ಸಿಂಗ್ (Live-in relationships are ‘dangerous’) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಪ್ರೇಮ ವಿವಾಹಗಳಲ್ಲಿ ವಿಚ್ಛೇದನದ ಪ್ರಮಾಣ ಹೆಚ್ಚಾಗುತ್ತಿದ್ದು, ವಧು-ವರರ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಬೇಕು” ಎಂದು ಗುರುವಾರ ಲೋಕಸಭೆ ಕಲಾಪದ ಶೂನ್ಯ ವೇಳೆಯಲ್ಲಿ

ವಿಷಯವನ್ನು ಪ್ರಸ್ತಾಪಿಸಿ ಧರಂಬೀರ್ ಸಿಂಗ್, ಆಗ್ರಹಿಸಿದ್ದಾರೆ.

ಭಾರತೀಯ ಸಂಸ್ಕೃತಿಯು ‘ವಸುಧೈವ ಕುಟುಂಬ’ಕಂ (ಜಗತ್ತು ಒಂದು ಕುಟುಂಬ) ಮತ್ತು ಸಹೋದರತ್ವಕ್ಕೆ ಹೆಸರುವಾಸಿಯಾಗಿದೆ. ನಮ್ಮ ಸಾಮಾಜಿಕ ರಚನೆಯು ಪ್ರಪಂಚದ ಇತರರಿಗಿಂತ

ಭಿನ್ನವಾಗಿದೆ. ನಮ್ಮ ವೈವಿಧ್ಯತೆಯಲ್ಲಿ ಏಕತೆಗೆ ಇಡೀ ಜಗತ್ತು ಪ್ರಭಾವಿತವಾಗಿದೆ ಹಾಗಾಗಿ ನಾನು ಈ ಅತ್ಯಂತ ಗಂಭೀರವಾದ ವಿಷಯವನ್ನು ಸರ್ಕಾರ ಮತ್ತು ಸಂಸತ್ತಿನ ಗಮನಕ್ಕೆ ತರಲು

ಬಯಸುತ್ತೇನೆ.” ಎಂದು ಭಿವಾನಿ-ಮಹೇಂದ್ರಗಢದ ಸಂಸದ ಧರಂಬೀರ್ ಸಿಂಗ್ (Dharambir Singh Viral Statement) ಹೇಳಿದ್ದಾರೆ.

ಪ್ರೇಮ ವಿವಾಹಗಳಲ್ಲಿ ವಧು-ವರರ ತಾಯಿ ಮತ್ತು ತಂದೆಯ ಒಪ್ಪಿಗೆಯನ್ನು ಕಡ್ಡಾಯಗೊಳಿಸಬೇಕೆಂದು ನನ್ನ ಸಲಹೆಯಾಗಿದ್ದು, ದೇಶದ ಹೆಚ್ಚಿನ ಭಾಗಗಳಲ್ಲಿ ಒಂದೇ ‘ಗೋತ್ರ’ದಲ್ಲಿ ವಿವಾಹಗಳು

ನಡೆಯುವುದಿಲ್ಲ. ಹಳ್ಳಿಗಳಲ್ಲಿ ಪ್ರೇಮ ವಿವಾಹಗಳ ಕಾರಣದಿಂದಾಗಿ ಸಾಕಷ್ಟು ಸಂಘರ್ಷಗಳಿಂದ ಹಲವಾರು ಕುಟುಂಬಗಳು ನಾಶವಾಗುತ್ತಿವೆ. ಆದ್ದರಿಂದ, ಎರಡೂ ಕುಟುಂಬಗಳ ಒಪ್ಪಿಗೆ ಮುಖ್ಯವಾಗಿದೆ.

ಈಗ ಹೊಸ ಕಾಯಿಲೆ ಶುರುವಾಗಿದ್ದು, ಈ ಸಾಮಾಜಿಕ ಅನಿಷ್ಟವನ್ನು “ಲಿವ್-ಇನ್ ಸಂಬಂಧ” ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಇಬ್ಬರು ವ್ಯಕ್ತಿಗಳು, ಪುರುಷ ಅಥವಾ ಮಹಿಳೆ

ವಿವಾಹವಾಗದೆ ಒಟ್ಟಿಗೆ ವಾಸಿಸುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಂತಹ ಸಂಬಂಧಗಳು ತುಂಬಾ ಸಾಮಾನ್ಯವಾಗಿದೆ. ನಮ್ಮ ಸಮಾಜದಲ್ಲಿ ಈ ರೋಗ ವೇಗವಾಗಿ ಹರಡುತ್ತಿದೆ.

ಇದರ ಪರಿಣಾಮಗಳು ಭಯಾನಕವಾಗಿವೆ.

ಇತ್ತೀಚೆಗೆ, ಶ್ರದ್ಧಾ ವಾಲ್ಕರ್ ಮತ್ತು ಅಫ್ತಾಬ್ ಪೂನಾವಾಲಾ ಪ್ರಕರಣವು ಬೆಳಕಿಗೆ ಬಂದಿತ್ತು. ಅವರಿಬ್ಬರು ಲೀವ್ ಇನ್‌ ನಲ್ಲಿ ಇದ್ದರು” ಎಂದು ಅವರು ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನು ಓದಿ: ಪಂಚರಾಜ್ಯಗಳ ಫಲಿತಾಂಶ ನಂತರ ತಣ್ಣಗಾದ್ರಾ ಸೋಮಣ್ಣ ; ಹೊಸ ದಾಳ ಉರುಳಿಸಲು ಸಜ್ಜಾದ..?!

Exit mobile version